Advertisement
ಕೊರಟಗೆರೆ ಪಟ್ಟಣದಲ್ಲಿ 1946 ಮೇ10 ರಂದು ಜನಿಸಿದ ಓ.ಅನಂತರಾಮಯ್ಯನವರು ಉನ್ನತ ವ್ಯಾಸಂಗ ಮಾಡಿ ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರು ಮತ್ತು ಮೈಸೂರು ವಿಶ್ವವಿದ್ಯಾನಿಲಯಗಳಲ್ಲಿ ಹಲವು ವರ್ಷಗಳ ಕಾಲ ಉಪನ್ಯಾಸಕರಾಗಿ, ಬೋಧಕ ವರ್ಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು, ನಂತರ ತುಮಕೂರು ವಿಶ್ವವಿದ್ಯಾನಿಲಯದ ಪ್ರಥಮ ಉಪ ಕುಲಪತಿಗಳಾಗಿ ನೇಮಕ ಗೊಂಡು ವಿಶ್ವವಿದ್ಯಾನಿಲಯದ ಉನ್ನತಿಗೆ ಶ್ರಮಿಸಿದ್ದಾರೆ, ಇವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನನ್ನು ಅಗಲಿದ್ದು ಇವರ ಅಂತಿಮ ದರ್ಶನಕ್ಕೆ ಹಲವು ಗಣ್ಯರು ಆಗಮಿಸಿದ್ದರು. ಅಂತ್ಯಕ್ರಿಯೆಯನ್ನು ಕೊರಟಗೆರೆ ಪಟ್ಟಣದಲ್ಲಿ ನೇರವೇರಿಸಲಾಯಿತು.
ಡಾ.ಓ.ಅನಂತರಾಮಯ್ಯನವರ ನಿಧನಕ್ಕೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಸಂತಾಪ ವ್ಯಕ್ತಪಡಿಸಿದ್ದಾರೆ, ಪತ್ರಿಕೆಯೊಂದಿಗೆ ದೂರವಾಣಿ ಮುಖಾಂತರ ಮಾತನಾಡಿದ ಶಾಸಕರು ಡಾ.ಓ.ಅನಂತರಾಮಯ್ಯನವರು ದಲಿತ ಕುಟುಂಬದಲ್ಲಿ ಜನಿಸಿ ಸಮಾಜದ ಕಟ್ಟುಪಾಡುಗಳನ್ನು ಯಾವುದನ್ನು ಲೆಕ್ಕಿಸದೆ ಉನ್ನತ ವ್ಯಾಸಂಗ ಮಾಡಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಗತಿ ಗಳಿಸಿ ಸಾಕಷ್ಟುಸೇವೆ ಸಲ್ಲಿಸಿದ್ದಾರೆ, ತುಮಕೂರು ವಿಶ್ವವಿದ್ಯಾನಿಲಯದ ಪ್ರಥಮ ಉಪ ಕುಲಪತಿಗಳಾಗಿ ತನ್ನದೇ ಅದ ಕೊಡಿಗೆ ನೀಡಿದ್ದಾರೆ, ಚಿತ್ರದುರ್ಗದ ಪರಿಶಿಷ್ಠ ಜಾತಿ ಮತ್ತು ಪಂಗಡದ ಸಮಾವೇಶದಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಇದ್ದ ಕಾರಣ ಅವರ ಅಂತಿಮ ದರ್ಶನ ಪಡೆಯದೇ ಇದ್ದ ಬಗ್ಗೆ ದುಖಃವಾಗಿದೆ, ದೇವರು ಅವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.