Advertisement
ವಿಸ್ತಾರವಾಗಿ ಮುಗಿಲೆತ್ತರಕ್ಕೆ ಕಂಗೊಳಿಸುತ್ತಾ ನೋಡುಗರನ್ನು ಕೈಬೀಸಿ ಕರೆಯುವ ಕಾಕಾದ್ರಿಪರ್ವತ ಪಾವಗಡದಿಂದ 26 ಕಿ.ಮೀ. ದೂರದಲ್ಲಿದೆ.
ಶ್ರೀರಾಮಚಂದ್ರನೂ ನೂರಾಒಂದು ಶಿವಲಿಂಗಗಳನ್ನು ಸ್ಥಾಪನೆ ಮಾಡಬೇಕಾಗಿತ್ತು. ಆದ್ದರಿಂದ ಇಲ್ಲಿಯೂ ಒಂದು ಶಿವಲಿಂಗವನ್ನು ಇಟ್ಟು ಪೂಜಿಸುತ್ತಿದ್ದರು. ಈ ಶಿವಲಿಂಗವನ್ನಿಟ್ಟು ಇಂದು ದೇವಸ್ಥಾನವನ್ನು ಕಟ್ಟಿ ಶ್ರೀರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನ ಎಂದು ಕರೆಯುತ್ತಾರೆ.
Related Articles
Advertisement
ಈ ಸಿದ್ದರಗವಿಯಲ್ಲಿ ಕೇವಲ ಒಬ್ಬರು ಮಾತ್ರ ಒಳಪ್ರವೇಶಿಸುವಷ್ಟು ಜಾಗವಿದೆ. ಒಳಗೆ ಹೋಗುವಾಗ ನುಸಳಿಕೊಂಡು ಹೋಗಬೇಕು. ಒಳಗೆ ಹೋದಂತೆ ವಿಸ್ತಾರವಾಗುತ್ತದೆ. ಹೋಗುವಾಗ ಹಲವಾರು ಗವಿಗಳು ಸಿಗುವುದರಿಂದ ಅನುಭವವಿರುವರ ಜೊತೆಗೆ ಹೋಗಬೇಕಾಗುತ್ತದೆ. ಇಲ್ಲದಿದ್ದರೆ ತಪ್ಪಿಸಿಕೊಳ್ಳುತ್ತಾರೆಂದು ಹೇಳುತ್ತಾರೆ. ಒಳಗೆ ಹೊದಂತೆ ಮೊಳಕಾಲಿನಲ್ಲಿ, ಬಗ್ಗಿ ನಡೆಯುಬೇಕಾಗುತ್ತದೆ. ಇನ್ನು ಮುಂದೆ ನುಸಳಿಕೊಂಡು ಹೋಗಬೇಕು. ಇಲ್ಲಿ ಗಂಗಾಜಲವಿದ್ದು. ಈ ನೀರನ್ನು ಕುಡಿದರೆ ಆರೋಗ್ಯವಂತ ರಾಗುತ್ತಾರೆ ಎನ್ನುವ ನಂಬಿಕೆ ಇದೆ.
ಶ್ರೀರಾಮಚಂದ್ರ ಕಾಕರಾಜನನ್ನು ಹಿಮ್ಮೆಟ್ಟಿಸಿಕೊಂಡು ಹುಲ್ಲಿನ ದಭೆìಯನ್ನು ಎಸೆಯುವಾಗ, ಬೆಟ್ಟದ ಪಶ್ಚಿಮ ಭಾಗಕ್ಕೆ ಬಂದು ಬೆಟ್ಟದ ಬುಡದಲ್ಲಿ ಬಲಗಾಲನ್ನು ಮುಂದೆ ಇಟ್ಟು ಎಡಪಾದದ ಮೊಣಕಾಲನ್ನು ಬಗ್ಗಿಸಿಕೊಂಡು ಕಾಕರಾಜನ ಮೇಲೆ ಆಯುಧವನ್ನು ಎಸೆಯುಯತ್ತಾನೆ. ಈ ಎರಡು ಪಾದಗಳನ್ನು ರಾಮ ಪಾದಗಳೆಂದು ಹೇಳಲಾಗುತ್ತದೆ. ಭಕ್ತಾಧಿಗಳು ಬೆಟ್ಟದ ದಕ್ಷಿಣಾಭಿಮುಖವಾಗಿ ಬರುವಾಗ ದೇವಸ್ಥಾನದ ಸುತ್ತ ಕೋಟೆಗಳಿದ್ದು. ಈ ಕೋಟೆಗಳ ಮುಂದೆಯೇ ರಾಮನ ಎಡಗಾಲ ಪಾದವನ್ನು ನೋಡಿಕೊಂಡು ಒಳಪ್ರವೇಶಿಸುತ್ತಾರೆ.
ತಿರುಪತಿ ತಿಮ್ಮಪ್ಪನ ನಿಜವಾದ ನೆಲೆಯೇ ಕಾಕಾದ್ರಿಪರ್ವತ ಎಂದೂ ಹೇಳುವವರು ಇದ್ದಾರೆ. ಬಾಲೇಂತ ಗುಂಡು
ಇಲ್ಲಿರೋ ಬಾಲೇಂತ ಗುಂಡಿನ ಬಗ್ಗೆ ಇನ್ನೊಂದು ಕತೆ ಇದೆ. ಅರಿಕೆ ಮಾಡಿಕೊಂಡಿದ್ದ ಗರ್ಭಿಣಿ ಯೊಬ್ಬಳು ಕಾಮನದುರ್ಗ ಬೆಟ್ಟ ಹತ್ತುವ ಆಸೆುಂದ ಹತ್ತಿದಳಂತೆ. ಈ ಸಂದರ್ಭದಲ್ಲಿ ಬೆಟ್ಟದ ಮಧ್ಯೆಯಲ್ಲಿ ಜೋರಾದ ಮಳೆ . ಆಕೆ ಒಂದು ಬಂಡೆ(ಗುಂಡು)ಯ ಪಕ್ಕ ಆಶ್ರಯಪಡೆದು ಕೊಂಡಾಗ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿತು. ಬಂಡೆಯ ರೂಪದಲ್ಲೇ ದೇವರು ಬಂದು, ಬಾಗಿ ಮಹಿಳೆಗೆ ಆಶ್ರಯ ನೀಡಿದರಂತೆ. ಆದ್ದರಿಂದ ಇದನ್ನ ಬಾಲೇಂತಗುಂಡು ಎಂದು ಕರೆಯುತ್ತಾರೆ. ಇದು ಬೆಟ್ಟದ ಮಧ್ಯಭಾಗದಲ್ಲಿರುವ ಕಾರಣ ಭಕ್ತಾಧಿಗಳು ಈ ಬಂಡೆಯ ಕೆಳಗೆ ಕೆಲವು ಸಮಯ ಕುಳಿತು ಸುಧಾರಿಸಿಕೊಂಡು ಹೋಗುತ್ತಾರೆ. ಈ ಕಾಕಾದ್ರಿ ಪರ್ವತ ಏಳು ಗಿರಿಶಿಖರಗಳಿಂದ ಕೂಡಿದೆ. ಒಂದೂಂದು ಗಿರಿಶಿಖರಕ್ಕೂ ಒಂದು ಹೆಸರಗಳಿವೆ. 1. ನಿಚ್ಚಿಣಿ ಕುಪ್ಪ ಅಕ್ಕಮ್ಮಾಗಾರುÉ ಬೆಟ್ಟ 2. ದುರ್ಗದ ಬೆಟ್ಟ 3. ಹುಲಿಯಾಕಾರದ ಬೆಟ್ಟ 4. ತಿಮ್ಮನಾಯಕನ ಬೆಟ್ಟ 5. ಬೂದಿಬೆಟ್ಟ 6. ದೊಡ್ಡಬೆಟ್ಟ 7. ಚಿಕ್ಕಬೆಟ್ಟ ಹೀಗೆ ಏಳುಬೆಟ್ಟಗಳಿಂದ ಕೂಡಿದ ವೈವಿದ್ಯಮಯವಾದ ಬೆಟ್ಟವೇ ಕಾಕಾದ್ರಿಪರ್ವತ. ಬೆಟ್ಟದ ಮೇಲಿಂದ ನೋಡಿದರೆ ಒಂದರ ಹಿಂದೆ ಒಂದರಂತೆ ಏಳು ಗಿರಿದಾಮಗಳು ಕಾಣಸಿಗುತ್ತವೆ. ಈ ಬೆಟ್ಟದಲ್ಲಿ ಹಲವಾರು ಗೀಡಮೂಲಿಕೆಯ ಸಸ್ಯಗಳು ಸಿಗುತ್ತವೆ. ಇಲ್ಲಿಗೆ ಕರ್ನಾಟಕ ಅಲ್ಲದೆ ಆಂಧ್ರದಿಂದಲೂ ಸಹ ದೂರ ದೂರ ಊರುಗಳಿಂದ ಭಕ್ತಾಧಿಗಳು ಬರುತ್ತಾರೆ. ಇಲ್ಲಿನ ಶ್ರೀರಾಮಲಿಂಗೇಶ್ವರನಿಗೆ ರಾಮನವಮಿ, ವಿಜಯದಶಮಿ, ಶಿವರಾತ್ರಿಯಂದು ಭಕ್ತಾಧಿಗಳು ಸೇರಿ ರಾತ್ರಿಯೆಲ್ಲ ರಾಮಭಜನೆ ಮಾಡುತ್ತಾರೆ. ಪ್ರತಿವರ್ಷವೂ ಸುಮಾರು ಒಂದುವರೆಯಿಂದ ಎರಡು ಸಾವಿರ ಭಕ್ತಾಧಿಗಳು ಸೇರುತ್ತಾರೆ. ವಿಷ್ಣುವರ್ಧನ ನಾಯ್ಕ