Advertisement

Renuka Swamy Case: ಪ್ರಕರಣದಲ್ಲಿ ಪವಿತ್ರಾ ಗೌಡ ಏನೂ ತಪ್ಪು ಮಾಡಿಲ್ಲ!.. ಮಾಜಿ ಪತಿ

11:44 AM Jun 13, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 14 ಮಂದಿ ಬಂಧನವಾಗಿದ್ದು, ಉಳಿದ ಮೂವರಿಗಾಗಿ ಶೋಧ ನಡೆಯುತ್ತಿದೆ.

Advertisement

ಪ್ರೇಯಸಿ ಪವಿತ್ರಾ ಗೌಡಗೆ ಆಶ್ಲೀಲ ಮೆಸೇಜ್ ಮಾಡಿದ ಎನ್ನುವ ಕಾರಣಕ್ಕಾಗಿ ದರ್ಶನ್ ಅಭಿಮಾನಿಯೆಂದು ಹೇಳಲಾಗುತ್ತಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬವನನ್ನು ಅಪಹರಣ ಮಾಡಿ ಬೆಂಗಳೂರಿನ ಶೆಡ್ ವೊಂದರಲ್ಲಿ ಚಿತ್ರಹಿಂಸೆ ಕೊಟ್ಟು ಹತ್ಯೆಗೈದು ಮೃತದೇಹವನ್ನು ಮೋರಿಗೆ ಎಸೆಯಲಾಗಿತ್ತು.

ಈ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ನಾನಾ ಅಂಶಗಳು ಬೆಳಕಿಗೆ ಬರುತ್ತಿದೆ.

ಎ1 ಆಗಿರುವ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ ಎನ್ನುವವರು ಪ್ರಕರಣದ ಬಗ್ಗೆ ಮೊದಲ ಬಾರಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಮಾಜಿ ಪತ್ನಿ ಪವಿತ್ರ ಗೌಡ ಅವರದು ಈ ಪ್ರಕರಣದಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರ ಪರ ವಹಿಸಿದ್ದಾರೆ.

“ನನಗೆ ನೋವಾದರೆ ನಾನು ಹೋಗಿ ನನ್ನ ಹೆಂಡತಿ ಬಳಿ ಹೇಳಿಕೊಳ್ಳುತ್ತೇನೆ. ಹಾಗೇ ಪವಿತ್ರಾ ಅವರ ಮನಸ್ಸಿಗೆ ನೋವಾಗಿದೆ. ಇದನ್ನು ಅವರು ಅವರ ಗಂಡ(ದರ್ಶನ್) ನ ಬಳಿ ಹೇಳಿದ್ದಾರೆ. ಇದರಲ್ಲಿ ದರ್ಶನ್ ಅವರು ಒಬ್ಬ ಸೂಪರ್ ಸ್ಟಾರ್ ಆಗಿ ಆತುರದ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಅವರು ತಪ್ಪು ಹೆಜ್ಜೆಯನ್ನು ಇಡಬಾರದಿತ್ತು. ಅವರು ಸರಿ ದಾರಿಯಲ್ಲಿ ಹೋಗಿದ್ರೆ ಇಷ್ಟೆಲ್ಲಾ ಆಗ್ತಾ ಇರಲಿಲ್ಲ. ಎಂದು ಹೇಳಿದ್ದಾರೆ.

Advertisement

“ಇಲ್ಲಿ ಪದೇ ಪದೇ ಎ1 ಪವಿತ್ರಾ ಎಂದು ಹೇಳುತ್ತಿದ್ದೀರಿ. ಇಲ್ಲಿ ತಪ್ಪು ಎಲ್ಲಿಂದ ಶುರುವಾಗಿದ್ದು. ತಪ್ಪು ಮಾಡಿದ್ದು ಮೃತ ರೇಣುಕಾಸ್ವಾಮಿ. ಅವರಿಗೆ ಮದುವೆಯಾಗಿದೆ. ಅವರ ಪತ್ನಿ ಜೊತೆ ಈ ರೀತಿ ಆಶ್ಲೀಲ‌ ಮೆಸೇಜ್ ಮಾಡಿ ವರ್ತಿಸಿದ್ರೆ ಅವರು ಸುಮ್ಮನೆ ಇರುತ್ತಿದ್ದಾರಾ? ನನ್ನ ಪ್ರಕಾರ ಇಲ್ಲಿ ಪವಿತ್ರಾ ಅವರು ಮಾಡಿದ್ದು ಸರಿ. ಪವಿತ್ರಾ ಅವರು ಮಾಡಿದ್ದರಲ್ಲಿ ಏನೂ ತಪ್ಪಿಲ್ಲ. ಅವರಿಗೆ ನೋವಾಗಿದೆ ಅದಕ್ಕೆ ಅವರು ತನ್ನ ಗಂಡನ ಬಳಿ ಹೋಗಿ ಹೇಳಿದ್ದಾರೆ ಅಷ್ಟೇ” ಎಂದರು.

ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ 2002 ರಲ್ಲಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪವಿತ್ರಾ ಗೌಡ ಅವರ ಪರಿಚಯವಾಗಿ, ಇಬ್ಬರ ನಡುವೆ ಪ್ರೀತಿ ಆಗಿತ್ತು. ಬಳಿಕ ಮದುವೆಯಾದ ಇವರು, ಆ ಬಳಿಕ ದೂರವಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗುವಿದೆ ಎಂದು ವರದಿಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next