Advertisement

ದೇವರು ಪರಮ ಸತ್ಯ: ಜಿತಕಾಮಾನಂದ ಸ್ವಾಮೀಜಿ 

12:54 PM Oct 17, 2018 | |

ಬಂಟ್ವಾಳ: ದೇವರು ಎನ್ನುವುದು ಭಾವನೆ ಅಲ್ಲ, ಅದು ಪರಮ ಸತ್ಯ. ಅದನ್ನು ಜೀವನದಲ್ಲಿ ಸಾಕ್ಷಾತ್ಕರಿಸಬಹುದು ಎನ್ನು ವುದನ್ನು ಋಷಿಮುನಿಗಳು ತೋರಿಸಿಕೊಟ್ಟಿದ್ದಾರೆ. ಅದಕ್ಕೆ ನಮ್ಮಲ್ಲಿ ಶ್ರದ್ಧೆ, ಭಕ್ತಿ ಬೇಕಾಗಿದೆ ಎಂದು ಮಂಗಳೂರು ಶ್ರೀ ರಾಮಕೃಷ್ಣ ಮಿಷನ್‌ನ ಶ್ರೀ ಜಿತಕಾಮಾನಂದ ಸ್ವಾಮೀಜಿ ಅವರು ಹೇಳಿದರು.

Advertisement

ಅವರು ಅ. 15ರಂದು ತುಂಬೆ ಶ್ರೀರಾಮ ನಗರದ ಶ್ರೀ ಶಾರದಾ ಸೇವಾ ಪ್ರತಿಷ್ಠಾನದ 18ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು. ಬಿಜೆಪಿ ಹಿಂದುಳಿದ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌ ಮಾತನಾಡಿ, ಪ್ರತಿಷ್ಠಾನವು ಅನೇಕ ಸಮಾಜಮುಖೀ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬಂದಿರುವುದು ಅಭಿನಂದನೀಯ ಎಂದರು.

ಕಳಸ ತಾ.ಪಂ. ಮಾಜಿ ಅಧ್ಯಕ್ಷ ಎಂ.ಎ. ಶೇಷಗಿರಿ ಅವರನ್ನು ಸಮ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಪಾಲಿಕೆ ಮಹಾಪೌರ ಭಾಸ್ಕರ ಕೆ., ಬಂಟ್ವಾಳ ಪೊಲೀಸ್‌ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್‌, ಜಿ.ಪಂ. ಸದಸ್ಯೆ ಧನಲಕ್ಷ್ಮೀ ಗಟ್ಟಿ, ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಸಂತೋಷ್‌ ಕುಮಾರ್‌ ರೈ, ಪ್ರತಿಷ್ಠಾನದ ಅಧ್ಯಕ್ಷ ಗಣೇಶ್‌ ಸುವರ್ಣ, ಶಾರದೋತ್ಸವ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರವೀಣ್‌ ಬಿ. ತುಂಬೆ ಸ್ವಾಗತಿಸಿ, ಕೋಶಾಧಿಕಾರಿ ಸೋಮಪ್ಪ ಕೋಟ್ಯಾನ್‌ ವಂದಿಸಿದರು. ಸಂತೋಷ್‌ ಕೋಟ್ಯಾನ್‌ ನಿರೂಪಿಸಿದರು.

ಬೆಳಗ್ಗೆ ಶ್ರೀ ಶಾರದಾ ಮಂಟಪದಲ್ಲಿ ಸ್ಥಳ ಶುದ್ಧಿಯಾಗಿ ಗಣಪತಿ ಹೋಮ, ಪ್ರತಿಜ್ಞಾ ಪೂರಕ ಸಾಮಾಹಿಕ ಪ್ರಾರ್ಥನೆ ನಡೆದು ಶ್ರೀ ಶಾರದಾಂಬೆಯ ಪ್ರತಿಷ್ಠೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next