ಹೊಸಪೇಟೆ: ಕಲ್ಯಾಣ ಕರ್ನಾಟಕ ಪ್ರದೇಶದ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಇದೀಗ ಸಂಪೂರ್ಣ ಹಸಿರು ಬಣ್ಣಕ್ಕೆ ತಿರುಗಿದ್ದು ನದಿಪಾತ್ರದ ಜನ-ಜಾನುವಾರುಗಳ ಆರೋಗ್ಯಕ್ಕೆ ಕಂಟಕಪ್ರಾಯವಾಗಿದೆ. ಜುಲೈ ತಿಂಗಳಲ್ಲಿ ಸಂಪೂರ್ಣ ಭರ್ತಿಯಾಗಿ ಜಲಾಶಯದ ಹಿನ್ನೀರಿನ (ಗೂಂಡಾಕಾದಿಟ್ಟ ಅರಣ್ಯ)ಪ್ರ ದೇಶದಲ್ಲಿ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡು ಬಂದಿದೆ. ತುಂಗಭದ್ರಾ ನದಿ ಪಾತ್ರದ ಜನಜಾನುವಾರುಗಳು ನೀರನ್ನು ಹೆಚ್ಚಾಗಿ ಶುದ್ಧೀಕರಿಸದೇ ಸೇವನೆ ಮಾಡುತ್ತಿರುವುದರಿಂದ ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ.
ಪಶ್ಚಿಮ ಘಟ್ಟದ ಆಯ್ದ ಪಟ್ಟಣಗಳ ಕೆಲ ಕಾರ್ಖಾನೆಗಳತ್ಯಾಜ್ಯನದಿಗೆ ಬಂದು ಸೇರುತ್ತಿದೆ. ರೈತರು ಹೊಲ-ಗದ್ದೆಗಳಲ್ಲಿ ಹೆಚ್ಚಾಗಿ ರಾಸಾಯನಿಕ ಗೊಬ್ಬರ ಬಳಕೆ ಹಾಗೂ ಜನವಸತಿ ಪ್ರದೇಶದ ತ್ಯಾಜ್ಯ ಕೂಡ ನದಿಗೆ ಬಂದು ಸೇರುತ್ತಿರುವ ಪರಿಣಾಮ ನೀರು ಹಸಿರು ಬಣ್ಣಕ್ಕೆ ತಿರುಗುತ್ತಿದೆ. ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಹಸಿರು ಬಣ್ಣಕ್ಕೆ ತಿರುಗುವ ನೀರು ಈ ಬಾರಿ ಅವಧಿಗೆ ಮುನ್ನವೇ ಬಣ್ಣಬದಲಿಸಿದೆ.ಈ ನೀರು ಸಾಂಕ್ರಾಮಿಕ ರೋಗ-ರುಜಿನ ಹಾಗೂ ಚರ್ಮ ರೋಗಗಳಿಗೂ ಕಾರಣವಾಗಬಹುದು ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.
ಇತ್ತೀಚಿಗೆ ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಖಾತೆ ವಹಿಸಿಕೊಂಡಿರುವ ಸಚಿವ ಆನಂದ ಸಿಂಗ್ ಅವರು ರಾಜ್ಯದ ಯಾವುದೇ ನದಿಗಳಿಗೆ ತ್ಯಾಜ್ಯ ಹರಿಸುವ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪರಿಸರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರತಿವರ್ಷವು ತುಂಗಭದ್ರಾ ಜಲಾಶಯದ ನೀರುಹಸಿರು ಬಣ್ಣಕ್ಕೆ ಬರುತ್ತಿದೆ. ಈ ಹಿಂದೆ ಈ ನೀರನ್ನು ಧಾರವಾಡ ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷಿಸಲಾಗಿತ್ತು. ಈ ನೀರನ್ನು ಶುದ್ಧೀಕರಿಸಿ ಕುಡಿಯಬಹುದು ಎಂದು ವರದಿ ತಿಳಿಸಿತ್ತು. ಪಶ್ಚಿಮ ಭಾಗದಕೆಲ ಕಾರ್ಖಾನೆಗಳ ತ್ಯಾಜ್ಯ ನದಿಗೆ ಸೇರುತ್ತಿದೆ ಎಂದುಹೇಳಲಾಗುತ್ತಿದೆ. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
ಆನಂದ ಸಿಂಗ್, ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯ ಸಚಿವ
ಕಾರ್ಖಾನೆಹಾಗೂ ಜನವಸತಿ ತ್ಯಾಜ್ಯಹಾಗೂ ರೈತರ ಕೃಷಿ ಭೂಮಿಗಳಲ್ಲಿ ಬಳಕೆಯಾಗುತ್ತಿರುವ ರಾಸಾಯನಿಕ ಗೊಬ್ಬರದ ಪರಿಣಾಮದಿಂದ ನದಿ ನೀರುಹಸಿರುಬಣ್ಣಕ್ಕೆ ತಿರುಗಬಹುದು. ಸಯೋನಾ ಅಥವಾ ನೀಲಿ ಮಿಶ್ರಿತ ಪಾಚಿ ಬ್ಯಾಕೀrರಿಯಾಗಳು ನೀರುಹಸಿರುಬಣ್ಣಕ್ಕೆ ತಿರುಗಲುಕಾರಣವಾಗಿವೆ. ಈ ಸಂದರ್ಭದಲ್ಲಿಈ ನೀರು ಕುಡಿಯಲು ಯೋಗ್ಯವಲ್ಲ.
ಸಮದ್ ಕೊಟ್ಟೂರು, ಪರಿಸರ ಹಾಗೂ
ವನ್ಯಜೀವಿ ತಜ್ಞ, ಹೊಸಪೇಟೆ