Advertisement

ವಾಲ್ಮೀಕಿ ನಿಗಮದ ಅಕ್ರಮದಲ್ಲಿ  ಪಾತ್ರವಿಲ್ಲ: ಶಾಸಕ ದದ್ದಲ್‌ ಸ್ಪಷ್ಟನೆ

10:44 PM Jun 08, 2024 | Team Udayavani |

ರಾಯಚೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ನನ್ನ ಪಾತ್ರವಿರುವ ದಾಖಲೆಗಳಿದ್ದರೆ ತನಿಖಾ ಸಂಸ್ಥೆಗೆ ಒದಗಿಸುವಂತೆ ಶಾಸಕ ಬಸನಗೌಡ ದದ್ದಲ್‌ ತಾಕೀತು ಮಾಡಿದ್ದಾರೆ.

Advertisement

ದದ್ದಲ್‌ ಅವರೇ ನಿಗಮದ ಅಧ್ಯಕ್ಷರಾಗಿರುವುದರಿಂದ ಅವರ ಅನುಮತಿ ಇಲ್ಲದೆ ಇಷ್ಟೊಂದು ಹಣ ಹೇಗೆ ವರ್ಗಾವಣೆಯಾಗಲು ಸಾಧ್ಯ ಎಂಬ ವಿಪಕ್ಷ ಆರೋಪಕ್ಕೆ  ಪ್ರತಿಕ್ರಿಯಿಸಿರುವ ದದ್ದಲ್‌, ನಾನು ಅಧ್ಯಕ್ಷನಾದ ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಾಯಿತು. ಹೀಗಾಗಿ ಈವರೆಗೆ ಯಾವುದೇ ಹಣದ ವಹಿವಾಟು ನಡೆದಿಲ್ಲ. ಈ ಅಕ್ರಮಕ್ಕೂ ನನಗೂ  ಸಂಬಂಧವಿಲ್ಲ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದುರುದ್ದೇಶದಿಂದ ನನ್ನ ಹೆಸರನ್ನು ತಳಕು ಹಾಕುವ ಮೂಲಕ  ಷಡ್ಯಂತ್ರ ರೂಪಿಸುತ್ತಿದ್ದಾರೆ. ಪರಿಶಿಷ್ಟ ಪಂಗಡ ಮೀಸಲಾತಿಯಡಿ ಗೆಲುವು ಸಾಧಿ ಸಿರುವ ನಾನು ಯಾವುದೇ ಕಾರಣಕ್ಕೂ ಎಸ್‌ಟಿ ಸಮುದಾಯಕ್ಕೆ ಎರಡು ಬಗೆಯಲಾರೆ. ವಾಲ್ಮೀಕಿ ಸಮಾಜ ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಎಂದೂ ದ್ರೋಹ ಬಗೆಯುವ ಚಿಂತನೆ ಮಾಡಿಲ್ಲ ಎಂದಿದ್ದಾರೆ.

ಯೂನಿಯನ್‌ ಬ್ಯಾಂಕ್‌ ನೀಡಿದ ದೂರಿನ ಮೇರೆಗೆ ಸಿಬಿಐ ಈಗಾಗಲೇ ಅಕ್ರಮ ಹಣ ವರ್ಗಾವಣೆ ತನಿಖೆ ಆರಂಭಿಸಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಐವರನ್ನು ಬಂ ಧಿಸಲಾಗಿದೆ. ನಿಗಮದ ಹಣ ಯಾರೇ ಕಬಳಿಸಲು ಯತ್ನಿಸಿದರೂ ತನಿಖೆಯಲ್ಲಿ ಸತ್ಯ ಬಯಲಾಗಲಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಲಿದೆ. ಇಲ್ಲಿ ಯಾರನ್ನೂ ರಕ್ಷಿಸುವ ಮಾತೇ ಇಲ್ಲ. ನನ್ನ ವಿರುದ್ಧ ಆರೋಪಿಸುವವರಲ್ಲಿ ದಾಖಲೆಗಳಿದ್ದರೆ ಅವುಗಳನ್ನು ತನಿಖಾ ತಂಡಕ್ಕೆ ಕೊಡಲಿ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next