ತುಮಕೂರು: ಕಲ್ಪತರು ನಾಡಿನಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೋವಿಡ್ 19 ಕಡಿಮೆ ಯಾಗಿತು ಅಂದು ಕೊಂಡಿದ್ದ ಜನರಿಗೆ ಸೋಂಕು ಉಲ್ಬಣವಾಗು ತ್ತಲೇ ಇದ್ದು ಶತಕದತ್ತ ಮುನ್ನೆಡೆಯುತ್ತಾ ಭಾನುವಾರ ಒಂದೇ ದಿನ 18 ಜನ ಜನರಿಗೆ ಸೋಂಕು ದೃಢವಾಗಿ ಸೋಂಕಿತರ ಸಂಖ್ಯೆ 93 ಕ್ಕೇರಿಕೆಯಾಗಿ, ಇನ್ನೂ ಒಬ್ಬರು ಮೃತಪಟ್ಟಿದ್ದು ಮೃತರ ಸಂಖ್ಯೆ 5ಕ್ಕೇರಿದೆ.
ಜನರಲ್ಲಿ ಹೆಚ್ಚಿದ ಆತಂಕ: ದೇಶದ ಎಲ್ಲಾಕಡೆ ಲಾಕ್‌ಡೌನ್ ತೆಗೆದಿರುವ ಹಿನ್ನೆಲೆಯಲ್ಲಿ ಜನರ ಓಡಾಟ ಜಾಸ್ತಿಯಾಗಿದೆ. ಹೊರ ರಾಜ್ಯ ದಿಂದ ಜಿಲ್ಲೆಗೆ ಬರುವವರೂ ಜಾಸ್ತಿಯಾಗು ತ್ತಿದ್ದಾರೆ. ಬಂದಿರುವವರಿಗೆ ಸೋಂಕು ಇರುವುದು ಪತ್ತೆಯಾಗುತ್ತಲೇ ಇದೆ. ಇನ್ನೂ ಸಾವಿರಾರು ಜನರ ಲ್ಯಾಬ್ ವರದಿ ಬಾಕಿ ಇದ್ದು ಇನ್ನೂ ಹಲವರಲ್ಲಿ ಕೋವಿಡ್ 19 ಪಾಸಿಟಿವ್ ಬರುವ ಲಕ್ಷಣಗಳೇ ಹೆಚ್ಚು ಗೋಚರ ವಾಗುತ್ತಿದ್ದು, ಈಗಿನ ವಾತಾವರಣ ನೋಡಿದರೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿ ತರು ಸಂಖ್ಯೆ ನೂರನ್ನು ದಾಟಿ ಮುನ್ನೆಡೆಯುವ ಸಾಧ್ಯತೆ ಇದೆ ಎನ್ನುವ ಆತಂಕ ಜನರನ್ನು ಕಾಡುತ್ತಿದೆ.
ಮಾಸ್ಕ್ ಧರಿಸದ ಜನತೆ: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರು ಹೆಚ್ಚುತ್ತಿರುವುದ ರಿಂದ ನಾಗರಿಕರು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು. ಆದ್ದರಿಂದ ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಗಡೆ ಹೋಗಬಾರದು. ಸಾರ್ವಜನಿಕರು ಸರ್ಕಾ ರದ ನಿರ್ದೇಶನಗಳನ್ನು ಪಾಲಿಸಿ ತಮ್ಮ ಆರೋಗ್ಯದ ಕಡೆ ಗಮನ ನೀಡಬೇಕು ಎಂದು ಜಿಲ್ಲಾಡಳಿತ ಎಚ್ಚರಿಕೆ ಮೂಡಿಸುತ್ತಿದೆ. ಆದರೆ ಜನ ಮಾತ್ರ ತಮ್ಮ ಪಾಡಿಗೆ ತಾವು ಸಾಮಾಜಿಕ ಅಂತರ ಬಿಟ್ಟು ಮುಖಕ್ಕೆ ಮಾಸ್ಕ್ ಕೂಡಾ ಧರಿಸದೇ ಸಂಚಾರ ಮಾಡುವುದು ಕಂಡು ಬರುತ್ತಲೇ ಇದೆ.
ಕೋವಿಡ್ 19ದಿಂದ ಮೃತರ ಸಂಖ್ಯೆ 5ಕ್ಕೆ ಏರಿಕೆ: ಜಿಲ್ಲೆಯಲ್ಲಿ ಈ ವರೆಗೆ 17,399 ಜನರ ಗಂಟಲು ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗಿದೆ. ಅದರಲ್ಲಿ 1,5369 ಜನರಿಗೆ ನೆಗೆಟಿವ್ ಬಂದಿದೆ, 93 ಜನರಿಗೆ ಕೋವಿಡ್ 19 ಪಾಸಿಟಿವ್ ಕಂಡು ಬಂದಿದ್ದು ಈವರೆಗೆ ಈ ಸೋಂಕಿನಿಂದ 5 ಜನರು ಮೃತರಾಗಿದ್ದಾರೆ. 39 ಜನ ಗುಣಮುಖರಾಗಿದ್ದು, 49 ಜನ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಅದರಲ್ಲಿ ಇನ್ನೂ 1,747 ಜನರ ಲ್ಯಾಬ್ ವರದಿ ಬರಬೇಕಾಗಿದೆ. ದರಲ್ಲಿ ಎಷ್ಟು ಜನರಿಗೆ ಸೋಂಕು ಇರುವುದೋ ತಿಳಿಯದಾಗಿದೆ.
ತುಮಕೂರು ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ಇರುವ ಆರ್.ಟಿ-ಪಿಸಿಆರ್ ಲ್ಯಾಬ್‌ನಲ್ಲಿ ಪ್ರತಿದಿನ 700 ಗಂಟಲು ದ್ರವ ಪರೀಕ್ಷೆಗೆ ಬರುತ್ತಿದೆ, ದಿನದ 24 ಗಂಟೆಯೂ ಪರೀಕ್ಷೆ ನಡೆಸಲಾಗು ವುದು, ಪ್ರತಿದಿನ 350 ಜನರ ಗಂಟಲು ದ್ರವ ಪರೀಕ್ಷೆಯನ್ನು ಜಿಲ್ಲಾ ಆಸ್ಪತ್ರೆಯ ಕೋವಿಡ್ ಲ್ಯಾಬ್‌ನಲ್ಲಿ ಮಾಡಲಾಗುತ್ತಿದೆ, ಹೆಚ್ಚುವರಿಯನ್ನು ಬೆಂಗಳೂರಿಗೆ ಕಳುಹಿಸಲಾಗುವುದು.
-ಡಾ.ವೀರಭದ್ರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕ
* ಚಿ.ನಿ.ಪುರುಷೋತ್ತಮ್