Advertisement

ಮೆಡಿಕಲ್‌ ಕಾಲೇಜುಗಳಲ್ಲಿ ಶೇ.75 ಹಾಸಿಗೆ ಮೀಸಲಿಡಿ: ಡೀಸಿ

01:06 PM Jan 16, 2022 | Team Udayavani |

ತುಮಕೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವಕೋವಿಡ್‌ ಸೋಂಕು ಪ್ರಕರಣ ನಿಯಂತ್ರಿಸಲು ಮೆಡಿಕಲ್‌ ಕಾಲೇಜುಗಳಲ್ಲಿ ಶೇ. 75ರಷ್ಟು ಹಾಸಿಗೆ ಮೀಸಲಿಡಬೇಕೆಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಖಾಸಗಿ ಆಸ್ಪತ್ರೆ, ಮೆಡಿಕಲ್‌ ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಿ ಮಾತನಾಡಿ, ಮೆಡಿಕಲ್‌ ಕಾಲೇಜುಗಳಲ್ಲಿ ಆಕ್ಸಿಜನ್‌, ಬೆಡ್‌, ಐಸಿಯು, ವೆಂಟಿಲೇಟರ್‌ ಬೆಡ್‌ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಅವುಗಳ ಸಾಮರ್ಥ್ಯದ ಶೇ.75 ಬೆಡ್‌ ಮೀಸಲಿಡಬೇಕೆಂದು ತಿಳಿಸಿದರು.

ನಿರ್ದೇಶನ: ಕೋವಿಡ್‌ ಮೊದಲ ಹಾಗೂ 2ನೇ ಅಲೆಯಲ್ಲಿ ಹಾಸಿಗೆ ಸಿಗದೆ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಡ್‌ ಮೀಸಲಿಡಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಕೋವಿಡ್‌ 2ನೇ ಅಲೆಯಲ್ಲಿದ್ದಷ್ಟು ಒತ್ತಡ 3ನೇ ಅಲೆಯಲ್ಲಿ ಕಂಡುಬಂದಿಲ್ಲ ಎಂದರಲ್ಲದೆ, 1400 ಸಕ್ರಿಯ ಪ್ರಕರಣ ವರದಿ ಯಾಗಿದ್ದರೂ ಆಸ್ಪತ್ರೆಯಲ್ಲಿ 80 ಮಂದಿ ಮಾತ್ರ ದಾಖಲಾಗಿದ್ದಾರೆ. ಮುಂದಿನ 2 ತಿಂಗಳಲ್ಲಿ ಕೋವಿಡ್‌ ಸೋಂಕು ಸಂಖ್ಯೆ ಹೆಚ್ಚಾಗಬಹುದೆಂದು ಮನಗಂಡು ಹಾಸಿಗೆ ಮೀಸಲಿಡಬೇಕೆಂದು ಮೆಡಿಕಲ್‌ ಕಾಲೇಜುಗಳ ಪ್ರತಿನಿಧಿಗಳಿಗೆ ನಿರ್ದೇಶನ ನೀಡಿದರು.

ಪರೀಕ್ಷೆಗೆ ಒಳಪಡಿ: ಜಿಲ್ಲಾದ್ಯಂತ ಶಾಲಾ-ಕಾಲೇಜು ಬಸ್‌ಗಳಲ್ಲಿವಿದ್ಯಾರ್ಥಿಗಳ ದಟ್ಟಣೆ ಹೆಚ್ಚಾಗಿರುವಕಾರಣ, ಸಾಮಾಜಿಕ ಅಂತರ ಕಾಯ್ದು ಕೊಳ್ಳದೆ, ನಿರ್ಲಕ್ಷ್ಯ ವಹಿಸುತ್ತಿರುವುದುಕಂಡುಬಂದಿದೆ. ಅಧಿಕಾರಿಗಳು ಅಂತಹ ಕಡೆ ಕೋವಿಡ್‌ ಪರೀಕ್ಷೆಗೊಳಪಡಿಸ ಬೇಕೆಂದರು.

ಈವರೆಗೂ ಕೋವಿಡ್‌ ಮೊದಲ ಡೋಸ್‌ ತೆಗೆದುಕೊಳ್ಳದವರಿಗೆ ಅರಿವು ಮೂಡಿಸಿ ಲಸಿಕೆ ನೀಡಬೇಕು, ಮುಂಚೂಣಿ ಕಾರ್ಯಕರ್ತರು ಕಡ್ಡಾಯವಾಗಿ ಬೂಸ್ಟರ್‌ ಡೋಸ್‌ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

Advertisement

ರಜೆ ಬಗ್ಗೆ ಚರ್ಚೆ: ಖಾಸಗಿ ಆಸ್ಪತ್ರೆ ಪ್ರತಿನಿಧಿಗಳು ಮಾತನಾಡಿ, ಕನಿಷ್ಠ 10 ದಿನ ಶಾಲೆಗಳಿಗೆ ರಜೆ ಘೋಷಿಸುವುದರಿಂದ ಬಸ್‌ಗಳಲ್ಲಿ ವಿದ್ಯಾರ್ಥಿಗಳ ದಟ್ಟಣೆ ತಡೆಯಬಹುದಾಗಿದ್ದು, ಇದ ರಿಂದ ಮಕ್ಕಳಲ್ಲಿ ಕೋವಿಡ್‌ ಹರಡುವಿಕೆ ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಶಾಲೆಗಳಿಗೆ ರಜೆ ಘೋಷಿ ಸುವ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ನಗರದ ಸಿದ್ಧಾರ್ಥ, ಸಿದ್ಧ ಗಂಗಾ, ಶ್ರೀದೇವಿ, ಟಿಎಚ್‌ಎಸ್‌, ಆದರ್ಶ ಆಸ್ಪತ್ರೆ ಸೇರಿ ಮತ್ತಿತರ ಆಸ್ಪತ್ರೆಗಳ ಪ್ರತಿನಿಧಿಗಳು ಕೋವಿಡ್‌ಗೆ ಸಂಬಂಧಿಸಿದಂತೆ ಮೀಸಲಿಟ್ಟಿರುವ ಹಾಸಿಗೆಗಳಅಂಕಿ ಅಂಶ, ಮುನ್ನೆಚ್ಚರಿಕಾ ಕ್ರಮಗಳಬಗ್ಗೆ ಸಭೆಗೆ ವರದಿ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗೇಂದ್ರಪ್ಪ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್‌ ಕುಮಾರ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮೋಹನ್‌ ದಾಸ್‌, ಡಾ.ಮಹಿಮಾ, ಜಿಲ್ಲಾ ಮಟ್ಟದ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next