ತುಮಕೂರು: ಇಲ್ಲಿನ ಸಿದ್ದಗಂಗಾ ಮಠದ ಬಳಿಯಲ್ಲಿರುವ ಕೃಷಿ ಹೊಂಡದಲ್ಲಿ ನಾಲ್ವರು ನೀರು ಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.14ರ ಸೋಮವಾರ ಮುಂಜಾನೆ ಮತ್ತೆರಡು ಶವಗಳಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ನಾಪತ್ತೆಯಾಗಿದ್ದ ಮತ್ತೆರಡು ಮೃತದೇಹ ಪತ್ತೆಯಾಗಿದೆ.
ಪತ್ತೆಯಾದ ಮೃತದೇಹಗಳನ್ನು ಶಂಕರ್ (11 ವ)ಹಾಗೂ ಮಹಾದೇವಪ್ಪ (40ವ) ಎಂದು ಗುರುತಿಸಲಾಗಿದೆ.
ಭಾನುವಾರ ಮಧ್ಯಾಹ್ನ ನೀರುಪಾಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಷ್ಮಿ ಹಾಗೂ ಹರ್ಷಿತ್ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿದ್ದವು.
ನಾಪತ್ತೆಯಾಗಿದ್ದ ಮತ್ತೆರಡು ಮೃತದೇಹಗಳಿಗಾಗಿ ಅಗ್ನಿಶಾಮಕ ದಳ ನಿರಂತರ ಶೋಧ ಕಾರ್ಯ ಮುಂದುವರೆಸಿದ್ದವು. ಆದರೆ ತಡರಾತ್ರಿಯವರೆಗೂ ಶೋಧ ಕಾರ್ಯ ನಡೆಸಿದರೂ ಮೃತದೇಹಗಳು ಪತ್ತೆಯಾಗಿರಲಿಲ್ಲ.
ಕೊನೆಗೂ ನಾಪತ್ತೆಯಾಗಿದ್ದ ಮತ್ತೆರಡು ಮೃತದೇಹಗಳು ಇಂದು ಪತ್ತೆಯಾಗಿದ್ದು ಮೃತಪಟ್ಟವರ ದೇಹಗಳನ್ನು ಹೊರತೆಗೆಯಲಾಗಿದೆ
ಸ್ಥಳದಲ್ಲಿ ಮೃತಪಟ್ಟ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸದ್ಯಕ್ಕೆ ಮೃತ ದೇಹಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.