ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತಮತ್ತೂಂದು ಟನಲ್ ಬೋರಿಂಗ್ ಮಷಿನ್(ಟಿಬಿಎಂ) ಸೇರ್ಪಡೆಯಾಗಿದ್ದು, ಈ ಮೂಲಕ ಒಟ್ಟಾರೆ 14 ಕಿ.ಮೀ. ಉದ್ದದ ಮಾರ್ಗಕ್ಕೆ ಎಂಟುಯಂತ್ರಗಳು ಸುರಂಗ ಕೊರೆಯುವ ಕಾರ್ಯಕ್ಕೆಅಣಿಯಾದಂತಾಗಿದೆ.
ಟ್ಯಾನರಿ ರಸ್ತೆಯಿಂದ ನಾಗವಾರ ಮಧ್ಯೆ ಬರುವವೆಂಕಟೇಶಪುರ ಸುರಂಗ ನಿಲ್ದಾಣದಲ್ಲಿ 8ನೇಟಿಬಿಎಂ “ಭದ್ರ’ ಅನ್ನು ಕೆಳಗಿಳಿಸಲಾಗಿದ್ದು, ಬಿಡಿಭಾಗಗಳ ಜೋಡಣೆ ಕಾರ್ಯ ನಡೆದಿದೆ.ಶೀಘ್ರದಲ್ಲೇ ಸುರಂಗ ಕೊರೆಯುವ ಕೆಲಸಶುರುವಾಗಲಿದೆ ಎಂದು ಬೆಂಗಳೂರು ಮೆಟ್ರೋರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ.
ಮೇನಲ್ಲಿ ನಡೆದ ಮೆಟ್ರೋ ಯೋಜನೆ ಪ್ರಗತಿಕುರಿತು ಜೂನ್ ತಿಂಗಳ ವಾರ್ತಾಪತ್ರ ಬಿಡುಗಡೆಮಾಡಿರುವ ಬಿಎಂಆರ್‌ಸಿಎಲ್, ಅದರಲ್ಲಿ ಈಮಾಹಿತಿ ನೀಡಿದೆ. ಸುಮಾರು 850 ಮೀಟರ್‌ಉದ್ದದ ಈ ಮಾರ್ಗದಲ್ಲಿ ಟ್ಯಾನರಿ ರಸ್ತೆ,ವೆಂಕಟೇಶಪುರ, ಕಾಡುಗೊಂಡನಹಳ್ಳಿ ಮತ್ತುನಾಗವಾರ ಎಂಬ ನಾಲ್ಕು ನಿಲ್ದಾಣಗಳು ಬರಲಿವೆ.
ಇನ್ನು ಡೇರಿ ವೃತ್ತದಿಂದ ಟ್ಯಾನರಿ ರಸ್ತೆ ನಡುವಿನ9.28 ಕಿ.ಮೀ. ಮಾರ್ಗದಲ್ಲಿ ಈಗಾಗಲೇಕಾರ್ಯನಿರ್ವಹಿಸುತ್ತಿರುವ ಟಿಬಿಎಂಗಳ ಸುರಂಗಕಾಮಗಾರಿ ವಿವಿಧ ಹಂತದಲ್ಲಿದೆ. ಕಂಟೋನ್ಮೆಂಟ್-ಶಿವಾಜಿನಗರ ಮಧ್ಯೆ ಸುರಂಗ ನಿರ್ಮಿಸುತ್ತಿರುವ ಟಿಬಿಎಂ ಊರ್ಜಾ 576 ರಿಂಗ್‌ಗಳ ಪೈಕಿ 319ರಿಂಗ್‌ಗಳನ್ನು ನಿರ್ಮಿಸುವಕಾರ್ಯ ಪೂರ್ಣಗೊಂಡಿದೆ. ಇದೇ ಮಾರ್ಗದಲ್ಲಿ ಬರುತ್ತಿರುವ “ವಿಂದ್ಯ’ಸುಮಾರು 254 ರಿಂಗ್‌ಗಳನ್ನು ಜೋಡಿಸುವಲ್ಲಿಯಶಸ್ವಿಯಾಗಿದೆ.
ಅದೇ ರೀತಿ, ಶಿವಾಜಿನಗರ-ಎಂ.ಜಿ. ರಸ್ತೆ ಕಡೆಗೆ ಸಾಗುತ್ತಿರುವ “ಅವನಿ’ 337ರಿಂಗ್‌ಗಳನ್ನು ಅಳವಡಿಸುವ ಕಾರ್ಯಪೂರ್ಣಗೊಳಿಸಿದ್ದು,ಹಿಂದೆಯೇಪಯಣ ಬೆಳೆಸಿರುವ “ಲವಿ’126 ರಿಂಗ್‌ಗಳನ್ನು ಜೋಡಣೆಮಾಡಿದೆ. ಇನ್ನು ವೆಲ್ಲಾರ ಜಂಕ್ಷನ್‌ನಿಂದ ಲ್ಯಾಂಗ್‌ಫೋರ್ಡ್ ರಸ್ತೆ ಮಧ್ಯೆ ಮಾರ್ಚ್‌ನಿಂದ ಸುರಂಗ ಕೊರೆಯುವಕಾರ್ಯ ಆರಂಭಿಸಿರುವ ಆರ್‌ಟಿ01 ಟಿಬಿಎಂ 429 ರಿಂಗ್‌ಗಳಪೈಕಿ 55 ರಿಂಗ್‌ಗಳನ್ನು (ಶೇ.13ರಷ್ಟು) ಜೋಡಣೆ ಮಾಡಿದೆಎಂದು ಬಿಎಂಆರ್‌ಸಿಎಲ್‌ವಾರ್ತಾಪತ್ರದಲ್ಲಿ ತಿಳಿಸಿದೆ.
ಪೈಲಿಂಗ್ ಚುರುಕು: ಸುರಂಗಕಾಮಗಾರಿಯೊಂದಿಗೆ ಮಾರ್ಗದುದ್ದಕ್ಕೂ ಬರುವ ನಿಲ್ದಾಣಗಳ ನಿರ್ಮಾಣಕಾಮಗಾರಿ ಕೂಡ ಚುರುಕಿನಿಂದ ಸಾಗಿದ್ದು,ಪೈಲಿಂಗ್ ಕಾರ್ಯದಲ್ಲಿ ಬಹುತೇಕ ಕಡೆ ಶೇ.70ರಿಂದ80ರಷ್ಟು ಪ್ರಗತಿ ಕಂಡುಬಂದಿ¨