Advertisement

ಅಜ್ಜಂಪುರದಲ್ಲಿ ಮಧ್ಯಾಹ್ನ 2 ಗಂಟೆಗೇ ವಹಿವಾಟು ಬಂದ್‌!

06:41 AM May 20, 2020 | Suhan S |

ಅಜ್ಜಂಪುರ: ಅಜ್ಜಂಪುರ ಸಮೀಪದ ತರೀಕೆರೆ ಮತ್ತು ಮೂಡಿಗೆರೆಯಲ್ಲಿ ಕೋವಿಡ್‌-19 ದೃಢಪಟ್ಟ ಹಿನ್ನೆಲೆಯಲ್ಲಿ ಅಜ್ಜಂಪುರದ ವರ್ತಕರು ಮದ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯವಹಾರ ನಡೆಸುತ್ತಿದ್ದಾರೆ.

Advertisement

ಹತ್ತಿರದ ತರೀಕೆರೆ ಹಾಗೂ ಜಿಲ್ಲೆಯ ಮೂಡಿಗೆರೆಯಲ್ಲಿ ಕೋವಿಡ್ ಪ್ರಕರಣ ದೃಢಪಟ್ಟಿದೆ. ಕೋವಿಡ್ ಹರಡದಂತೆ ಎಚ್ಚರಿಕೆ ವಹಿಸಬೇಕಿದೆ. ಮುಂಜಾಗ್ರತಾ ಕ್ರಮವಾಗಿ ಮಧ್ಯಾಹ್ನದವರೆಗೆ ಮಾತ್ರ ವ್ಯವಹಾರ ನಡೆಸುವಂತೆ ತಹಶೀಲ್ದಾರ್‌ ಮತ್ತು ಪಿಎಸ್‌ಐ ಸಲಹೆ ನೀಡಿದ್ದರು. ಇದಕ್ಕೆ ಸಂಘ ಬೆಂಬಲಿಸಿದೆ. ಗ್ರಾಹಕರು ಸಹಕರಿಸಬೇಕು ಎಂದು ತಾಲೂಕು ವರ್ತಕರ ಸಂಘ ಅಧ್ಯಕ್ಷ ತ್ಯಾಗರಾಜ್‌ ಮನವಿ ಮಾಡಿದ್ದಾರೆ. ಗ್ರೀನ್‌ ಜೋನ್‌ ನಲ್ಲಿದ್ದ ಜಿಲ್ಲೆಗೂ ಕೊರೊನಾ ವೈರಸ್‌ ಕಾಲಿಟ್ಟಿದೆ. ಇದು ಹೆಚ್ಚಿನ ಜನಕ್ಕೆ ಹರಡದಂತೆ ನೋಡಿಕೊಳ್ಳಬೇಕಿದೆ. ಜನರ ಅನಗತ್ಯ ಓಡಾಟಕ್ಕೆ ತಡೆಯೊಡ್ಡಬೇಕಿದೆ. ಇದಕ್ಕೆ ಮಧ್ಯಾಹ್ನದ ಬಳಿಕ ಅಂಗಡಿ ಮುಚ್ಚಿ, ವರ್ತಕರು ಸಹಕಾರ ನೀಡಿದ್ದಾರೆ ಎಂದು ಪಿಎಸ್‌ಐ ಬಸವರಾಜು ತಿಳಿಸಿದ್ದಾರೆ.

ಮದ್ಯಾಹ್ನದವರೆಗೂ ವ್ಯಾಪಾರ-ವ್ಯವಹಾರಕ್ಕೆ ತೊಡಗುವುದರಿಂದ ವರ್ತಕರು-ಗ್ರಾಹಕರಿಗೆ ತೊಂದರೆ ಆಗುವುದಿಲ್ಲ. ಇನ್ನು ಅಗತ್ಯ ಸೇವೆಗಳಾದ ಆಸ ತ್ರೆ, ಔಷಧ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಕ್ಕೆ ಕ್ರಮ ವಹಿಸಲಾಗಿದೆ ಎಂದು ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next