ಮಳೆಯಿಲ್ಲದೇ ಸಮರ್ಪಕವಾಗಿ ಬೆಳೆ ಬೆಳೆಯಲು ಸಾಧ್ಯವಾಗದೇ ರೈತರು ಸಂಕಷ್ಟದಲ್ಲಿದ್ದಾರೆ. ಜಲಾಶಯದಲ್ಲಿ
ತುಂಬಿರುವ ಹೂಳೆತ್ತಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷೆ ಸುಲೋಚನಮ್ಮ ಹೇಳಿದರು.
Advertisement
ತಾಲೂಕಿನ ಕರೂರು ಗ್ರಾಮದ ಸ.ಮಾ.ಹಿ.ಪ್ರಾ.ಶಾಲೆ ಆವರಣದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿದ್ಯಾವಂತರಾಗೋಣ, ಪ್ರಗತಿ ಹಾದಿಯಲ್ಲಿ ಸಾಗೋಣ ಎನ್ನುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೈಸರ್ಗಿಕವಾಗಿ ಸಿಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಪ್ರಜ್ಞೆ ರೈತರಲ್ಲಿ ಮೂಡಬೇಕಾಗಿದೆ. ನೀರಿಲ್ಲದೇ ಹೋದರೆ ಬದುಕುವುದು ಕಷ್ಟವಾಗುತ್ತದೆ. ಕೃಷಿ ಕುಂಠಿತವಾಗುತ್ತದೆ. ನೀರನ್ನು ಹಿತ-ಮಿತವಾಗಿ ಬಳಕೆ ಮಾಡುವುದರಿಂದ ನೀರು ಉಳಿಸುವುದರೊಂದಿಗೆ ಉತ್ತಮ ಬೆಳೆ ಬೆಳೆಯಬಹುದು. ತುಂಗಭದ್ರಾ ಅಚ್ಚುಕಟ್ಟು ರೈತರು ನೀರಿನ ಸದ್ಬಳಕೆಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಕೇವಲ ಭತ್ತ ಬೆಳೆಯದೇ ಬಹುಬೆಳೆ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಗಡ್ಡಿ, ತಾಲೂಕು ಕಾರ್ಯಾಧ್ಯಕ್ಷ ಅಬ್ದುಲ್ ರೌಫ್, ಕಾರ್ಯದರ್ಶಿ ಮಂಜುನಾಥ
ಆಚಾರಿ, ಜಡೆಪ್ಪ, ಕೆ. ಪ್ರಹ್ಲಾದಾಚಾರಿ, ಡಾ| ಬಸವರಾಜರೆಡ್ಡಿ, ಮುಖ್ಯಗುರು ಭಾಗ್ಯಲಕ್ಷ್ಮೀ, ಶಿಕ್ಷಕ ನಾಗರಾಜ, ಕೃಷಿ ವಿಜ್ಞಾನಿ ವಿಜಯಕುಮಾರಗೌಡ ಮಾತನಾಡಿದರು. ನಿವೃತ್ತ ಶಿಕ್ಷಕ ನರಸಿಂಗರಾವ್, ಗ್ರಾಪಂ ಸದಸ್ಯ ಡಿ. ಪಾಲಾಕ್ಷರೆಡ್ಡಿ, ಮುಖಂಡ ಕೆಂಚಪ್ಪ, ಸಲ್ಲಾ ತಿಮ್ಮಾರೆಡ್ಡಿ, ಕೆ.ರಾಘವೇಂದ್ರರೆಡ್ಡಿ, ವೀರಾರೆಡ್ಡಿ, ವಿಶ್ವನಾಥರೆಡ್ಡಿ, ಕಣೇಕಲ್ಲಪ್ಪ ಇದ್ದರು. ಗ್ರಾಮದ ಅಗಸರ ದ್ಯಾವಪ್ಪ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ 140 ವಿದ್ಯಾರ್ಥಿಗಳು ಮತ್ತು ಗ್ರಾಮದಲ್ಲಿ ಓದಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 180 ಹಳೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.