Advertisement

Tumkur; ವೃದ್ಧ ತಾಯಿಯನ್ನೇ ಕೂಡಿಹಾಕಿದ ಪುತ್ರ!

01:16 AM Feb 18, 2024 | Team Udayavani |

ತುಮಕೂರು: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಒಂದು ವರ್ಷದಿಂದ ಮಗ-ಸೊಸೆ ಸೇರಿ ಗೃಹಬಂಧನದಲ್ಲಿ ಇಟ್ಟಿದ್ದ ಘಟನೆ ನಡೆದಿದ್ದು, ನ್ಯಾಯಾಧೀಶರ ಮಧ್ಯಪ್ರವೇಶದಿಂದ 80 ವರ್ಷದ ವೃದ್ಧೆಯನ್ನು ಬಂಧಮುಕ್ತ ಗೊಳಿಸಲಾಗಿದೆ. ನಗರದ ಶಿರಾಗೇಟ್‌ ಬಳಿಯ ಬಡಾವಣೆಯೊಂದರಲ್ಲಿ ಘಟನೆ ನಡೆದಿದ್ದು, ಮಕ್ಕಳಿಗೆ ಎಚ್ಚರಿಕೆ ನೀಡಿದ ನ್ಯಾಯಾಧೀಶರು ಕೂಡಿ ಬಾಳುವಂತೆ ಹೇಳಿ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

Advertisement

ನಿವೃತ್ತ ಶಿಶು ಅಭಿವೃದ್ಧಿ ಯೋಜ ನಾಧಿಕಾರಿ ಆಗಿರುವ ಪಂಕಜಾ ಅವರಿಗೆ 54 ಸಾವಿರ ರೂ. ಪಿಂಚಣಿ ಬರುತ್ತಿದ್ದು, ನಿವೃತ್ತ ಎಎಸ್‌ಐ ಆಗಿದ್ದ ಪತಿ ಮೃತಪಟ್ಟಿದ್ದಾರೆ. ಪಂಕಜಾ ಹೆಸರಿನಲ್ಲಿ ಆಸ್ತಿ, ಚಿನ್ನಾಭರಣವಿತ್ತು. ಆಸ್ತಿಯನ್ನು ತನಗೆ ಕೊಡಲಿಲ್ಲ ಎಂಬ ಕಾರಣಕ್ಕೆ ಆಕೆಯನ್ನು ಪುತ್ರನೇ ಮನೆಯೊಳಗೆ ಕೂಡಿ ಹಾಕಿದ್ದ. ಸೊಸೆ ಕೂಡ ಕಿರುಕುಳ ನೀಡುತ್ತಿದ್ದಳು. ಈ ವಿಚಾರ ತಿಳಿದ ಸಖಿ ಕೇಂದ್ರದವರು ವೃದ್ಧೆಯನ್ನು ಅಲ್ಲಿಂದ ಬಿಡಿಸಿ 2 ದಿನಗಳಿಂದ ಸಖಿ ಕೇಂದ್ರದಲ್ಲಿ ಇರಿಸಿ ಸೂಕ್ತ ಆರೈಕೆ ಮಾಡಿದ್ದರು. ಬಳಿಕ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ನ್ಯಾಯಾಧೀಶರೂ ಆದ ನೂರುನ್ನಿಸಾ ಅವರು ಪೊಲೀಸರೊಂದಿಗೆ ವೃದ್ಧೆಯ ಮನೆಗೆ ತೆರಳಿ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿ, ಆಕೆಯನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next