Advertisement
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿರುವಂತೆಯೇ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಯಾತ್ರೆಗಳನ್ನು ಆರಂಭಿ ಸಿದ್ದು, ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ, ಬಿಜೆಪಿ ಸಂಕಲ್ಪ ಯಾತ್ರೆ, ಈಗ ಜೆಡಿಎಸ್‌ನಿಂದ ಪಂಚರತ್ನ ಯಾತ್ರೆ ನಡೆ ಯುತ್ತಿದ್ದು, ಜೆಡಿಎಸ್ ಪ್ರಾಬಲ್ಯವಿರುವ ಕಡೆ ಗಳಲ್ಲಿ ಜೆಡಿಎಸ್‌ಇನ್ನೂ ಪ್ರಾಬಲ್ಯ ಸಾಧಿಸಲು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಂಕಲ್ಪತೊಟ್ಟು ಆರಂಭಿಸಿರುವ ಪಂಚರತ್ನ ಯಾತ್ರೆಗೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ದೊರೆತಿದೆ.
Related Articles
Advertisement
ಜನ ಬೆಂಬಲಕ್ಕೆ ಪುಳಕಿತ: ಕಳೆದ ಚುನಾವಣೆ ಯಲ್ಲಿ ಕಡಿಮೆ ಅಂತರದಲ್ಲಿ ಸೋತ ಅಭ್ಯರ್ಥಿ ಗಳನ್ನು ಗೆಲ್ಲಿಸಿಕೊಳ್ಳಬೇಕು ಎಂದು ನಿರ್ಧರಿಸಿರುವ ಕುಮಾರಸ್ವಾಮಿ, ಆ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಈ ಗಾಗಲೇ ತುಮಕೂರು, ಮಧುಗಿರಿ, ಕೊರಟಗೆರೆಯಲ್ಲಿ ಮತ್ತು ಭಾನು ವಾರ ಪಾವಗಡದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ತೋರಿ ಬಂದ ಜನ ಬೆಂಬಲಕ್ಕೆ ಪುಳಕಿತರಾಗಿದ್ದು, ಈ ಹಿಂದೆ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದಂತೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನ ಗೆಲ್ಲುತ್ತದೆ ಎನ್ನುವ ವಿಶ್ವಾಸ ಹೊಂದಿದ್ದಾರೆ.
1994, 2004 ಮರುಕಳಿಸುವಿಕೆ: ತುಮಕೂರು ಜಿಲ್ಲೆಯಲ್ಲಿ 1994ರಲ್ಲಿ ಜನತಾದಳ ಹಾಗೂ 2004ರಲ್ಲಿ ಜೆಡಿಎಸ್ ಅತ್ಯಧಿಕ ಸ್ಥಾನ ಗಳಲ್ಲಿ ಗೆಲುವು ಸಾಧಿಸಿದ್ದು, ಈ ಬಾರಿಯೂ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಲು ಜಿಲ್ಲೆಯ 11 ಸ್ಥಾನಗಳಲ್ಲೂ ಜೆಡಿಎಸ್ ಗೆಲ್ಲಲು ಚುನಾವಣಾ ರಣತಂತ್ರ ರೂಪಿಸುವಲ್ಲಿ ನಾವು ಹಿಂದುಳಿದಿಲ್ಲ. 1994, 2004ರ ಚುನಾ ವಣಾ ಫಲಿತಾಂಶ ಮರುಕಳುಹಿಸಲಿದೆ ಎನ್ನುತ್ತಾರೆ ಜೆಡಿಎಸ್ ಮುಖಂಡರು.
2023 ರ ಚುನಾವಣೆಯಲ್ಲಿ ಹಣದಾಹಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳನ್ನು ಬರುವ ಚುನಾವಣೆಯಲ್ಲಿ ಸೋಲಿಸಿ ರೈತಪರ, ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರಲು ಜೆಡಿಎಸ್ ಗೆ ಪೂರ್ಣ ಬಹುಮತ ನೀಡಿ ಜಿಲ್ಲೆಯಲ್ಲಿ ಹೆಚ್ಚು ಸ್ಥಾನದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲಿಸಿರಿ ನಾನು ಘೋಷಿಸಿರುವ ಪಂಚರತ್ನ ಯೋಜನೆಗಳನ್ನು ನಾನು ಜಾರಿಗೆ ತರಲು ಸಿದ್ಧನಿದ್ದೇನೆ. -ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಲು ಶ್ರಮ ಹಾಕುತ್ತೇವೆ. ಎಚ್.ಡಿ. ಕುಮಾರ ಸ್ವಾಮಿ ಯವರು ಸಂಕಲ್ಪ ತೊಟ್ಟು ಪಂಚರತ್ನ ಯಾತ್ರೆಯ ಮೂಲಕ ಪಕ್ಷ ಬಲ ಪಡಿಸುತ್ತಿದ್ದು, ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುವುದು ಖಚಿತ. ಕುಮಾರ ಸ್ವಾಮಿ ಅವರು ಮತ್ತೂಮ್ಮೆ ಸಿಎಂ ಆಗ ಬೇಕೆಂದು ಜನ ಬಯಸಿದ್ದಾರೆ. – ಆರ್.ಸಿ.ಆಂಜನಪ್ಪ, ಜಿಲ್ಲಾಧ್ಯಕ್ಷರು ಜೆಡಿಎಸ್
ತುಮಕೂರು ನಗರದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಪಂಚರತ್ನ ಯಾತ್ರೆ ಯಿಂದ ನಗರದಲ್ಲಿ ಜೆಡಿಎಸ್‌ಗೆ ಭಾರೀ ಪ್ರಮಾಣದಲ್ಲಿ ಜನ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಲ್ಲಿಯೂ ಉತ್ತಮ ಸ್ಪಂದನೆ ದೊರೆ ತಿದ್ದು ಮುಂಬರುವ ವಿಧಾನಸಭಾ ಚುನಾವ ಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವುದು ಖಚಿತ. -ಎನ್.ಗೋವಿಂದರಾಜು, ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ
-ಚಿ.ನಿ.ಪುರುಷೋತ್ತಮ್