Advertisement

ಟರ್ಕಿಸ್‌ ವಿಶ್ವಕಪ್‌ ಹೀರೊ ರೆಕ್‌ಬೆರ್‌ ಆಸ್ಪತ್ರೆಗೆ ದಾಖಲು

09:11 AM Mar 30, 2020 | Sriram |

ಅಂಕರಾ (ಟರ್ಕಿ): ಟರ್ಕಿಯ ರಾಷ್ಟ್ರೀಯ ತಂಡದ ಮತ್ತು ಬಾರ್ಸಲೋನಾ ಕ್ಲಬ್‌ನ ಮಾಜಿ ಗೋಲ್‌ಕೀಪರ್‌ ರುಸ್ತು ರೆಕ್‌ಬೆರ್‌ ಅವರಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಪತ್ನಿ ತಿಳಿಸಿದ್ದಾರೆ.

Advertisement

2002ರ ಫ‌ುಟ್‌ಬಾಲ್‌ ವಿಶ್ವಕಪ್‌ನಲ್ಲಿ ಅಸಾಮಾನ್ಯ ನಿರ್ವಹಣೆ ನೀಡಿದ್ದ ರೆಕ್‌ಬೆರ್‌ ಅವರು ತಂಡವನ್ನು ಸೆಮಿಫೈನಲ್‌ ತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತಿಮವಾಗಿ ತಂಡ ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿತ್ತು. ಇದು ವಿಶ್ವಕಪ್‌ನಲ್ಲಿ ಟಿರ್ಕಿನ ಮಹೋನ್ನತ ಸಾಧನೆಯಾಗಿದೆ.

ಎಲ್ಲರೂ ಆರೋಗ್ಯವಾಗಿರುವಾಗ ರುಸ್ತು ಅವರಿಗೆ ಹಠಾತ್‌ ಸೋಂಕಿನ ಲಕ್ಷಣ ಗೋಚರಿಸಿದಾಗ ಆಘಾತವಾಯಿತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದೊಂದು ಕಠಿನ ಸಮಯ ಎಂದು ಅವರ ಪತ್ನಿ ಇಸಿಲ್‌ ರೆಕೆಬೆರ್‌ ಹೇಳಿದ್ದಾರೆ. ನಾವೆಲ್ಲರೂ ಪರೀಕ್ಷೆಗೆ ಒಳಗಾಗಿದ್ದು ನಾನು ಸಹಿತ ಪುತ್ರ ಮತ್ತು ಪುತ್ರಿಯ ವರದಿಯಲ್ಲಿ ನೆಗೆಟಿವ್‌ ಬಂದಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next