ತುಮಕೂರು: ಶಿವಮೊಗ್ಗದ ಹುಣಸೋಡು ದುರಂತ ಮಾಸುವ ಮುನ್ನವೇ ತುಮಕೂರು ಜಿಲ್ಲೆಯ ಮಸ್ಕಲ್ ಗ್ರಾಮದಲ್ಲಿ ಜೆಲಿಟಿನ್ ಕಡ್ಡಿ ಸ್ಪೋಟಗೊಂಡಿದ್ದು ಮನೆಯೊಂದು ಧ್ವಂಸಗೊಂಡಿದೆ.
ಕ್ರಷರ್ ಹಾಗೂ ಕಲ್ಲು ಬಂಡೆಗಳನ್ನು ಸ್ಪೋಟಿಸಲು ಬಳಸುವ ಜಿಲಿಟಿನ್ ಕಡ್ಡಿಗಳನ್ನು ಮನೆಯಲ್ಲಿ ಸಂಗ್ರಹಿಸಲಾಗಿದ್ದು, ಮಸ್ಕಲ್ ಗ್ರಾಮದ ಲಕ್ಷ್ಮಿಕಾಂತ್ ಅವರ ಮನೆ ಸಂಪೂರ್ಣ ಧ್ವಂಸಗೊಂಡಿದೆ. ಇವರು ಕಲ್ಲು ಕ್ವಾರೆಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಸೋಮವಾರ (ಫೆ.1) ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಸೀಟಿನ ಮನೆಯಲ್ಲಿ ಇಟ್ಟಿದ್ದ ಜಿಲಿಟಿನ್ ಕಡ್ಡಿ. ಬಿಸಿಲಿನ ತಾಪಕ್ಕೆ ಸ್ಫೋಟಗೊಂಡಿದೆ. ಈ ವೇಳೆ ಮನೆಯ ಹೊರಗಿದ್ದ ಸುವರ್ಣಮ್ಮ ಎಂಬುವರಿಗೆ ಸಿಮೆಂಟ್ ಶೀಟು ತಗುಲಿ ಸಣ್ಣಪುಟ್ಟ ಗಾಯವಾಗಿದೆ. ಇವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ
ಸ್ಪೋಟದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 2021 ಬಜೆಟ್ ಮಂಡನೆ ನಂತರ ಭಾರತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಾದ ಬದಲಾವಣೆ ಏನು?
ತುಮಕೂರು ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಸಲಾಗುತ್ತಿದ್ದು, ಕಲ್ಲು ಸ್ಪೋಟಿಸಲು ಜಿಲಿಟಿನ್ ಉಪಯೋಗಿಸುತ್ತಾರೆ. ಈ ಹಿಂದೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅವಳಗೆರೆ ಸಮೀಪ ಅಂಕನಬಾವಿ ಬಳಿ 2003 ರಲ್ಲಿ ಜಿಲಿಟಿನ್ ಸ್ಫೋಟದಿಂದ 8 ಜನ ಮೃತಪಟ್ಟಿದ್ದರು.
ಇದನ್ನೂ ಓದಿ: ತ್ರಿಪುರಾ-ಬಾಂಗ್ಲಾ ಗಡಿಯಲ್ಲಿ ಗೋ ಕಳ್ಳ ಸಾಗಣೆ, ಬಿಎಸ್ ಎಫ್ ಮೇಲೆ ಹಲ್ಲೆ: ಗುಂಡಿನ ದಾಳಿ