ತುಮಕೂರು: ಜಿಲ್ಲೆಯಲ್ಲಿ ಗುರುವಾರದಂದು 15 ಹೊಸ ಕೋವಿಡ್-19 ಪ್ರಕರಣ ದೃಢ ಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 612ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ ತಿಳಿಸಿದ್ದಾರೆ.
ತುಮಕೂರು ತಾಲೂಕಿನಲ್ಲಿ 12 ಮಂದಿ ಹಾಗೂ ತಿಪಟೂರು, ಶಿರಾ, ಗುಬ್ಬಿ ತಲಾ ಒಬ್ಬರು ಸೇರಿದಂತೆ ಒಟ್ಟು 15 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢ ಪಟ್ಟಿದೆ. ಅಲ್ಲದೇ ಓರ್ವ ಸೋಂಕಿನಿಂದ ಮೃತ ಪಟ್ಟಿದ್ದು ಮೃತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಒಟ್ಟು 18 ಜನ ಬಲಿ: ಜಿಲ್ಲೆಯ ಗುಬ್ಬಿ ತಾಲೂಕಿನ ಯಲಚಿಹಳ್ಳಿಯ 72 ವರ್ಷದ ವೃದ್ಧ ಕೋವಿಡ್‌ಗೆ ಬಲಿಯಾಗಿದ್ದಾರೆ. ಈ ಕೋವಿಡ್‌ವೈರಸ್ ನಿಂದ ಜಿಲ್ಲೆಯಲ್ಲಿ ಒಟ್ಟು 18 ಜನರು ಬಲಿಯಾಗಿದ್ದಾರೆ ಎಂದರು.
5 ಮಂದಿ ಗುಣಮುಖ: ತುಮಕೂರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 5 ಮಂದಿ ಗುಣಮುಖರಾಗಿ ಬಿಡುಗಡೆ ಯಾಗಿದ್ದು, ಈವರೆಗೆ 222 ಮಂದಿ ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 372 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರು: ಚಿಕ್ಕ ನಾಯಕನಹಳ್ಳಿ – 36, ಗುಬ್ಬಿ-31, ಕೊರಟ ಗೆರೆ – 36, ಕುಣಿಗಲ್ – 29, ಮಧುಗಿರಿ – 53, ಪಾವಗಡ-61, ಶಿರಾ-53, ತಿಪಟೂರು -24, ತುಮಕೂರು-267, ತುರುವೇ ಕೆರೆ-22 ಮಂದಿ ಸೋಂಕಿತರಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚು ಕಂಡು ಬರುತ್ತಿದೆ. ಅಷ್ಟೇ ಪ್ರಮಾಣದಲ್ಲಿ ಗುಣಮುಖರಾಗುತ್ತಿದ್ದಾರೆ. ಕೋವಿಡ್ ವೈರಸ್‌ಗೆ ಯಾರೂ ಹೆದರಬೇಕಾಗಿಲ್ಲ. ಇಲ್ಲಿಯವರೆಗೆ 25,828 ಜನರ ಮಾದರಿ ಸಂಗ್ರಹಿಸಲಾಗಿದೆ. 21,256 ಮಾದರಿ ಗಳು ನೆಗೆಟಿವ್ ಬಂದಿವೆ, ನಿಗಾವಣಿಯಲ್ಲಿ 1545, ಜನರಿದ್ದು ಪ್ರಥಮ ಸಂಪರ್ಕದಲ್ಲಿ 666, ದ್ವಿತೀಯ ಸಂಪರ್ಕದಲ್ಲಿ 879 ಜನರಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 372 ಜನರಿಗೆ ಚಿಕಿತ್ಸೆ ನೀಡುತ್ತಿದ್ದು 222 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 612 ಜನರಿಗೆ ಸೋಂಕು ಇರುವುದು ಧೃಡವಾಗಿದೆ.
–ಡಾ.ನಾಗೇಂದ್ರಪ್ಪ, ಡಿಎಚ್‌ಒ