ಅಂಕಾರ: ಟರ್ಕಿಯ ರಾಜಧಾನಿ ಅಂಕಾರಾ ಬಳಿಯ ಟರ್ಕಿಶ್ ಏರೋಸ್ಪೇಸ್ ಇಂಡಸ್ಟ್ರೀಸ್ (TUSAS) ನ ಪ್ರಧಾನ ಕಛೇರಿ ಬಳಿ ಬುಧವಾರ(ಅ.೨೩) ಸ್ಫೋಟ ಸಂಭವಿಸಿದ್ದು ಇದರ ಬೆನ್ನಿಗೆ ನಡೆದ ಗುಂಡಿನ ದಾಳಿಯಲ್ಲಿ ಮೃತ ಪಟ್ಟು ಹಲವರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿರುವುದಾಗಿ ವರದಿಯಾಗಿದೆ.
ದೇಶದ ಆಂತರಿಕ ಸಚಿವ, ಅಲಿ ಯೆರ್ಲಿಕಾಯಾ, ಘಟನೆಯಿಂದ ಸಾವುಗಳು ಮತ್ತು ಗಾಯಗಳೆರಡೂ ಸಂಭವಿಸಿವೆ ಎಂದು ದೃಢಪಡಿಸಿದರು, ಅವರು ಎಕ್ಸ್ ಮೇಲೆ “ಭಯೋತ್ಪಾದಕ ದಾಳಿ” ಎಂದು ವಿವರಿಸಿದರು.
ಘಟನೆ ಕುರಿತು ಮಾಹಿತಿ ನೀಡಿದ ಟರ್ಕಿಯ ಆಂತರಿಕ ಸಚಿವ, ಅಲಿ ಯೆರ್ಲಿಕಾಯಾ, ಇದೊಂದು ಭಯೋತ್ಪಾದಕ ದಾಳಿ ಎಂದು ಹೇಳಿಕೊಂಡಿದ್ದಾರೆ ಅಲ್ಲದೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಮೂವರು ಜೀವ ಕಳೆದುಕೊಂಡಿದ್ದಾರೆ ಜೊತೆಗೆ ನಡೆದ ಸ್ಫೋಟದಲ್ಲಿ ಕೆಲವು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸ್ಥಳೀಯ ಮಾಧ್ಯಮಗಳು ಘಟನೆಯ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ದೃಶ್ಯದಲ್ಲಿ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸುತ್ತಿರುವುದು ಕಾಣಬಹುದು.
BREAKING: TUSAS Aerospace Industries in Ankara, Turkey has been attacked, they are now holding hostages at the headquarters. pic.twitter.com/sHE1VTRXho
— Sulaiman Ahmed (@ShaykhSulaiman) October 23, 2024