Advertisement

ಕಡಲಾಮೆ ತಾಣವಾಗುತ್ತಿರುವ ಕೋಡಿ

10:09 PM Jan 26, 2021 | Team Udayavani |

ಕುಂದಾಪುರ: ಕೋಡಿ ಕಡಲತೀರದ ಲೈಟ್‌ಹೌಸ್‌ ಬಳಿ ಮಂಗಳವಾರ ಮತ್ತೂಮ್ಮೆ ಕಡಲಾಮೆಯ ಮೊಟ್ಟೆಗಳು ಪತ್ತೆಯಾಗಿದ್ದು ಸ್ಥಳೀಯರು ರಕ್ಷಿಸಿದ್ದಾರೆ.

Advertisement

ಈಗಾಗಲೇ ಜ. 21,   24ರಂದು ಮೊಟ್ಟೆಗಳು ದೊರೆತಿದ್ದು ಜ. 26ರಂದು ಕೂಡ ಪತ್ತೆಯಾಗಿವೆ. ಸ್ಥಳೀಯ ಮೀನು ಗಾರರಾದ ಬಾಬು ಮೊಗವೀರ ಹಾಗೂ ಗಣಪತಿ ಖಾರ್ವಿ ಅವರಿಗೆ ಬೆಳಗ್ಗೆ 6.30ರ ವೇಳೆಗೆ, ಈ ಮೊದಲು ಪತ್ತೆಯಾದ ಸ್ಥಳಕ್ಕಿಂತ 50 ಮೀ. ದೂರದಲ್ಲಿ ಮೊಟ್ಟೆಗಳು ದೊರೆತಿವೆ. ಮೊಟ್ಟೆ ಇಟ್ಟು ಹೋದ ಆಮೆ ಮೀನಿನ ಬಲೆಯೊಂದರಲ್ಲಿ ಸಿಲುಕಿದ್ದು ಅದನ್ನು ರಕ್ಷಿಸಲಾಯಿತು. ತತ್‌ಕ್ಷಣ ಅವರು ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಹಾಗೂ ಎಫ್ಎಸ್‌ಎಲ್‌ ಇಂಡಿಯಾದ ಸದಸ್ಯರಿಗೆ ಮಾಹಿತಿ ನೀಡಿದರು.

ಪತ್ತೆಯಾದ ಮೊಟ್ಟೆಗಳನ್ನು ಸಂರಕ್ಷಿಸ ಲಾಯಿತು. ಅರಣ್ಯ ಇಲಾಖೆ ಎಸಿಎಫ್ ಲೋಹಿತ್‌, ಆರ್‌ಎಫ್ಒ ಪ್ರಭಾಕರ ಕುಲಾಲ್‌, ಅರಣ್ಯ ರಕ್ಷಕ ಆನಂದ ಬಳೆಗಾರ, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್‌ನ  ಭರತ್‌ ಬಂಗೇರ, ಎಫ್ಎಸ್‌ಎಲ್‌ ಇಂಡಿಯಾದ ವೆಂಕಟೇಶ್‌ ಶೇರುಗಾರ್‌, ದಿನೇಶ್‌ ಸಾರಂಗ, ಮೀನುಗಾರರಾದ ಉದಯ ಖಾರ್ವಿ, ಸಚಿನ್‌ ಪೂಜಾರಿ, ಲಕ್ಷ್ಮಣ ಪೂಜಾರಿ, ಸಂಪತ್‌ ಪೂಜಾರಿ, ರಾಘವೇಂದ್ರ ಮೊಗವೀರ, ಸಂದೇಶ ಅಮೀನ್‌, ಲಕ್ಷ್ಮಣ ಖಾರ್ವಿ, ಅಶೋಕ್‌ ಮೊಗವೀರ, ನರಸಿಂಹ ಖಾರ್ವಿ, ಮಾಧವ ಖಾರ್ವಿ, ಸತೀಶ್‌ ಅಮೀನ್‌, ಗೋಪಾಲ ಖಾರ್ವಿ  ಮೊದಲಾದವರು ಇದ್ದರು.

ಕೋಡಿ ಕಡಲತೀರ ಕಳೆದ 78 ವಾರಗಳಿಂದ ಸತತವಾಗಿ ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್, ಎಫ್ಎಸ್‌ಎಲ್‌ ಇಂಡಿಯಾ ಹಾಗೂ ಸ್ವಯಂಸೇವಕರ ಶ್ರಮದಿಂದ ಸ್ವತ್ಛಗೊಳ್ಳುತ್ತಿದೆ. ಇದರ ಫ‌ಲಶ್ರುತಿಯಾಗಿ ಸ್ವತ್ಛವಾದ ಕಡಲತಡಿಯಲ್ಲಿ ಕಡಲಾಮೆ ಗಳು ಮೊಟ್ಟೆ ಇಡುತ್ತಿವೆ. ಅರಣ್ಯ ಇಲಾಖೆ ಈ ಕಾರ್ಯದಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದು ಸ್ಥಳೀಯವಾಗಿ ಮೊಟ್ಟೆಗಳನ್ನು ರಕ್ಷಿಸುತ್ತಿರುವವರನ್ನು ಅಭಿನಂದಿಸಿ ಪ್ರೋತ್ಸಾಹ ನೀಡುತ್ತಿದೆ. ಮಂಗಳೂರು ಡಿಸಿಪಿ ಹರಿರಾಮ್‌ ಶಂಕರ್‌ ಅವರು ಕೂಡ ಸ್ಥಳೀಯರಿಗೆ ಕರೆ ಮಾಡಿ ಅಭಿನಂದಿಸಿದ್ದಾರೆ.

ಸ್ವತ್ಛ ಕಡಲ ತೀರದಲ್ಲಿ ಮೂರು ವರ್ಷಗಳ ಅನಂತರ ಕಡಲಾಮೆಗಳು ಮೊಟ್ಟೆ ಇಡಲು ಆಗಮಿಸುತ್ತಿರುವುದು ಸಂತಸದ ವಿಚಾರವಾಗಿದ್ದು ಮೊಟ್ಟೆ ಇಟ್ಟು ಮರಳಿ ಹೋಗುವಾಗ ಬಲೆಗೆ ಸಿಲುಕಿಕೊಳ್ಳುತ್ತಿವೆ. ಆದ್ದರಿಂದ ಈ ಭಾಗದಲ್ಲಿ ಬಲೆ ಹಾಕುವಾಗ ತುಸು ಎಚ್ಚರಿಕೆಯಿಂದ ಮೀನುಗಾರಿಕೆ ಮಾಡಬೇಕೆಂದು ಎಫ್ಎಸ್‌ಎಲ್‌ ಇಂಡಿಯಾ ವಿನಂತಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next