ತುಮಕೂರು: ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದೆ, ತೆರಿಗೆ ಸಂಗ್ರಹವಾಗುತ್ತಿಲ್ಲ, ಬಜೆಟ್ ನಂತರ ಲಾಕ್‌ಡೌನ್ ಆಗಿದ್ದರಿಂದ ಈ ಭಾರಿ ರಾಜಸ್ವ ಸಂಗ್ರಹವೂ ಆಗಿಲ್ಲ, ಬೇರೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ತುಮ ಕೂರು ನಗರ ಅಭಿವೃದ್ಧಿ ಅತ್ಯಂತ ವೇಗವಾಗಿ ನಡೆಯುತ್ತಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು. ನಗರದ 25ನೇ ವಾರ್ಡಿನ ಮುನಿಸಿಪಲ್ ಬಡಾವಣೆಯಲ್ಲಿ 75 ಲಕ್ಷ ರೂ. ವೆಚ್ಚದಲ್ಲಿ 2.5 ಕಿ.ಮೀ. ಸಿ.ಸಿ. ಚರಂಡಿ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ವೆಂದರೆ ತೆರಿಗೆ ಸಂಗ್ರಹ ಕಷ್ಟವಾಗಲಿದೆ ಎಂದರು.
ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ: ರಾಜ್ಯ ಬಜೆಟ್‌ನಲ್ಲಿ ಘೋಷ ಣೆಯಾದ ಅನುದಾನ ಬಿಡುಗಡೆ ಮಾಡಲು ಪ್ರತಿ ತಿಂಗಳು ತೆರಿಗೆ ಸಂಗ್ರಹವಾಗಬೇಕಿತ್ತು. ಆದರೆ ಮಾ.25 ರಿಂದಲೇ ಲಾಕ್‌ಡೌನ್ ಆಗಿದ್ದರಿಂದ ಆರ್ಥಿಕ ಪರಿಸ್ಥಿತಿ ಸುಧಾರಿಸಿಲ್ಲ ಎಂದು ನುಡಿದರು.
ಆರ್ಥಿಕ ಚಟುವಟಿಕೆ ಕುಸಿತ: ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಸರ್ಕಾರದ ನಂತರ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಒಂದೆಡೆ ನೆರೆಹಾವಳಿಯಿಂದ ತತ್ತರಿಸಿದ ಉತ್ತರ ಕರ್ನಾಟಕದ ಭಾಗಕ್ಕೆ ಸಾವಿರಾರು ಕೋಟಿ ರೂ. ಖರ್ಚಾಗಿದ್ದು, ಈಗ ಕೋವಿಡ್ 19ದಿಂದ ರಾಜ್ಯದ ಆರ್ಥಿಕ ಚಟುವಟಿಕೆ ಶೇ.80 ರಷ್ಟು ಕುಸಿದಿದೆ. ಕೇವಲ 20 ರಷ್ಟು ಮಾತ್ರ ಆರ್ಥಿಕ ಚಟುವಟಿಕೆ ನಡೆಯುತ್ತಿವೆ ಎಂದರು.
25 ಕೋಟಿ ಅನುದಾನ: ತೆರಿಗೆ ಸಂಗ್ರಹದಲ್ಲೂ ಭಾರಿ ಇಳಿಕೆ ಕಂಡಿದೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿಗೆ ಅನುದಾನಗಳು ಬಿಡುಗಡೆಯಾಗುವುದು ಕಷ್ಟಸಾಧ್ಯ, ಇಂತಹ ಪರಿಸ್ಥಿತಿಯಲ್ಲಿ ನಮ್ಮ ತುಮಕೂರು ನಗರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಗರದ ಅಭಿವೃದ್ಧಿಗೆ 25 ಕೋಟಿ ರೂ.ಗಳನ್ನು ನೀಡಿರುವುದು ನಮ್ಮ ಅದೃಷ್ಟ ಎಂದೇ ಭಾವಿಸಬೇಕು ಎಂದು ತಿಳಿಸಿದರು.
ಸಿ.ಸಿ. ಚರಂಡಿ ನಿರ್ಮಾಣ: ನಗರದ ಹೃದಯ ಭಾಗದಲ್ಲಿರುವ 25ನೇ ವಾರ್ಡಿನ ಮುನಿಸಿಪಲ್ ಬಡಾವಣೆಯಲ್ಲಿ ವಿವಿಧ ಅಭಿ ವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಮೊದ ಲಿಗೆ ಇಲ್ಲಿ ಚರಂಡಿ ಅವ್ಯವಸ್ಥೆ ಇರುವುದರಿಂದ ಪ್ರಸ್ತುತ 75 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ. ಚರಂಡಿ ನಿರ್ಮಾಣ ಮಾಡಲಾಗುತ್ತಿದೆ ಎಂದರು. ನಿಮ್ಮ ಋಣ ತೀರಿಸುತ್ತಿದ್ದೇವೆ: ಈ ಭಾಗದ ಜನರು ಪ್ರೀತಿ ಯಿಂದ ನಮ್ಮನ್ನು ಆಶೀರ್ವದಿಸಿದ್ದಾರೆ. ಈ ಬಡಾವಣೆಯ ಅಭಿವೃದ್ಧಿ ಮಾಡುವ ಮೂಲಕ ನಿಮ್ಮ ಋಣ ತೀರಿಸುತ್ತಿದ್ದೇವೆ. ಇಲ್ಲಿರುವ ಮಹಾತ್ಮಗಾಂಧಿ ಪಾರ್ಕ್ ನಲ್ಲಿ ದೊಡ್ಡ ಮರವಿದ್ದು, ಟ್ರೀಪಾರ್ಕ್ ಆಗಿ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಈ ಪಾರ್ಕ್‌ನಲ್ಲಿ ಜಿಮ್ ಮತ್ತು ವಾಯು ವಿಹಾರ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು
ತುಮಕೂರು ನಗರದಲ್ಲಿ ಎಲ್ಲೆಲ್ಲಿ ರಾಜಗಾಲುವೆ ಮತ್ತು ಕನ್ಸರ್‌ವೆನ್ಸಿ ಒತ್ತುವರಿಯಾಗಿದೆಯೋ ಕೂಡಲೇ ತೆರವುಗೊಳಿಸಿ, ರಾಜಗಾಲುವೆ ಮತ್ತು ಕನ್ಸರ್‌ವೆನ್ಸಿ ಒತ್ತುವರಿ ಮಾಡಿದ್ದರೆ ಮುಂದೊಂದು ದಿನ ಒತ್ತುವರಿ ತೆರವು ಕಟ್ಟಿಟ್ಟ ಬುತ್ತಿ.
-ಜಿ.ಬಿ.ಜ್ಯೋತಿಗಣೇಶ್, ಶಾಸಕ