Advertisement
ನೀರಾವರಿ ಇಲಾಖೆಯ ಸಿರವಾರ, ಯರಮರಸ್ ವಿಭಾಗದಲ್ಲಿನ ಕೆಳಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಇದುವರೆಗೂ ಸಮರ್ಪಕ ನೀರು ಸಿಗುತ್ತಿಲ್ಲ. ಬೆಳೆದು ನಿಂತ ಅಲ್ಲಿನ ಬೆಳೆಗಳ ರಕ್ಷಣೆಗೆ ರೈತ ವಲಯದಲ್ಲಿ ಹೋರಾಟಗಳು ತೀವ್ರಗೊಂಡಿವೆ. ಅಲ್ಲದೇ ರಾಯಚೂರಿನ ಸಮತೋಲನ ಜಲಾಶಯವನ್ನು ಬೇಸಿಗೆ ಅವ ಧಿಗೆ ಕುಡಿವ ನೀರು ಸಂಗ್ರಹಿಸಿಕೊಳ್ಳಬೇಕಾದ ಅನಿವಾರ್ಯ ಎದುರಾಗಿದೆ.
ಬೆಳಗ್ಗೆ 8ಗಂಟೆಯಿಂದ ಫೆ.21ರ ಬೆಳಗ್ಗೆ 8ರ ವರೆಗೆ ಸುಮಾರು 18ಕ್ಕೂ ಹೆಚ್ಚು ವಿತರಣಾ ಕಾಲುವೆಗಳ ನೀರನ್ನು ಬಂದ್ ಮಾಡಲು ನೀರಾವರಿ ಇಲಾಖೆ ನಿರ್ಧರಿಸಿದೆ.
Related Articles
Advertisement
ವಿಶೇಷವಾಗಿ ಸಿಂಧನೂರು ವಿಭಾಗ ವ್ಯಾಪ್ತಿಗೆ ಸೇರಿದ ಮಸ್ಕಿ ಉಪವಿಭಾಗ, ತುರುವಿಹಾಳ, ಜವಳಗೇರಾ ಭಾಗದಲ್ಲಿನ ಕೆಳಭಾಗದ ಅಚ್ಚುಕಟ್ಟು ಪ್ರದೇಶಕ್ಕೆ ಈಗನೀರು ಸಿಕ್ಕಿವೆ. ಇಂತಹ ಸಂದರ್ಭದಲ್ಲಿ ಈಗ ನಾಲ್ಕು ದಿನಗಳ ಕಾಲ ನೀರು ಬಂದ್ ಮಾಡುತ್ತಿರುವ ಪ್ರಕ್ರಿಯೆ ರೈತರಲ್ಲಿ ಕಸಿವಿಸಿಗೆ ಕಾರಣವಾಗಿದೆ. ನಾಲ್ಕು ದಿನಗಳ ಕಾಲ ನೀರೇ ಇಲ್ಲದಂತೆ ಬಂದ್ ಮಾಡುತ್ತಿರುವುದು ರೈತ ವಲಯದಲ್ಲಿ ತೀವ್ರ ಚಿಂತೆಗೆ ಇಡು ಮಾಡಿದೆ. ಸಂಘರ್ಷದ ಭೀತಿ: ಆನ್ ಆ್ಯಂಡ್ ಆಫ್ ಮಾದರಿಗೆ ನಿಷೇದಾಜ್ಞೆ ಜಾರಿ, ಪೊಲೀಸ್ ಕಾವಲು ಬಳಸಿಕೊಳ್ಳಲಾಗುತ್ತಿದೆಯಾದರೂ ರೈತರ ನಡುವೆಯೇ ಸಂಘರ್ಷಕ್ಕೆ ಇದು ದಾರಿಯಾಗಿದೆ. ಈಗಾಗಲೇ ಕೆಳಭಾಗಕ್ಕೆ ನೀರು ತಲುಪುತ್ತಿಲ್ಲ ಎಂದು ಮಸ್ಕಿ, ತುರುವಿಹಾಳ, ಕವಿತಾಳ ಉಪವಿಭಾಗದಲ್ಲಿ ಹಲವು ಬಾರಿ ಗಲಾಟೆಗಳು ನಡೆದಿವೆ. ರಾಜಕೀಯ ಹಸ್ತಕ್ಷೇಪವೂ ಆಗಿ ನೀರಿನ ಹರಿವು ಮಾಡಲಾಗಿದೆ.ಆದರೆ ಈಗ ದಿಢೀರ್ ಆಗಿ ನೀರೇ ಇಲ್ಲದಂತೆ ವಿತರಣಾ ಕಾಲುವೆಗಳನ್ನು ಬಂದ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಈ ಬಾರಿಯ ಹಿಂಗಾರು ಹಂಗಾಮಿಗೆ ಹರಿಸಿದ ನೀರು ರೈತರ ಬೆಳೆಗಳಿಗೆ ಸಮರ್ಪಕವಾಗಿ ಸಿಗದೇ ಇರುವುದು ಹಲವು ರೀತಿಯ ಸವಾಲುಗಳನ್ನು
ಉಂಟು ಮಾಡಿದೆ. ರಾಯಚೂರು ಬಳಿಯ ಸಮತೋಲನ ಜಲಾಶಯಕ್ಕೆ ಕುಡಿವ ನೀರು ಸಂಗ್ರಹ ಹಿನ್ನೆಲೆಯಲ್ಲಿ ವಿತರಣಾ ಕಾಲುವೆಗಳಿಗೆ ನೀರನ್ನು ಬಂದ್ ಮಾಡಲಾಗುತ್ತಿದೆ. ರೈತರು ನೀರು ನಿರ್ವಹಣೆಗೆ ಸರಕಾರ ನೀಡಬೇಕು.
ಈರಣ್ಣ, ಇಇ ನೀರಾವರಿ ಇಲಾಖೆ,
ಸಿಂಧನೂರು ವಿಭಾಗ *ಮಲ್ಲಿಕಾರ್ಜುನ ಚಿಲ್ಕರಾಗಿ