Advertisement

“ಮನೆ’ಗಾಗಿ ನಿಲ್ಲದ ಸಂತ್ರಸ್ತರ ತಾಪತ್ರಯ ­

07:57 PM Mar 28, 2021 | Team Udayavani |

ಗಂಗಾವತಿ: ತುಂಗಭದ್ರಾ ಡ್ಯಾಂ ನಿರ್ಮಾಣಕ್ಕೆ ಸರ್ವಸ್ವವನ್ನು ಕಳೆದುಕೊಂಡ ಕುಟುಂಬಗಳು ಮುಸ್ಟೂರು ಡಗ್ಗಿ ಗ್ರಾಮದಲ್ಲಿ ಇಂದಿಗೂ ತೊಂದರೆಪಡುತ್ತಿವೆ.

Advertisement

ತುಂಗಭದ್ರಾ ಡ್ಯಾಂ ನಿರ್ಮಾಣವಾಗಿ 7 ದಶಕಗಳು ಕಳೆದಿದ್ದು ಯೋಜನಾ ನಿರಾಶ್ರಿತರಿಗೆ ಮುಸ್ಟೂರು ಡಗ್ಗಿ ಗ್ರಾಮದಲ್ಲಿ ವಾಸ ಮಾಡಲು ಜಾಗ ತೋರಿಸಿ ಕೆಲವರಿಗೆ ಕೃಷಿ ಮಾಡಲು ಭೂಮಿ ಮಂಜೂರು ಮಾಡಿ ಗ್ರಾಮದಲ್ಲಿರುವ ಗುಡಿಸಲುಗಳಿಗೆ ದಾಖಲಾತಿ ನೀಡುವುದನ್ನೇ ಸರಕಾರ ಮರೆತಿದೆ. ಇದೀಗ ನಿರಾಶ್ರಿತರು ಸರಕಾರದ ಮನೆ ಇತರೆ ಕಾರ್ಯಕ್ಕೆ ಜಾಗದ ಪಟ್ಟ ಇಲ್ಲದೇ ಮಂಜೂರಾದ ಮನೆಗಳನ್ನು ಕಳೆದುಕೊಳ್ಳುವ ಸ್ಥಿತಿ ಬಂದಿದೆ.

ತಾಲೂಕಿನ ಮುಸ್ಟೂರು ಡಗ್ಗಿ ಗ್ರಾಮದಲ್ಲಿ 2017-18ನೇ ಸಾಲಿನಲ್ಲಿ ಗುಡಿಸಲು ಮನೆ ಇರುವವರಿಗೆ ಆರ್‌ಸಿಸಿ ಮನೆ ನಿರ್ಮಿಸಿಕೊಳ್ಳಲು ಹಲವು ಕುಟುಂಬಗಳನ್ನು ಆಯ್ಕೆ ಮಾಡಿ ಮನೆ ನಿರ್ಮಾಣ ಕಾರ್ಯ ಆರಂಭಿಸಿ ಬುನಾದಿ ಹಾಗೂ ಆರ್‌ಸಿಸಿ ಹಾಕುವ ಹಂತದವರೆಗೆ ಎರಡು ಬಾರಿ ಸರಕಾರದಿಂದ ಚೆಕ್‌ ವಿತರಿಸಲಾಗಿತ್ತು. ಮೂರನೇ ಚೆಕ್‌ ವಿತರಣೆ ಸಂದರ್ಭದಲ್ಲಿ ಆಡೆತಡೆ ಉಂಟಾಗಿದೆ. ಹೀಗಾಗಿ ಸಾಲಸೋಲ ಮಾಡಿ ಮನೆ ನಿರ್ಮಿಸಿಕೊಂಡವರಿಗೆ ಸರಕಾರದ ನೆರವು ಇಲ್ಲದೇ ಸಾಲಗಾರರ ಕಿರುಕುಳದಿಂದ ತಪ್ಪಿಸಿಕೊಳ್ಳಲಾಗದ ಸ್ಥಿತಿಯುಂಟಾಗಿದೆ.

ತುಂಗಭದ್ರಾ ಡ್ಯಾಂ ನಿರ್ಮಾಣ ಸಂದರ್ಭದಲ್ಲಿ ಭೂಮಿ ಕಳೆದುಕೊಂಡ, ಮನೆ ಮುಳುಗಡೆಯಾದ ಕೌಲೂರು ಗುಡ್ಲಾನೂರು ಕಾತರಕಿ ಗ್ರಾಮಗಳ ಜನರಿಗೆ ರಾಜ್ಯ ಸರಕಾರ 1955ರಲ್ಲಿ ತಾಲೂಕಿನ ಮುಸ್ಟೂರು ಜಂಗಮರ ಕಲ್ಗುಡಿ ಸೇರಿ ಇತರೆ ಭಾಗದಲ್ಲಿ ನಿವೇಶನ ಮತ್ತು ಕೃಷಿ ಮಾಡಲು ಭೂಮಿ ಹಂಚಿಕೆ ಮಾಡಿತ್ತು.

ತಾಲೂಕಿನ ಮುಸ್ಟೂರು ಡಗ್ಗಿ ಕ್ಯಾಂಪ್‌ನಲ್ಲಿ ಇಂತಹ ಹಲವು ಕುಟುಂಬಗಳಿದ್ದು ಈಗಾಗಲೇ ಒಂದು ತಲೆಮಾರು ಹೋಗಿದ್ದು, ಎರಡನೇ ತಲೆಮಾರು ಬಂದರೂ ಸ್ವಂತ ಮನೆಯಿಲ್ಲದೇ ಗುಡಿಸಲುಗಳಲ್ಲೇ ವಾಸ ಮಾಡುವ ಹಲವು ಕುಟುಂಬಗಳನ್ನು ಕಾಣಬಹುದಾಗಿದೆ.

Advertisement

1955ರಿಂದ ಮುಸ್ಟೂರು ಡಗ್ಗಿ ಗ್ರಾಮದಲ್ಲಿ ವಾಸ ಮಾಡುತ್ತಿರುವ ಸುಮಾರು ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಬಸವ ವಸತಿ ಯೋಜನೆಯಡಿ ಅರ್ಜಿ ಆಹ್ವಾನಿಸಿ ಮನೆ ನಿರ್ಮಿಸಿಕೊಳ್ಳಲು ರಾಜೀವಗಾಂ ಧಿ ವಸತಿ ಯೋಜನೆಯಡಿ ಹಣ ಮಂಜೂರು ಮಾಡಲಾಗಿದೆ. ಕೆಲ ಮನೆಗಳನ್ನು ಈಗಾಗಲೇ ನಿರ್ಮಿಸಲಾಗಿದ್ದು, ಉಳಿದವುಗಳಿಗೆ ಮೂರು ಮತ್ತು ಕೊನೆಯ ಕಂತಿನ ಹಣದ ಚೆಕ್‌ ವಿತರಿಸುವಲ್ಲಿ ವಿಳಂಬವಾಗಿದೆ. ಗ್ರಾಪಂ ಅಧಿಕಾರಿಗಳು ಮನೆ ನಿರ್ಮಾಣ ಸ್ಥಳಕ್ಕೆ ಆಗಮಿಸಿ ಜಿಪಿಎಸ್‌ ಮೂಲಕ ದೃಢೀಕರಿಸಿ ರಾಜೀವಗಾಂಧಿ ವಸತಿ ಯೋಜನೆಯ ವೆಬ್‌ಗ ವರದಿ ಹಾಕಿ ಸಂಬಂ ಧಿಸಿದ ಪತ್ರ ವ್ಯವಹಾರ ನಡೆಸಿದರೆ ಮಾತ್ರ ಉಳಿದ ಹಣ ಮಂಜೂರಾಗಿ ಫಲಾನುಭವಿಯ ಬ್ಯಾಂಕ್‌ ಖಾತೆಗೆ ಜಮಾ ಆಗುತ್ತದೆ.

ಕೆ.ನಿಂಗಜ್ಜ 

Advertisement

Udayavani is now on Telegram. Click here to join our channel and stay updated with the latest news.

Next