Advertisement

ತೈಲ ಬೆಲೆ ಏರಿಕೆ ಖಂಡಿಸಿ “ಕೈ’ಪ್ರತಿಭಟನೆ

08:39 PM Feb 26, 2021 | Team Udayavani |

ತುಮಕೂರು: ತೈಲ ಬೆಲೆ ನಿರಂತರ ಹೆಚ್ಚಳ ಹಾಗೂ ಸ್ಮಾರ್ಟ್‌ ಸಿಟಿ ಕಾಮಗಾರಿಗಳ ವಿಳಂಬದಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಯನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕ ದಿಂದ ಗುರುವಾರ ನಡೆಯಿತು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಹಮ್ಮಿಕೊಳ್ಳಲಾಗಿದ್ದ ಎತ್ತಿನ ಗಾಡಿ ಮತ್ತು ಸೈಕಲ್‌ ಜಾಥಾವನ್ನು ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸೈಯಿದ್‌ ಅಹಮದ್‌ ಉದ್ಘಾಟಿಸಿದರು.

ಕೇಂದ್ರ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ: ಬಳಿಕ ಮಾತನಾಡಿ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ, ಭಾರತದಲ್ಲಿ ನಿರಂತರವಾಗಿ ಇಂಧನ ಬೆಲೆಗಳನ್ನು ಹೆಚ್ಚಳ ಮಾಡುವ ಮೂಲಕ ಕೊರೊನಾ ಸಂಕಷ್ಟದಲ್ಲಿರುವ ರೈತರನ್ನು ಕೇಂದ್ರ ಮತ್ತು ರಾಜ್ಯ ಸರಕಾರ ಸುಲಿಗೆ ಮಾಡುತ್ತಿದೆ. ಇಂಧನ ಬೆಲೆಗಳ ಹೆಚ್ಚಳದ ಪರಿಣಾಮ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿ, ಜನಸಾಮಾನ್ಯರು, ಬಡವರು ಮತ್ತು ಮಧ್ಯಮವರ್ಗದ ಜನರು ಬದುಕುವುದೇ ಕಷ್ಟವಾಗಿದೆ. ಕೇಂದ್ರ ಸರಕಾರ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಇದರ ವಿರುದ್ದ ಕಾಂಗ್ರೆಸ್‌ ನಿರಂತರ ಹೋರಾಟ ರೂಪಿಸಿದ್ದು, ಬೀದಿಗಿಳಿದು ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ ನಡೆಸಲಿದೆ ಎಂದರು.

ಕೇಂದ್ರದಿಂದ ಕ್ರೀಡೆಗೆ ಅಪಮಾನ: ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸದೆ ಅವರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವ ಸರ್ಕಾರ, ಸರಕಾರಿ ಸಾಮ್ಯದ ಸಾರಿಗೆ, ಟೆಲಿಕಾಂ, ಎಚ್‌ಎಎಲ್‌ ನಂತಹ ಕಂಪನಿಗಳನ್ನು ಮಾರಾಟ ಮಾಡಿ, ಅದಾನಿ ಮತ್ತು ಅಂಬಾನಿಯಂತಹ ದೊಡ್ಡ ಬಂಡವಾಳಗಾರರನ್ನು ಪೋಷಿಸುತ್ತಿದೆ. ಗುಜರಾತ್‌ನಲ್ಲಿ ಸರ್ದಾರ್‌ ವಲ್ಲಭಾಯಿ ಪಟೇಲ್‌ ಹೆಸರಿನಲ್ಲಿ ನಿರ್ಮಿಸಿದ್ದ ಕ್ರೀಡಾಂಗಣವನ್ನು ತನ್ನ ಹೆಸರಿಗೆ ಬದಲಾಯಿಸಿಕೊಂಡು. ಕ್ರಿಕೆಟ್‌ ಅಂಕಣದಲ್ಲಿ ಅದಾನಿ, ಅಂಬಾನಿ ಎಂಡ್‌ಗಳನ್ನು ಗುರುತಿಸಿ, ದೇಶದ ಜನರ ಜೊತೆ, ಕ್ರೀಡೆಯನ್ನು ಅಪಮಾನಿಸುತ್ತಿದ್ದಾರೆ. ಇದರ ವಿರುದ್ಧ ಕಾಂಗ್ರೆಸ್‌ ಶಾಂತಿಯುತ ಹೋರಾಟ ರೂಪಿಸಲಿದೆ ಎಂದು ತಿಳಿಸಿದರು.

ಬಿಜೆಪಿಗರು ತುಟಿ ಬಿಚ್ಚುತ್ತಿಲ್ಲ: ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್‌ ಅಹಮದ್‌ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಬೆಲೆ ಏರಿಕೆ ನೀತಿಯಿಂದ ಜನಸಾಮಾನ್ಯರು  ತತ್ತರಿಸಿದ್ದಾರೆ. ನಿತ್ಯ ಬಳಕೆ ವಸ್ತುಗಳಾದ ಗೋಧಿ, ಬೆಳೆ, ಬೆಲ್ಲ, ಅಕ್ಕಿ, ಕಾಳು ಬೆಲೆ ಗಗನ ಮುಖೀಯಾಗಿದ್ದು, ಜನಸಾಮಾ ನ್ಯರು ಬದುಕುವುದೇ ಕಷ್ಟವಾಗಿದೆ. ಇದರ ವಿರುದ್ಧ ನಾವು ನಿರಂತರ ಪ್ರತಿಭಟನೆ ನಡೆಸಲಿದ್ದೇವೆ. ಯುಪಿಎ ಸರ್ಕಾರ ಇದ್ದಾಗ ಒಂದು ರೂ. ಇಂಧನ ಬೆಲೆ ಹೆಚ್ಚಾದರೂ, ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ಸಂಸ ದರು, ಶಾಸಕರು, ಮುಖಂಡರು, ಒಂದೇ ಸಮನೆ ಇಂಧನ ಬೆಲೆ ಹೆಚ್ಚಾಗುತ್ತಿದ್ದರೂ, ತುಟ್ಟಿ ಬಿಚ್ಚುತ್ತಿಲ್ಲ. ಇದು ಬಿಜೆಪಿಯ ಇಬ್ಬಗೆಯ ನೀತಿ. ಅಲ್ಲದೇ, ತುಮಕೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆ ಕಾಮಗಾರಿಗಳು ತೀರ ವಿಳಂಬದಿಂದ ಕೂಡಿದ್ದು, ಇದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಈ ಬಗ್ಗೆ ಜಿಲ್ಲಾ ಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಇದೇ ವೇಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾ ಯಿತು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಆರ್‌.ರಾಮಕೃಷ್ಣ, ಕೆಪಿಸಿಸಿ ವಕ್ತಾರ ಮುರುಳೀಧರ ಹಾಲಪ್ಪ, ಎಚ್‌.ಸಿ. ಹನುಮಂತಯ್ಯ ಮಾತನಾಡಿದರು. ಅಲ್ಪಸಂಖ್ಯಾತರ ಘಟಕದ ಸಂಜೀವ್‌ ಕುಮಾರ್‌, ಶಿವಾಜಿ, ಥಾಮ್‌ ಸನ್‌, ನಿಶಾ, ದಾದಾಪೀರ್‌, ಅಲ್ಲಾಉದ್ದಿನ್‌, ಮುಲ್ಲಾ ಹಾಗೂ ನೂರಾರು ಮಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next