Advertisement

ತುಮಕೂರು: ಬೈಕ್- ಬಸ್ ಅಪಘಾತ; ಇಬ್ಬರು ಮೃತ್ಯು

04:21 PM Dec 14, 2022 | Team Udayavani |

ತುಮಕೂರು: ಬೈಕ್ ಮತ್ತು ಸರ್ಕಾರಿ ಬಸ್ ನಡುವೆ ಅಪಘಾತ ಸಂಭವಿಸಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ (ಡಿ.13) ಗುಬ್ಬಿ ತಾಲೂಕಿನಲ್ಲಿ ನಡೆದಿದೆ.

Advertisement

ಗುಬ್ಬಿ ತಾಲ್ಲೂಕು ಹೊಸಹಟ್ಟಿ ಹಾಗೂ ಮುದ್ದುಪುರ ಗೊಲ್ಲರಹಟ್ಟಿ ಗ್ರಾಮದ ಮೂಲದ ಯುವಕರಾದ ಮುತ್ತುರಾಜ್ ಮತ್ತು ಪ್ರಭು ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ.

ರಾಷ್ಟ್ರೀಯ ಹೆದ್ದಾರಿ 206 ರಸ್ತೆ ಮೆಲ್ಡರ್ಜೆಗೇರಿಸಿದ ಹಿನ್ನಲೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಕಾಮಗಾರಿ ಪ್ರಗತಿಯಲ್ಲಿರುವ ಹಿನ್ನಲೆ ಹಲವು ಕಡೆ ರಸ್ತೆ ಪೂರ್ಣವಾಗಿಲ್ಲ. ಈ ಹಿನ್ನಲೆ ಸರಣಿ ಅಪಘಾತ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ಅಪಘಾತ ನಡೆದ ಸಂದರ್ಭದಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಸುಮಾರು ನಾಲ್ಕು ಕಿ.ಮೀ. ದೂರ ವಾಹನ ದಟ್ಟಣೆ ಕಂಡಿತು. ಈ ಅಪಘಾತಗಳಿಗೆ ಇಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಎನ್ನಲಾಗಿದೆ.  ಶೀಘ್ರ ವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಅವಶ್ಯ ಸಂಚಾರ ಸುಗಮಗೊಳಿಸಲು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next