Advertisement

ಉತ್ತರ ಕೊರಿಯಾದ 6ನೇ ಅಣುಬಾಂಬ್ ಪರೀಕ್ಷೆಗೆ 200 ಮಂದಿ ಬಲಿ?

05:55 PM Oct 31, 2017 | Team Udayavani |

ಟೋಕಿಯೊ: ಅಣ್ವಸ್ತ್ರ ಪರೀಕ್ಷೆ ನಡೆಸಿದ್ದ ಸುರಂಗ ಕುಸಿದುಬಿದ್ದ ಪರಿಣಾಮ ಸುಮಾರು 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಕೊರಿಯಾದಲ್ಲಿ ಸಂಭವಿಸಿರುವುದಾಗಿ ಜಪಾನ್ ನ ಮಾಧ್ಯಮದ ವರದಿಗಳು ತಿಳಿಸಿವೆ.

Advertisement

ಉತ್ತರ ಕೊರಿಯಾದ ಪುಂಗ್ಯೆ ರಿ ಪ್ರದೇಶದಲ್ಲಿನ ಸುರಂಗದಲ್ಲಿ ಉತ್ತರ ಕೊರಿಯಾ 6ನೇ ಬಾರಿ  ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿರುವುದಾಗಿ ಉತ್ತರ ಕೊರಿಯಾದ ಹೆಸರು ಹೇಳಲು ಇಚ್ಚಿಸದ ಮೂಲಗಳು ತಿಳಿಸಿರುವುದಾಗಿ ಟಿವಿ ಅಸಾಹಿ ವರದಿ ಮಾಡಿದೆ.

ಅಣ್ವಸ್ತ್ರ ಪರೀಕ್ಷೆಯಲ್ಲಿ ಸುರಂಗ ಕುಸಿದು ಬಿದ್ದಿದ್ದರಿಂದ ಸುಮಾರು 200 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಸಾಧ್ಯತೆ ಇದ್ದಿರುವುದಾಗಿ ವರದಿ ವಿವರಿಸಿದೆ.

ಅಣುಬಾಂಬ್ ಪರೀಕ್ಷೆ ನಡೆಸದಂತೆ ತಜ್ಞರು ಎಚ್ಚರಿಸಿದ್ದರು. ಬೆಟ್ಟದಲ್ಲಿರುವ ಸುರಂಗ ಮಾರ್ಗದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದರೆ ಬೆಟ್ಟ ಕುಸಿದು, ಚೀನಾ ಗಡಿಭಾಗದಲ್ಲಿರುವ ಪ್ರದೇಶದ ಸಮೀಪ ವಿಕಿರಣಗಳು ಹರಡುವ ಸಾಧ್ಯತೆ ಇದ್ದಿರುವುದಾಗಿ ತಜ್ಞರು ಎಚ್ಚರಿಸಿದ್ದರು ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next