Advertisement

ತಿರುವಿನಲ್ಲಿ ತಿರುಗಿ ನೋಡಿ ಕಣ್ಣು ಮಿಟುಕಿಸಿದಳಲ್ಲ…

07:40 PM Nov 18, 2019 | mahesh |

ನನ್ನೆಲ್ಲಾ ಶಕ್ತಿಗಳನ್ನು ಒಂದುಗೂಡಿಸಿಕೊಂಡೆ. ನನ್ನ ಪ್ರೀತಿಯ ಪಾಲಿಗೆ ಇಂದು ಈ ಕ್ಷಣವೇ ಅಚ್ಚೆ ದಿನ್‌ ಆಗಬಹುದೆಂದು ಎಣಿಸಿದೆ. ಜೊತೆಯಲ್ಲಿ ಏಳು ಹೆಜ್ಜೆ, ಒಂದು ಮಾತು.. ಒಲವಿನ ಹಣೆಬರಹ ನಿರ್ಧರಿತ! ಯಾಕೋ, ಬೇಕುಬೇಕು ಅಂತಲೇ ನನ್ನ ಕಡೆ ನೋಡದೆ ಗದ್ದೆಯ ಕಡೆ, ದೂರದ ದಾರಿಯ ತಿರುವಿನ ಕಡೆ, ಮರದ ಮೇಲೆ ಕೂತಿದ್ದ ಬೆಳ್ಳಕ್ಕಿಗಳ ಕಡೆ ನೋಡುತ್ತಿದ್ದಳು. ಅದೊಂಥರಾ ತುಸು ಚಂದದ ಜಂಬ. ಅವಳು ಹತ್ತಿರವಾದಷ್ಟೇ ವೇಗದಲ್ಲಿ ನನ್ನ ಬಾಯಿ ಕೂಡ ಒಣಗುತ್ತಿತ್ತು.

Advertisement

ಹಿಂದಿನ ದಿನ, ನನ್ನ ಕನಸುಗಳಿಗೆ ಸಮನಾಗಿಯೇ ಮಳೆ ಸುರಿದಿತ್ತು. ಮಧ್ಯರಾತ್ರಿಯಲ್ಲಿ ಧಡಕ್ಕನೆ ಎಚ್ಚರಾದ ಸದ್ದಿಗೆ ಎದ್ದು ಕಿಟಕಿಯಲ್ಲಿ ಇಣುಕಿದೆ. ಸಮಾಧಾನಿಸಲು ಚಂದ್ರನಿರಲಿಲ್ಲ. ಬಹುತೇಕ ಸಂದರ್ಭಗಳಲ್ಲಿ ಅವನು ನನಗೆ ಹೀಗೆ ಕೈಕೊಟ್ಟಿದ್ದೇ ಜಾಸ್ತಿ. ಜಗತ್ತು ಮೌನದಲ್ಲಿತ್ತು; ನನ್ನ ಹೊರತಾಗಿ! ಜೀರುಂಡೆಯೊಂದು ಯಾಕೋ ಹಠ ಹಿಡಿದಂತೆ ಕೂಗುತಿತ್ತು. ನಾನೇನು ಆ ದನಿಯಲ್ಲಿ ವಿರಹವನ್ನು ಗುರುತಿಸದಷ್ಟು ದಡ್ಡನಲ್ಲ. ಆದರೆ, ನನ್ನ ವಿರಹವನ್ನು, ಆಸೆಯನ್ನು, ಪ್ರೀತಿಯನ್ನು ಗುರುತಿಸಲಾಗದಷ್ಟು ದಡ್ಡತನ ಏಕೆ ಈ ಜಗತ್ತಿಗೆ? ಈ ಕಳ್ಳ ಚಂದ್ರ, ಸುಳ್ಳೇ ಸುರಿಯುವ ಮಳೆ, ಸೋಗಲಾಡಿ ತಂಗಾಳಿ, ಶಾಲಿವನದ ಹಸಿರು ಇವಕ್ಕೆಲ್ಲಾ ಏನಾಗಿದೆ? ಕೋಗಿಲೆಗಳ, ನವಿಲುಗಳ, ಗಿಳಿಗಳ ಅಷ್ಟೇ ಏಕೆ, ಚಿಟ್ಟೆಗಳಿಗೂ ಒಂದು ಪ್ರೀತಿ ಹುಟ್ಟುವಂತೆ ಹರಸಿ, ಬೆರೆಸಿ ಹೋಗುವ ಇವುಗಳಿಗೆ ನನ್ನ ಮೇಲೇಕೆ ತಾತ್ಸಾರ?

ಮರುದಿನದ ನಸುಕಿಗೆ ಹಾಸ್ಟೆಲ್‌ ನಿಂದ ಚಿಮ್ಮಿ ರಸ್ತೆಗೆ ಬಿದ್ದೆ. ಒಂಟಿ ನಾನು. ಪಕ್ಕದಲ್ಲಿ ಗದ್ದೆಯ ದಿವ್ಯ ಹಸಿರಿನ ಗಂಭೀರವಾದ ಮೌನ.ಅದರ ನಡುವೆಯೊಂದು ಕೆಂಪನೆಯ ಹಾದಿ. ಅದರ ಮೇಲಷ್ಟೇ ಆಕೆ ಬರುವುದು. ಎರಡು ನೋಟುಬುಕ್ಕು ಎದೆಯೊಳಗಿನ ಹೃದಯಕ್ಕೆ ಕಾವಲು, ಮೈಗೆ ಲಂಗ ದಾವಣಿಯ ಸೊಬಗು. ನಡೆದರೆ ಊರ ದೇವರ ತೇರು, ಸದಾ ಅವಳ ಸುತ್ತ ಒಂದು ಪ್ರೀತಿಯ ಘಮಲು. ವಾಚಿನ ಮುಳ್ಳುಗಳು ಒಂಬತ್ತಕ್ಕೆ ಬಂದು ನಿಂತಾಗ, ಅಲ್ಲಿ ಅವಳು ಹಾದಿಯ ಮೇಲೆ ಕಂಡಳು. ಇವತ್ತು ನನ್ನ ಪರವಾಗಿಲ್ಲದ ಜಗತ್ತಿಗೆ ಒಂದು ಧಿಕ್ಕಾರ ಕೂಗಿದೆ. ನನ್ನ ಪ್ರೀತಿಯನ್ನು ನಾನೇ ಗೆಲ್ಲಿಸಿಕೊಳ್ಳಲು ಹೊರಟೆ. ಬೊಚ್ಚು ಬಾಯಿಯ ಭತ್ತದ ತೆನೆಗಳು ಅವಳ ಕಡೆಯೇ ನೋಡುತ್ತಿದ್ದವು. ನೆಪಕ್ಕೆ ಅವಳ ಜೊತೆಗೆ ಹೀಗೆ ಸುಮ್ಮನೆ ಏಳು ಹೆಜ್ಜೆ ಹಾಕಿ ಎಡಗಿವಿಯಲ್ಲಿ, “ಹುಡುಗಿ, ಪ್ರೀತಿಯ ಗೂಡು ಕಟ್ಟಲು ಎಸಳುಗಳು ಬೇಕಿವೆ’ ಎಂದು ಹಾರೋಣ ಒಟ್ಟಿಗೆ? ಅಂತ ಹೇಳಿ ಬದುಕಿನ ಅಷ್ಟೂ ಭಾರವನ್ನು ಕಳೆದುಕೊಂಡು ಹಗುರಾಗ ಬೇಕು ಅಂದುಕೊಂಡೆ. ಅವಳು ಹತ್ತಿರವಾದಂತೆ ನನಗಿಂತ ನನ್ನ ಬೆವರೇ ಆಚೆ ಬಂದು ಬಂದು, ಅವಳನ್ನು ನೋಡಲು ಇಣುಕುತ್ತಿತ್ತು.

ನನ್ನೆಲ್ಲಾ ಶಕ್ತಿಗಳನ್ನು ಒಂದುಗೂಡಿಸಿಕೊಂಡೆ. ನನ್ನ ಪ್ರೀತಿಯ ಪಾಲಿಗೆ ಇಂದು ಈ ಕ್ಷಣವೇ ಅಚ್ಚೆ ದಿನ್‌ ಆಗಬಹುದೆಂದು ಎಣಿಸಿದೆ. ಜೊತೆಯಲ್ಲಿ ಏಳು ಹೆಜ್ಜೆ, ಒಂದು ಮಾತು.. ಒಲವಿನ ಹಣೆಬರಹ ನಿರ್ಧರಿತ! ಯಾಕೋ ಬೇಕುಬೇಕು ಅಂತಲೇ ನನ್ನ ಕಡೆ ನೋಡದೆ ಗದ್ದೆ ಕಡೆ, ದೂರದ ದಾರಿಯ ತಿರುವಿನ ಕಡೆ, ಮರದ ಮೇಲೆ ಕೂತಿದ್ದ ಬೆಳ್ಳಕ್ಕಿಗಳ ಕಡೆ ನೋಡುತ್ತಿದ್ದಳು. ಅದೊಂಥರಾ ತುಸು ಚಂದದ ಜಂಬ. ಅವಳು ಹತ್ತಿರವಾದಷ್ಟೇ ವೇಗದಲ್ಲಿ ನನ್ನ ಬಾಯಿ ಕೂಡ ಒಣಗುತ್ತಿತ್ತು. ನಾನು ನಿಂತಲ್ಲೇ ನಿಂತಿದ್ದೆ. ನನಗೆ ಯಾವ ಗರ ಬಡಿದಿತ್ತೂ ಏನೋ? ಎದುರಿಗೆ ಹಾದು ಹೋಗುತ್ತಿದ್ದರೆ ಸುಮ್ಮನೆ ಅಮಾಯಕನಂತೆ ನಿಂತಿದ್ದೆ. ಬಿಡು, ಇದು ಮತ್ತೂಂದು ಸೋಲಾಯಿತು ಅಂದುಕೊಂಡೆ. ನೂರಿನ್ನೂರು ಮೀಟರ್‌ ದೂರದ ತಿರುವಿನ ಬಳಿ ಹೋದವಳು ತಿರುಗಿ ನೋಡಿ ಮುಂಗುರುಳನ್ನು ಕಿವಿ ಮೇಲೆ ಗಪ್ಪನೆ ಎಸೆದುಕೊಂಡು ಕಣ್ಣು ಮಿಟುಕಿಸಬೇಕೆ? ಮರದ ಮೇಲಿದ್ದ ಜೋಡಿ ಬೆಳ್ಳಕ್ಕಿಗಳು ಮುಖ ಮುಖ ನೋಡಿಕೊಂಡವು..

ಸದಾಶಿವ್‌ ಸೊರಟೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next