Advertisement

ತುಮಕೂರು: ಸೋಂಕಿತರ ಸಂಖ್ಯೆ 653ಕ್ಕೆ ಏರಿಕೆ

10:58 AM Jul 19, 2020 | Suhan S |

ತುಮಕೂರು: ಶನಿವಾರ ಒಂದೇ ದಿನ 23 ಜನರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 653ಕ್ಕೆ ಏರಿಕೆಯಾಗಿದ್ದು ಸೋಂಕಿಗೆ ಮತ್ತೆ ಇಬ್ಬರು ಬಲಿಯಾಗಿ ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

Advertisement

ತುಮಕೂರು ತಾಲೂಕಿನಲ್ಲಿ 16, ಕುಣಿಗಲ್‌-3, ಕೊರಟಗೆರೆ-2, ಚಿಕ್ಕ ನಾಯಕನಹಳ್ಳಿ-1, ಗುಬ್ಬಿ-1 ಸೇರಿ ಒಟ್ಟು 23 ಜನರಲ್ಲಿ ಸೋಂಕು ಕಂಡುಬಂದಿದೆ. ಜಿಲ್ಲೆಯಲ್ಲಿ ಈವರೆಗೆ 26,731 ಜನರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 21,931 ಜನರಿಗೆ ನೆಗೆಟಿವ್‌ ಎಂದು ವರದಿ ಬಂದಿದೆ, ಅದರಲ್ಲಿ ನಿಗಾವಣೆಯಲ್ಲಿ 1,545 ಜನರಿದ್ದು ಪ್ರಥಮ ಸಂಪರ್ಕ 666, ದ್ವೀತಿಯ 879 ಜನರಿದ್ದು 653 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರಲ್ಲಿ 287 ಜನ ಗುಣಮುಖರಾಗಿದ್ದಾರೆ. ಇನ್ನೂ ಜಿಲ್ಲಾಕೋವಿಡ್‌ ಆಸ್ಪತ್ರೆಯಲ್ಲಿ 346 ಜನರು ಹಾಗೂ ಐಸಿಯುನಲ್ಲಿ 10 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 20 ಜನರು ಮೃತ ಪಟ್ಟಿದ್ದಾರೆ ಎಂದರು.

ಇಬ್ಬರು ಸಾವು: ಜಿಲ್ಲೆಯಲ್ಲಿ ಕೋವಿಡ್  ಸೋಂಕಿಗೆ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ, ಒಂದೇ ದಿನ ಇಬ್ಬರು ಸೋಂಕಿಗೆ ಬಲಿಯಾಗುವ ಮೂಲಕ ಮೃತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ತುಮಕೂರಿನ ಜಯನಗರ ಬಡಾವಣೆಯ 58 ವರ್ಷದ ಮಹಿಳೆ ಸೋಂಕಿಗೆ ಬಲಿಯಾಗಿದ್ದಾರೆ, ಜು.16 ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಗಂಟಲು ದ್ರವ ಪರೀಕ್ಷಿಸ ಲಾಗಿತ್ತು, ಅಂದೇ ಮರಣ ಹೊಂದಿದ್ದು ಲ್ಯಾಬ್‌ ವರದಿಯಲ್ಲಿ ಕೊರೊನಾ ದೃಢಪಟ್ಟಿದೆ. ತುಮಕೂರು ಸದಾಶಿವನಗರದ 23 ವರ್ಷದ ಯುವತಿ ಜು.9ರಂದು ಉಸಿ ರಾಟ ತೊಂದರೆ ಜ್ವರದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು ಅವರ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಅವರಿಗೆ ಕೋವಿಡ್ ಇರು ವುದು ದೃಢವಾಗಿತ್ತು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next