Advertisement
ಉದಯವಾಣಿಗೆ ಜತೆಗೆ ದೂರವಾಣಿ ಮೂಲಕ ಮಾತನಾಡಿದ ಸತ್ಯನಾರಾಯಣ್ ಅವರು, “ಈ ಹಿಂದೆ 2011ರಲ್ಲಿ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣಕ್ಕೆ ಟರ್ಫ್ ಅಳವಡಿಕೆ ಮಾಡಲಾಗಿತ್ತು, ಅಂದು ಫಿಫಾ ವತಿಯಿಂದಲೇ ಟರ್ಫ್ ಅಳವಡಿಕೆಯಾಗಿತ್ತು, ಆದರೆ ಈ ಸಲ ಕರ್ನಾಟಕ ಫುಟ್‌ಬಾಲ್ ಸಂಸ್ಥೆ ತನ್ನದೇ ಹಣದಲ್ಲಿ ಕ್ರೀಡಾಂಗಣಕ್ಕೆ ಟರ್ಫ್ ಖರೀದಿ ಮಾಡಿದೆ. ಒಟ್ಟಾರೆ 1.75 ಕೋಟಿ ರೂ. ಟರ್ಫ್ ಖರೀದಿಗೆ ವೆಚ್ಚವಾಗಿದೆ, ಕೊರೊನಾದಿಂದಾಗಿ ಲಾಕ್‌ಡೌನ್ ಆಗುವ ಎರಡು ದಿನಕ್ಕೆ ಮೊದಲು ಇಟಲಿಯಿಂದ ಬೆಂಗಳೂರಿಗೆ ಟರ್ಫ್ ಬಂದಿತ್ತು, ಅದು ನಮ್ಮ ಅದೃಷ್ಟ, ಸ್ವಲ್ಪ ತಡವಾಗಿದ್ದರೂ ಇಂದು ಕಾಮಗಾರಿ ಕೆಲಸವನ್ನು ಇಷ್ಟು ವೇಗವಾಗಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ’ ಎಂದು ತಿಳಿಸಿದರು.
ನೈಸರ್ಗಿಕವಾಗಿರುವ ಹುಲ್ಲಿನಿಂದ ಮಾಡಲ್ಪಟ್ಟ ಹೊದಿಕೆಯನ್ನು ಕ್ರೀಡಾಂಗಣಕ್ಕೆ ಅಳವಡಿಸಿದರೆ ಅದರಲ್ಲಿ ದಿನವೊಂದಕ್ಕೆ ಹೆಚ್ಚು ಪಂದ್ಯಗಳನ್ನು ಆಡಿಸಲು ಸಾಧ್ಯವಿಲ್ಲ, ದಿನಕ್ಕೆ 1 ಪಂದ್ಯ ಮಾತ್ರ ಆಡಿಸಬಹುದು, ಬಳಿಕ ನೀರು ಹಾಕಿ ಹುಲ್ಲಿನ ಹೊದಿಕೆಯನ್ನು ನಿರ್ವಹಣೆ ಮಾಡಬೇಕಾಗುತ್ತದೆ, ಇದಕ್ಕೆಲ್ಲ ಹೆಚ್ಚು ಸಮಯ ಹಿಡಿಯುತ್ತದೆ, ಆದರೆ ಕೃತಕ ಹುಲ್ಲಿನ ಹಾಸಿನಲ್ಲಿ ಹಾಗಲ್ಲ, ದಿನವೊಂದಕ್ಕೆ 10 ಪಂದ್ಯಗಳನ್ನು ಬೇಕಾದರೂ ಆಡಿಸಬಹುದು, ಇದರಿಂದ ಕೃತಕ ಹುಲ್ಲು ಹಾಸಿಗೆ ಹಾನಿಯಾಗುವುದಿಲ್ಲ, ಕರ್ನಾ ಟಕ ಫುಟ್‌ಬಾಲ್ ಸಂಸ್ಥೆ ಅಡಿಯಲ್ಲಿ 150ಕ್ಕೂ ಹೆಚ್ಚು ಕ್ಲಬ್ ತಂಡಗಳಿವೆ, ಪ್ರತಿ ತಂಡಗಳಿಗೂ ಆಡುವ ಅವಕಾಶ ಕಲ್ಪಿಸಬೇಕಾಗು ತ್ತದೆ, ಹೀಗಾಗಿ ಕೃತಕ ಹುಲ್ಲಿನಿಂದ ಮಾಡಲ್ಪಟ್ಟ ಹೊದಿಕೆಯನ್ನು ಕ್ರೀಡಾಂಗಣಕ್ಕೆ ಹಾಕುವುದರಿಂದ ನಿರ್ವಹಣೆಯೂ ಕಡಿಮೆ.