Advertisement
ವಿಚಿತ್ರ ಲಾಕ್ಡೌನ್ಟರ್ಕಿಯ ಲಾಕ್‌ಡೌನ್ ಎಲ್ಲ ದೇಶಗಳಂತಿರಲಿಲ್ಲ. ಆದರೂ ಈ ದೇಶ ಕೋವಿಡ್ ವಿಪತ್ತನ್ನು ಸಮರ್ಥವಾಗಿ ನಿಭಾಯಿಸಿದೆ. ಟೆಸ್ಟಿಂಗ್, ಟ್ರೇಸಿಂಗ್, ಐಸೊಲೇಶನ್ ಆ್ಯಂಡ್ ಮೂವ್‌ಮೆಂಟ್ ಟ್ರೇಸಿಂಗ್ ಎಂಬ ನಾಲ್ಕು ವಿಧಾನಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಕೆಲವೇ ದೇಶಗಳ ಸಾಲಿಗೆ ಟರ್ಕಿಯೂ ಸೇರುತ್ತದೆ. ಇದೇ ಯಶಸ್ಸಿನ ಹಿಂದಿನ ರಹಸ್ಯ ಎಂದು ವಿಶ್ಲೇಷಿಸಿದ್ದಾರೆ ಕೆಂಟ್ ವಿವಿಯ ವೈರಾಣುಶಾಸ್ತ್ರ ವಿಭಾಗದ ಉಪನ್ಯಾಸಕ ಡಾ| ಜೆರೆಮಿ ರೋಸ್‌ಮ್ಯಾನ್. ವೈರಸ್ ಅನ್ನು ಇಷ್ಟು ಪರಿಣಾಮಕಾರಿಯಾಗಿ ನಿಭಾಯಿಸಿರುವುದು ಬೆರಳೆಣಿಕೆಯ ದೇಶಗಳು ಮಾತ್ರ.
ಟರ್ಕಿಯಲ್ಲಿ ಇಸ್ತಾಂಬುಲ್ ನಗರ ಕೋವಿಡ್‌ನ ಕೇಂದ್ರ ಬಿಂದುವಾಗಿತ್ತು. ಕೋವಿಡ್‌ನಿಂದಾಗಿ ಈ ನಗರ ತನ್ನ ಲಯವನ್ನು ಕಳೆದುಕೊಂಡಿದೆ. ಈಗ ಇದು ಎದೆಬಡಿತವಿಲ್ಲದ ದೇಹದಂತಿದೆ. ಆದರೂ ವೈರಸ್ ಪ್ರಸರಣ ಮಾತ್ರ ನಿಯಂತ್ರಣದಲ್ಲಿದೆ.
Related Articles
ಟರ್ಕಿಯಲ್ಲಿ ವೈರಸ್ ಪ್ರಸರಣ ನಿಯಂತ್ರಣದಲ್ಲಿದೆ. ಆದರೆ ಅಪಾಯದಿಂದ ಪೂರ್ತಿಯಾಗಿ ಪಾರಾಗಿಲ್ಲ. ದೇಶವನ್ನು ಈ ಮಹಾ ವಿಪತ್ತಿನಿಂದ ಪಾರು ಮಾಡಿದ ಶ್ರೇಯಸ್ಸು ಡಾ| ಮೆಲೆಕ್ ನೂರ್ ಅಸ್ಲಾನ್ ಅವರಿಗೆ ಸಲ್ಲಬೇಕು. ಇವರು ಸಾರ್ವಜನಿಕ ಆರೋಗ್ಯ ಇಲಾಖೆಯ ನಿರ್ದೇಶಕಿ. ಸಂಪರ್ಕಿತರ ಪತ್ತೆಗಾಗಿ ಡಾ | ಮೆಲೆಕ್ 6,000 ತಂಡಗಳನ್ನು ಜಿಲ್ಲಾ ಮಟ್ಟಗಳಲ್ಲಿ ರಚಿಸಿದ್ದಾರೆ. ಈ ತಂಡಗಳ ಶ್ರಮದಿಂದಾಗಿಯೇ ಸೋಂಕಿತರು ಕ್ಷಿಪ್ರವಾಗಿ ಪತ್ತೆಯಾಗುತ್ತಿದ್ದಾರೆ. 24 ತಾಸುಗಳಲ್ಲಿ ಪರೀಕ್ಷಾ ವರದಿ ಸಿಗುತ್ತದೆ. ಈ ವಿಚಾರದಲ್ಲಿ ಅಮೆರಿಕ ಮತ್ತು ಯುರೋಪ್‌ಗಿಂತಲೂ ಟರ್ಕಿ ಎಷ್ಟೋ ಮುಂದಿದೆ.
Advertisement
ನಾವು ಇತರ ದೇಶಗಳ ವಿದ್ಯಮಾನಗಳನ್ನು ಗಮನಿಸುತ್ತಿದ್ದೆವು. ಆರಂಭದಲ್ಲಿ ವೈರಸ್‌ನ ಅಬ್ಬರ ನೋಡಿದಾಗ ನಮಗೂ ಭಯವಾಗಿತ್ತು.
ಆದರೆ ಟರ್ಕಿ ನಾವು ಆಲೋಚಿಸಿದ್ದಕ್ಕಿಂತಲೂ ಕ್ಷಿಪ್ರವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಗೆ ಪ್ರತಿಸ್ಪಂದಿಸಿತು. ಉಳಿದ ದೇಶಗಳು ಹೈಡ್ರೋಕ್ಸಿಕ್ಲೊರೊಕ್ವಿನ್ ಬಗ್ಗೆ ಚರ್ಚೆ ನಡೆಸುತ್ತಿರುವಾಗಲೇ ಟರ್ಕಿಯಲ್ಲಿ ಅದರ ಬಳಕೆ ಆರಂಭವಾಗಿತ್ತು ಎಂದು ತನ್ನ ದೇಶ ಕೋವಿಡ್ ಗೆದ್ದ ರೀತಿಯನ್ನು ಡಾ| ಮೆಲೆಕ್ ವಿವರಿಸಿದ್ದಾರೆ.