Advertisement

ಟರ್ಕಿ ಭೂಕಂಪ: ರಕ್ಷಣಾ ಕಾರ್ಯಾಚರಣೆ ಇಂದು ಕೊನೆಗೊಳ್ಳುವ ಸಾಧ್ಯತೆ

04:55 PM Feb 19, 2023 | Team Udayavani |

ಅಂಕಾರಾ: ಫೆ.6ರಂದು ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ್ದ 7.8 ತೀವ್ರತೆಯ ಪ್ರಭಲ ಭೂಕಂಪದಲ್ಲಿ ಸುಮಾರು 45,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಲಕ್ಷಾಂತರ ಮಂದಿ ಸೂರು ಕಳೆದುಕೊಂಡಿದ್ಧಾರೆ ಎಂದು ಅಂದಾಜಿಸಲಾಗಿದೆ.

Advertisement

ಸುಮಾರು 12 ದಿನಗಳ ಕಾಲ ಟರ್ಕಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಸುಮಾರು ಭಾಗಗಳಲ್ಲಿ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಭಾನುವಾರ ರಾತ್ರೆಯ ವೇಳೆಗೆ ದೇಶದ ಎಲ್ಲಾ ಭಾಗಗಳಲ್ಲೂ ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆಯಿದೆ ಎಂದು ಟರ್ಕಿಯ ವಿಪತ್ತು ಮತ್ತು ತುರ್ತು ನಿರ್ವಹಣಾ ತಂಡ ಹೇಳಿದೆ.

ಆಪರೇಷನ್‌ ದೋಸ್ತ್‌ ಹೆಸರಲ್ಲಿ ಟರ್ಕಿಗೆ ತೆರಳಿದ್ದ 47 ಮಂದಿ ಯೋಧರು, ಏರಡು ಶ್ವಾನಗಳನ್ನೊಳಗೊಂಡ ಭಾರತದ ಎನ್‌ಡಿಆರ್‌ಎಫ್‌ 10 ದಿನಗಳ ರಕ್ಷಣಾ ಕಾರ್ಯಾಚರಣೆ ಬಳಿಕ ಈಗಾಗಲೇ ಭಾರತಕ್ಕೆ ಹಿಂದಿರುಗಿದೆ.

ಭೂಕಂಪ ಪೀಡಿತ ಟರ್ಕಿ ಮತ್ತು ಸಿರಿಯಾಗೆ ವಿಶ್ವ ಸಂಸ್ಥೆ ದೊಡ್ಡ ಮಟ್ಟದ ಆರ್ಥಿಕ ಸಹಾಯವನ್ನು ಚಾಚಿದೆಯಾದರೂ ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಟರ್ಕಿ ಮತ್ತು ಸಿರಿಯಾ ದೇಶಗಳಲ್ಲಿ ಸುಮಾರು 26 ಮಿಲಿಯನ್‌ ಜನರಿಗೆ ವಿವಿಧ ರೀತಿಯ ಸಹಾಯ ಬೇಕಾಗಿದೆ ಎಂದು ಹೇಳಿತ್ತು.

ಆಶ್ಚರ್ಯಕರ ಸಂಗತಿಯೆಂದರೆ, ಭೂಕಂಪವಾದ ಹನ್ನೆರಡು ದಿನಗಳ ಬಳಿಕವೂ ಅಂಟಾಕ್ಯಾ ಪ್ರದೇಶದಲ್ಲಿ ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ ಐದು ಮಂದಿಯ ಸಿರಿಯನ್‌ ಕುಟುಂಬವೊಂದನ್ನು ಕಿರ್ಗಿಸ್ಥಾನದ ರಕ್ಷಣಾ ತಂಡ ರಕ್ಷಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next