Advertisement
ಹಾಲಿಗೆ ಅರಿಶಿನ ಹಾಕಿ ಕುಡಿದರೆ ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ, ದೇಹದ ನೋವನ್ನು ನಿವಾರಿಸುತ್ತದೆ, ಗಾಯ ಗುಣಮುಖವಾಗಲು ಸಹಾಯ ಮಾಡುತ್ತದೆ. ಆದರೆ ಈ ಅರಿಶಿನದ ಹಾಲಿನ ಸೇವನೆ ಎಲ್ಲರಿಗೂ ಒಳ್ಳೆಯದಲ್ಲ. ಕೆಲವೊಂದು ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಈ ಅರಿಶಿನದ ಹಾಲನ್ನು ಸೇವಿಸಬಾರದು ಎಂದು ತಜ್ಞರು ಹೇಳುತ್ತಾರೆ.
Related Articles
Advertisement
ವ್ಯಕ್ತಿಗೆ ಕಿಡ್ನಿ ಸಂಬಂಧಿತ ಯಾವುದೇ ಸಮಸ್ಯೆ ಇದ್ದಲ್ಲಿ ಅಂತಹ ಪರಿಸ್ಥಿತಿಯಲ್ಲಿ ಅರಿಶಿನದ ಹಾಲಿನ ಸೇವನೆಯು ಆರೋಗ್ಯಕ್ಕೆ ಹಾನಿಯಾಗಬಹುದು.
ವಿಶೇಷವಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದಾಗ, ವಾಸ್ತವವಾಗಿ ಅರಿಶಿನವು ಆಕ್ಸಲೇಟ್ ಅನ್ನು ಹೊಂದಿರುತ್ತದೆ, ಇದು ಕಿಡ್ನಿಸ್ಟೋನ್ ಸಮಸ್ಯೆಯನ್ನು ಪ್ರಚೋದಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೂತ್ರಪಿಂಡದ ಸಮಸ್ಯೆಯ ಸಮಯದಲ್ಲಿ ಹಾಲಿಗೆ ಅರಿಶಿನ ಸೇರಿಸಿ ಕುಡಿಯಲೇ ಬಾರದು.
ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ
ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆ ಇರುವವರು ಅಂದರೆ ಮಲಬದ್ಧತೆ ಸಮಸ್ಯೆ, ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬುವುದು, ಎದೆಯುರಿ ಅಥವಾ ಆಸಿಡ್ ರಿಫ್ಲಕ್ಸ್, ಅಜೀರ್ಣ ಇತ್ಯಾದಿ ಸಮಸ್ಯೆಯನ್ನು ಹೊಂದಿರುವ ಜನರು ಅರಿಶಿನ ಹಾಲನ್ನು ಸೇವಿಸಬಾರದು.
ಕಬ್ಬಿಣದಂಶದ ಕೊರತೆ ಇರುವವರು
ನಿಮ್ಮ ದೇಹದಲ್ಲಿ ಕಬ್ಬಿಣದಂಶದ ಕೊರತೆಯಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ಅರಿಶಿನ ಮಿಶ್ರಿತ ಹಾಲನ್ನು ಸೇವಿಸಬಾರದು. ಇದು ನಿಮ್ಮ ಸಮಸ್ಯೆಯನ್ನು ಇನ್ನಷ್ಟು ಉಲ್ಭಣಗೊಳಿಸಬಹುದು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಮತ್ತು ನಂತರ ರಕ್ತಸ್ರಾವದ ಅಪಾಯದ ಕಾರಣದಿಂದ ನಿಗದಿತ ಶಸ್ತ್ರಚಿಕಿತ್ಸೆಗೆ ಎರಡು ವಾರಗಳ ಮೊದಲು ಅರಿಶಿನವನ್ನು ನಿಲ್ಲಿಸಬೇಕು. ಅರಿಶಿನವು ರಕ್ತ ಹೆಪ್ಪುಗಟ್ಟುವಿಕೆಯ ರಚನೆಯನ್ನು ವಿಳಂಬಗೊಳಿಸುತ್ತದೆ.