ತುಮಕೂರು: ಕಲ್ಪತರು ನಾಡಿನ ಜನರನ್ನು ಬೆಚ್ಚಿ ಬೀಳಿಸುವ ರೀತಿಯಲ್ಲಿ ಒಂದೇ ದಿನ ಮಹಾಮಾರಿ ಕೋವಿಡ್ 19 15 ಜನರನ್ನು ಸೇರಿದ್ದು ದಿನೇ ದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೇರಿಕೆಯಾಗಿ ಶತಕದತ್ತ ಮುನ್ನುಗುತ್ತಿದೆ. ಸೋಂಕಿನ ಮೂಲವೇ ಗೊತ್ತಿಲ್ಲ: ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಮಾತನಾಡಿ, ಮಧುಗಿರಿ ಬೋವಿ ಕಾಲೋನಿ ವಾಸಿ 37 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢಪಟ್ಟಿದ್ದು ಇವರನ್ನು ಟಿಎಂಕೆ-59 ಎಂದು ಗುರುತಿಸಲಾಗಿದೆ. ತುಮಕೂರು ತಾಲೂಕಿನ 30 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿ ಕೊಂಡಿದೆ ಇವರನ್ನು ಟಿಎಂಕೆ -60 ಎಂದು ಗುರುತಿಸಲಾಗಿದೆ.
ನಗರದಲ್ಲೇ ನಾಲ್ವರಿಗೆ ಸೋಂಕು: ತುಮಕೂರು ತಾಲೂಕಿನ 58 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢವಾಗಿದೆ, ಇವರ ನ್ನು ಟಿಎಂಕೆ -61 ಎಂದು ಗುರುತಿಸಲಾಗಿದೆ. ತುಮಕೂರು ತಾಲೂಕಿನ 31 ವರ್ಷದ ವ್ಯಕ್ತಿಗೆ ಕೋವಿಡ್ 19 ಇರುವುದು ದೃಢಪಟ್ಟಿದ್ದು ಪ್ರಯಾಣದ ಮಾಹಿತಿ ತಿಳಿದು ಬಂದಿಲ್ಲ ಇವರ ನ್ನು ಟಿಮಂಕೆ-62 ಎಂದು ಗುರುತಿಸಲಾಗಿದೆ.
ಆಂಧ್ರದ ಕಂಟಕ: ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ 43 ವರ್ಷದ ವ್ಯಕ್ತಿಗೆ ಕೋವಿಡ್ 19 ಇರುವುದು ದೃಢವಾಗಿದೆ ಇವರ ನ್ನು ಟಿಎಂಕೆ-63 ಎಂದು ಗುರುತಿಸಲಾಗಿದೆ. ಇವರು ಬಸ್‌ನಲ್ಲಿ ಆಂಧ್ರ ಪ್ರದೇಶದ ರಾಯದುರ್ಗಕ್ಕೆ ಹೋಗಿ ಬಂದಿದ್ದರು. ಗುಬ್ಬಿ ತಾಲೂಕಿನ 48 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿ ಕೊಂಡಿದೆ ಇವರನ್ನು ಟಿಎಂಕೆ 64 ಎಂದು ಗುರುತಿಸಲಾಗಿದೆ. ಇವರ ಪ್ರಯಾಣ ಮಾಹಿತಿ ತಿಳಿದು ಬಂದಿಲ್ಲ.
ಶಿರಾ ತಾಲೂಕಿನ 36 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿಕೊಂಡಿದ್ದು ಇವರನ್ನು ಟಿಎಂಕೆ 65 ಎಂದು ಗುರುತಿಸಲಾಗಿದೆ ಇವರು ರಾಜಸ್ಥಾನ ದಿಂದ ಬಂದಿದ್ದರು. ಪಾವಗಡ ತಾಲೂಕಿನ ಕನಿವೇನಹಳ್ಳಿಯ 40 ವರ್ಷದ ವ್ಯಕ್ತಿಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು ಇವರನ್ನು ಟಿಎಂಕೆ 66 ಎಂದು ಗುರುತಿಸಲಾಗಿದೆ ಇವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗೆ ತಾಲೂಕಿನಿಂದ ಬಂದಿದ್ದರು. ಪಾವಗಡ ತಾಲೂಕಿನ 42 ವರ್ಷದ ವ್ಯಕ್ತಿಗೆ ಕೋವಿಡ್ 19 ದೃಢವಾಗಿದೆ ಇವರನ್ನು ಟಿಎಂಕೆ-67 ಎಂದುನ ಗುರುತಿಸಲಾಗಿದೆ, ಇವರ ಪ್ರಯಾಣ ಮಾಹಿತಿ ತಿಳಿದು ಬಂದಿಲ್ಲ.
ತಿಪಟೂರು ತಾಲೂಕಿನ 40 ವರ್ಷದ ವ್ಯಕ್ತಿಗೆ ಸೋಂಕು ಇರುವುದು ಕಂಡು ಬಂದಿದೆ, ಇವರನ್ನು ಟಿಎಂಕೆ -68 ಎಂದು ಗುರುತಿಸಲಾಗಿದೆ. ಪಾವಗಡ ತಾಲೂಕಿನ 29 ವರ್ಷದ ವ್ಯಕ್ತಿಗೆ ಸೋಂಕು ಇರುವುದು ದೃಢವಾಗಿದೆ ಇವರನ್ನು ಟಿಎಂಕೆ 69 ಎಂದು ಗುರುತಿಸಲಾಗಿದೆ. ಪಾವಗಡ ತಾಲೂಕಿನ 45 ವರ್ಷದ ವ್ಯಕ್ತಿಗೆ ಸೋಂಕು ಇರುವುದು ಗೋಚರಿಸಿದೆ, ಇವರ ನ್ನು ಟಿಎಂಕೆ 70 ಎಂದು ಗುರುತಿಸಲಾಗಿದೆ. ತಿಪಟೂರು ತಾಲೂಕಿನ 22 ವರ್ಷದ ಯುವಕನಿಗೆ ಸೋಂಕು ಇರುವುದು ದೃಢವಾಗಿದೆ, ಇವರನ್ನು ಟಿಎಂಕೆ-71 ಎಂದು ಗುರುತಿಸಲಾಗಿದೆ.
ಪ್ರಯಾಣದ ಮಾಹಿತಿ ಇಲ್ಲ. ತುಮಕೂರು ನಗರದ 11 ವರ್ಷದ ಬಾಲಕನಿಗೆ ಸೋಂಕು ಇರುವುದು ಕಂಡು ಬಂದಿದೆ ಇವರನ್ನು ಟಿಎಂಕೆ-72 ಎಂದು ಗುರುತಿಸಲಾಗಿದೆ, ಪ್ರಯಾಣದ ಮಾಹಿತಿ ತಿಳಿದು ಬಂದಿಲ್ಲ. ಶಿರಾ ತಾಲೂಕಿನ 55 ವರ್ಷದ ವ್ಯಕ್ತಿಗೆ ಸೋಂಕು ಕಾಣಿಸಿ ಕೊಂಡಿದೆ ಇವರನ್ನು ಟಿಎಂಕೆ-73 ಎಂದು ಗುರುತಿಸಲಾಗಿದೆ ಪ್ರಯಾಣದ ಮಾಹಿತಿ ಇಲ್ಲ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿ ಇದ್ದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದರು.