ಪ್ರತಿ ವರ್ಷ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ರೈತರು ಮುಂಗಾರು ಹಂಗಾಮಿನ ಮಳೆಗೆ ಬಿತ್ತನೆ ಮಾಡುತ್ತಾರೆ. ಹಿನ್ನೀರು ಪ್ರದೇಶಕ್ಕೆ ನೀರು ಹರಿದು ಬರುತ್ತದ್ದಂತೆ ಬೆಳೆ ಕಟಾವು ಮಾಡಿ ಒಕ್ಕಲು ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಜಲಾಶಯದ ಒಳ ಹರಿವು ದಿಡೀರ್ ೨ ಲಕ್ಷ ಕ್ಯೂಸೆಕ್‌ಗೂ ಅಧಿಕ ನೀರು ಹೆಚ್ಚಾಗಿದ್ದರಿಂದ ಬೆಳೆಗೆ ನೀರು ನುಗ್ಗಿದೆ. ಹೀಗಾಗಿ ಲಕ್ಷಾಂತರ ರೂ. ಬೆಳೆಯು ಸಂಪೂರ್ಣ ಜಲಾವೃತವಾಗಿದೆ.
ದುಬಾರಿ ಬೆಲೆಯ ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗೆ ಮಾಡಿದ್ದ ವೆಚ್ಚವೆಲ್ಲ ನದಿಯಲ್ಲಿ ಕೊಚ್ಚಿ ಹೋದಂತಾಗಿದೆ. ಹೀಗಾಗಿ ರೈತ ಚಿಂತೆ ಮಾಡುತ್ತಿದ್ದಾನೆ. ಇರುವ ಬೆಳೆ ಕಟಾವು ಮಾಡಿ ಜಾನುವಾರುಗಳಿಗೆ ಹಾಕಲು ಸಾಧ್ಯವಾಗುತ್ತಿಲ್ಲ. ಹಿನ್ನೀರು ಯಾವ ಪ್ರಮಾಣದಲ್ಲಿ ಅಪಾಯ ತಂದೊಡ್ಡಲಿದೆಯೋ ಎಂದು ಚಿಂತೆ ಮಾಡುತ್ತಿದ್ದಾರೆ. ಡ್ಯಾಂ ಮುಂಭಾಗದ ಎತ್ತರ ಪ್ರದೇಶದಲ್ಲಿ ಮೇವು ಸಂಗ್ರಹಿಸಿಟ್ಟಿದ್ದ ರೈತರು ನದಿಗೆ ನೀರು ಬಿಟ್ಟಿದ್ದರಿಂದ ಮೇವು ನೀರಿನಲ್ಲಿ ಸಂಪೂರ್ಣ ನೆನೆದು ಹೋಗಿದೆ.
Advertisement