Advertisement

Statement: ಡಿಕೆಸು ಸೋಲಿಗೆ ಸಿದ್ದರಾಮಯ್ಯ ಆ್ಯಂಡ್‌ ಅಹಿಂದ ಟೀಂ ಕಾರಣ: ಬಿ.ಸುರೇಶ್‌ ಗೌಡ

09:09 PM Jun 08, 2024 | Team Udayavani |

ತುಮಕೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಹೋದರ ಡಿ.ಕೆ.ಸುರೇಶ್‌ ಸೋಲಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಆ್ಯಂಡ್‌ ಟೀಂ ಕಾರಣ. ಕಾಂಗ್ರೆಸ್‌ನವರ ಒಳಜಗಳದಿಂದ ಇನ್ನು 6 ತಿಂಗಳಲ್ಲಿಯೇ ರಾಜ್ಯ ಸರ್ಕಾರ ಪತನವಾಗುವುದು ಖಚಿತ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯನವರೇ ಮುಂದುವರಿಯಬೇಕೆಂದು ಒಂದು ಅಹಿಂದ ಟೀಂ ಯಾವಾಗಲೂ ಕೆಲಸ ಮಾಡುತ್ತದೆ. ಆ ಅಹಿಂದ ಟೀಂ ಮತ್ತು ಸಿದ್ದರಾಮಯ್ಯ ಸೇರಿ ಡಿ.ಕೆ ಸುರೇಶ್‌ ಅವರನ್ನು ಸೋಲಿಸಿದ್ದಾರೆ ಎಂದರು. ನಾನು ಚುನಾವಣೆಗೆ ಮೊದಲೇ ಹೇಳಿದ್ದೆ. ಜಾರಕಿಹೊಳಿ, ಪರಮೇಶ್ವರ್‌, ಕೆ.ಎನ್‌.ರಾಜಣ್ಣ, ಸಿದ್ದರಾಮಯ್ಯ ಇಷ್ಟೂ ಜನ ಸೇರಿ ಡಿ.ಕೆ ಸುರೇಶ್‌ ಅವರನ್ನ ಸೋಲಿಸ್ತಾರೆ ಎಂದಿದ್ದೆ. ನಾನು ಹೇಳಿದ್ದೆ. ರಿಪೀಟ್‌ ಆಗಿದೆ. 2 ಲಕ್ಷ ಮತಗಳ ಅಂತರದಿಂದ ಸೋಲಿಸ್ತಾರೆ ಅಂತಾನೂ  ಹೇಳಿದ್ದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next