Advertisement

ತುಮಕೂರು: ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಗಾಂಜಾ ಮಾರಾಟ

12:58 PM Jan 04, 2022 | Team Udayavani |

ತುಮಕೂರು: ಶೈಕ್ಷಣಿಕ ನಗರವೆಂದು ಹೆಸರಾಗಿರುವ ಕಲ್ಪತರು ನಾಡು ಕಾನೂನು ಸಚಿವರ ತವರೂರು.ತುಮಕೂರಿನಲ್ಲಿ ಡ್ರಗ್‌ ಮಾಫಿಯಾ ಪೊಲೀಸರಕಣ್ತಪ್ಪಿಸಿ ಎಗ್ಗಿಲ್ಲದಂತೆ ನಡೆಯುತ್ತಿದೆ. ರಾಜಧಾನಿ ಬೆಂಗಳೂರಿಗೆ ಹೆಬ್ಟಾಗಿಲಾಗಿರುವ ತುಮಕೂರು ರಾಜ್ಯದಲ್ಲಿ ಅತೀ ದೊಡ್ಡ 2ನೇ ಜಿಲ್ಲೆಯಾಗಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿಯ ದಾಪುಗಾಲು ಹಾಕುತ್ತಿರುವ ತುಮಕೂರು ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಪಡೆದ ಕೀರ್ತಿಗೆ ಪಾತ್ರವಾಗಿದೆ.

Advertisement

ಶೈಕ್ಷಣಿಕ ನಗರ ತುಮಕೂರು: ಧಾರ್ಮಿಕ, ಸಾಹಿತ್ಯಕ್ಕೆ ಹೆಸರಾಗಿರುವ ತುಮಕೂರು ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದೆ. ಮೆಡಿಕಲ್‌, ಎಂಜಿನಿಯರಿಂಗ್‌ ಕಾಲೇಜುಗಳು ಸೇರಿದಂತೆ ಉನ್ನತ ಶಿಕ್ಷಣ ಪಡೆಯಲು ಹೆಚ್ಚು ಅವಕಾಶ ಇಲ್ಲಿದ್ದು, ದಿನೇ ದಿನೆ ಶಿಕ್ಷಣ ಸಂಸ್ಥೆಗಳು ನಾಯಿ ಕೊಡೆಯಂತೆ ತಲೆ ಎತ್ತುತ್ತಿವೆ. ಬೆಂಗ ‌ ಳೂರಿಗೆ ಹತ್ತಿರವಾಗಿರುವ ಜತೆಗೆ ಶಿಕ್ಷಣ ಪಡೆಯಲು ಪ್ರಶಾಂತವಾದ ನಗರವೆಂದು ದೇಶದ ವಿವಿಧ ರಾಜ್ಯಗಳಿಂದಲ್ಲದೆ ವಿದೇಶಗಳಿಂದಲೂ ಶಿಕ್ಷಣ ಪಡೆಯಲು ತುಮಕೂರಿಗೆ ವಿದ್ಯಾರ್ಥಿಗಳು ಬರುತ್ತಿದ್ದಾರೆ.

ನಿಷೇಧವಿದ್ದರೂ ಮಾರಾಟ ಜೋರು: ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಅಲ್ಲಲ್ಲಿ ಗಾಂಜಾ ಬೆಳೆಯಲಾಗುತ್ತಿತ್ತು. ಕದ್ದು ಮುಚ್ಚಿ ಮಾರಾಟವಾಗುತ್ತಿದ್ದ ಈ ಗಾಂಜಾವನ್ನು ತಡೆಗಟ್ಟಲು ಪೊಲೀಸರು ಈ ಹಿಂದೆ ಹೆಚ್ಚು ಶ್ರಮ ವಹಿಸಿದ್ದರ ಪರಿಣಾಮ ಜಿಲ್ಲೆಯಲ್ಲಿ ಗಾಂಜಾ ಬೆಳೆಯುವುದು ಕಡಿಮೆಯಾದರೂ, ಕದ್ದುಮುಚ್ಚಿ ಅಲ್ಲಲ್ಲಿ ಇಂದಿಗೂ ಬೆಳೆಯುತ್ತಿದ್ದು, ಗಾಂಜಾವನ್ನು ಶಾಲಾ-ಕಾಲೇಜುಗಳ ಆವರಣ ಸುತ್ತಮುತ್ತ ಮಾರಾಟ ನಡೆಯುತ್ತಿದೆ.

ಗಾಂಜಾ ಮಾರಾಟ ಹೇಗೆ?: ಈ ಹಿಂದೆ ಗಾಂಜಾವನ್ನು ಸೇವಿಸಿದರೆ ಮತ್ತು ಬರುತ್ತದೆ ಎಂದುಕೊಳವೆಗಳಿಗೆ ಗಾಂಜಾ ಹಾಕಿಕೊಂಡು ಸೇದುತ್ತಿದ್ದರು.ಇತ್ತೀಚಿನ ದಿನಗಳಲ್ಲಿ ಗಾಂಜಾವನ್ನು ಸಿಗರೇಟಿನತಂಬಾಕು ತೆಗೆದು ಅದರ ಒಳಗೆ ಗಾಂಜಾವನ್ನು ಸೇರಿಸಿಕೊಂಡು ಸಿಗರೇಟ್‌ ರೀತಿಯಲ್ಲೇ ಸೇದುವುದು ಜಿಲ್ಲೆಯಲ್ಲಿ ಹೆಚ್ಚು ರೂಢಿಯಲ್ಲಿದೆ. ಗಾಂಜಾವನ್ನು ಬೇರೆ ಬೇರೆ ಬೆಳೆಗಳ ಮಧ್ಯೆಬೆಳೆಯುತ್ತಾರೆ. ಗಾಂಜಾ ಬೆಳೆ ಹದಕ್ಕೆ ಬಂದಾಗ ಕಿತ್ತುಬಿಸಿಲಿನಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿ ಈಗಾಂಜಾವನ್ನು ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಕಟ್ಟಿಮಾರಾಟ ಮಾಡುತ್ತಾರೆ. ಈ ಗಾಂಜಾವನ್ನುಕೊಂಡವರು ತಮ್ಮ ಕೈಗೆ ಅದನ್ನು ಹಾಕಿಕೊಂಡುಚೆನ್ನಾಗಿ ಒಸಕಿ ಬೀಡಿ, ಸಿಗರೇಟ್‌, ಚುಟುಕದಲ್ಲಿಹಾಕಿಕೊಂಡು ಬೆಂಕಿ ಹಚ್ಚಿ ಕೊಂಡು ಸೇದಿಆನಂದಿಸುತ್ತಾರೆ. ಈ ಗಾಂಜಾವನ್ನು ಒಮ್ಮೆಸೇದಿದವರಿಗೆ ಮತ್ತೆ ಮತ್ತೆ ಸೇದ ಬೇಕೆನ್ನುವ ಬಯಕೆ ಉಂಟಾಗುತ್ತದೆ.

ಪೊಲೀಸರ ಕಣ್ತಪ್ಪಿಸಿ ಗಾಂಜಾ ಮಾರಾಟ: ನಗರದ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿ, ರೈಲ್ವೇ ಸ್ಟೇಷನ್‌, ಬಸ್‌ ನಿಲ್ದಾಣ, ಎಂಜಿನಿಯರಿಂಗ್‌, ಮೆಡಿಕಲ್‌ ಕಾಲೇಜುಗಳ ಸುತ್ತಮುತ್ತ ಮಾರಾಟವಾಗುತ್ತಿದೆ. ಗಾಂಜಾ ಮಾರುವುದು ಯಾರಿಗೂ ಗೊತ್ತಾಗದ ರೀತಿಯಲ್ಲಿ ಮಾರಾಟ ಮಾಡುತ್ತಾರೆ.ಕದ್ದು ಮುಚ್ಚಿ ಯಾರಿಗೂ ಗೊತ್ತಾಗದಂತೆ ಪೊಲೀಸರ ಕಣ್ತಪ್ಪಿಸಿ ಗಾಂಜಾ ಮಾರಾಟ ನಡೆಯುತ್ತಿದ್ದು,ಪೊಲೀಸರು ದಾಖಲಿಸಿರುವ ಪ್ರಕರಣ ನೋಡಿದರೆವರ್ಷದಿಂದ ವರ್ಷಕ್ಕೆ ಈ ಪ್ರಕರಣಗಳ ಸಂಖ್ಯೆಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ತಿಳಿದುಬರುತ್ತದೆ. ಜಿಲ್ಲೆಯಲ್ಲಿ 16 ಪ್ರಕರಣಗಳಲ್ಲಿ ಅಲ್ಲಲ್ಲಿ ಕದ್ದು ಮುಚ್ಚಿ ಮಾರುತ್ತಿದ್ದ 26 ಜನ ಆರೋಪಿಗಳನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

Advertisement

ಜಿಲ್ಲೆಯೆಲ್ಲಾ ವ್ಯಾಪಿಸಿದೆ ಗಾಂಜಾ ಮಾರಾಟ: ಗಾಂಜಾ ಮಾರಾಟ ತುಮಕೂರು ನಗರಕ್ಕೆ ಮಾತ್ರಸೀಮೀತವಾಗಿಲ್ಲ. ಜಿಲ್ಲೆ ಎಲ್ಲೆಡೆ ಇದರ ದಂಧೆನಡೆಯುತ್ತಿದೆ. ಶಾಲಾ-ಕಾಲೇಜುಗಳ ಜತೆಗೆವಿದ್ಯಾರ್ಥಿ ನಿಲಯಗಳ ಸುತ್ತಮುತ್ತ ಮಾರಾಟನಡೆಯುತ್ತಿದೆ. ಇದನ್ನು ಪತ್ತೆ ಹಚ್ಚಲು ಪೊಲೀಸರು ಪ್ರಯತ್ನ ನಡೆಸಿದ್ದರೂ ಅವರ ಕಣ್ತಪ್ಪಿಸಿ ನಿರಂತರವಾಗಿ ನಡೆಯುತ್ತಲೇ ಇದೆ. ಗಾಂಜಾ ಸೇವಿಸಿ ಅನೇಕ ಯುವಕರು, ಯುವತಿಯರು ತಮ್ಮ ಬದುಕನ್ನೇ ಹಾಳು ಮಾಡಿಕೊಂಡಿದ್ದಾರೆ.

ವಿದ್ಯಾರ್ಥಿಗಳೇ ಟಾರ್ಗೆಟ್‌? :

ಗಾಂಜಾವನ್ನು ಮಾರಾಟ ಮಾಡಲು ವಿದ್ಯಾರ್ಥಿಗಳೇ ಇವರ ಟಾರ್ಗೆಟ್‌ ಆಗಿದೆ.ಮನೆಯಲ್ಲಿ ಪೋಷಕರು ನನ್ನ ಮಗ ಓದಿ ದೊಡ್ಡ ವಿದ್ಯಾವಂತ ಆಗುತ್ತಾನೆ ಎಂದು ಕನಸು ಕಂಡುಇಂತಹ ನಗರಗಳಲ್ಲಿ ಶಿಕ್ಷಣ ಕೊಡಿಸಲು ಮುಂದಾದರೆ, ಮಕ್ಕಳು ಶಿಕ್ಷಣದ ಕಡೆ ತಮ್ಮಒಲವು ತೋರದೆ ಮಾದಕ ವ್ಯಸನಿ ಗಳಾಗುತ್ತಿರುವುದು ಆರೋಗ್ಯ ಇಲಾಖೆಯ ಸರ್ವೆಮೂಲಕ ತಿಳಿಯುತ್ತಿದ್ದು, ಜಿಲ್ಲೆಯಲ್ಲಿ ಗಾಂಜಾ ಮಾರಾಟವೂ ಹೆಚ್ಚು ನಡೆಯುತ್ತಿದೆ.

ಜಿಲ್ಲೆಯಲ್ಲಿ ಗಾಂಜಾ ಮಾರಾಟ ಆಗದಂತೆ ಪೊಲೀಸ್‌ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಲಾಗಿದೆ. ಪೊಲೀಸರು ಅಲ್ಲಲ್ಲಿ ಮಫ್ತಿಗಳಲ್ಲಿ ಗಸ್ತು ತಿರುಗುತ್ತಾರೆ. ಈ ರೀತಿಯ ಪ್ರಕರಣ ಕಂಡ ತಕ್ಷಣ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ಆದರೆ, ಎಲ್ಲಿಮಾರಾಟ ಆಗುತ್ತದೆ. ಯಾರು ಮಾರುತ್ತಾರೆ ಎನ್ನುವ ಮಾಹಿತಿಯನ್ನು ಸಾರ್ವ ಜನಿಕರು ನೀಡಬೇಕು. ಅಂತಹ ಮಾಹಿತಿ ಬಂದ ತಕ್ಷಣ ನಾವು ಕ್ರಮ ಕೈಗೊಳ್ಳುತ್ತೇವೆ. ರಾಹುಲ್‌ಕುಮಾರ್‌ ಶಹಪುರ್‌ವಾಡ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ನಾನು ಬಹಳ ದಿನಗಳಿಂದ ಗಾಂಜಾ ಸೇವಿಸುತ್ತಿದ್ದೆ. ಆಗ ನನಗೆ ಓದಲು ಮನಸ್ಸೇ ಬರುತ್ತಿರಲಿಲ್ಲ. ಸ್ನೇಹಿತರಸಹವಾಸದಿಂದ ಈ ರೀತಿಯ ದುಶ್ಚಟಕಲಿತೆ. ಆದರೆ, ನನ್ನ ಆರೋಗ್ಯದಲ್ಲಿವ್ಯತ್ಯಾಸವಾದ ಹಿನ್ನೆಲೆ ವೈದ್ಯರ ಸಲಹೆಮೇರೆಗೆ ದುಶ್ಚಟವನ್ನು ಬಿಟ್ಟಿದ್ದೇನೆ. ದುಶ್ಚಟದಿಂದ ಹೊರಬಂದ ವಿದ್ಯಾರ್ಥಿ

 

-ಚಿ.ನಿ. ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next