Advertisement

ತುಂಬೆ: ನೇತ್ರಾವತಿಯಲ್ಲಿ ಮುಳುಗಿ ಇಬ್ಬರ ಸಾವು

09:17 AM Jan 29, 2018 | Team Udayavani |

ಬಂಟ್ವಾಳ: ನೇತ್ರಾವತಿ ನದಿ ನೀರಲ್ಲಿ ಮುಳುಗಿ ಇಬ್ಬರು ಯುವಕರು ಮೃತಪಟ್ಟ ಘಟನೆ ರವಿವಾರ ತುಂಬೆಯಲ್ಲಿ ಸಂಭವಿಸಿದೆ. ಪುದು ಗ್ರಾಮದ ಮಾರಿಪಳ್ಳ ನಿವಾಸಿ ರಿಕ್ಷಾ ಚಾಲಕ ಸುಲೈಮಾನ್‌ ಅವರ ಪುತ್ರ ಮಹಮ್ಮದ್‌ ಸವಾದ್‌ (20) ಮತ್ತು ಮಾರಿಪಳ್ಳ ಪಾಡಿ ನಿವಾಸಿ ಕೂಲಿ ಕಾರ್ಮಿಕ ಇಬ್ರಾಹಿಂ ಅವರ ಪುತ್ರ ರಮ್ಲಾನ್‌ (19) ಮೃತಪಟ್ಟವರು.

Advertisement

ಇಬ್ಬರ ಮನೆಗಳೂ ಹತ್ತಿರ ದಲ್ಲೇ ಇದ್ದು ಸ್ನೇಹಿತರಾಗಿದ್ದರು. ರವಿವಾರದ ರಜಾ ದಿನವಾದ ಕಾರಣ ಇತರ ಏಳು ಮಂದಿ ಜತೆಗೂಡಿ ನದಿಯತ್ತ ತೆರಳಿದ್ದರು. ಸ್ನಾನ ಮಾಡಿ ಮರುವಾಯಿ ಚಿಪ್ಪು ಹೆಕ್ಕುತ್ತಿದ್ದ ಸಂದರ್ಭ ಅವಘಡ ಸಂಭವಿಸಿತು. ಮಾಹಿತಿ ತಿಳಿ ಯು ತ್ತಿದ್ದಂತೆ ಪುದು ಗ್ರಾಮ ಪಂಚಾಯತ್‌ ಸದಸ್ಯ ರಾದ  ಲತೀಫ್‌ ಕುಂಜತ್ತ ಬೈಲ್‌, ಹನೀಫ್‌ ಖಾನ್‌ ಕೊಡಾಜೆ, ಎಂ.ಕೆ. ಖಾದರ್‌ ಮಾರಿಪಳ್ಳ, ಮಾಜಿ ಸದಸ್ಯರಾದ ಅಖ್ತರ್‌ ಹುಸೈನ್‌, ಅಬ್ದುಲ್‌ ಫವಿದ್‌, ಅಮೀರ್‌, ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಸಾಮಾಜಿಕ ಸೇವಾ ಕರ್ತ ಕೃಷ್ಣ ಕುಮಾರ್‌ ಪೂಂಜ ಸಹಿತ ಹಲವರು ಸ್ಥಳಕ್ಕೆ ಧಾವಿಸಿ ಬಂದರು. ಸ್ಥಳೀಯ ಈಜುಗಾರರು ಮೃತ ಶರೀರಗಳನ್ನು ನೀರಿನಿಂದ ಮೇಲೆತ್ತಿದ್ದರು. ಮಾರಿಪಳ್ಳ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಸಂಜೆ ಮೃತರ ಅಂತ್ಯಕ್ರಿಯೆ ನಡೆಯಾತು. ಜುಮಾದಿಗುಡ್ಡೆ ನಿವಾಸಿ ಬಶೀರ್‌ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಮ್ಮದ್‌ ಸವಾದ್‌ ಹೆತ್ತವರ ಏಳು ಮಂದಿ ಮಕ್ಕಳಲ್ಲಿ ಮೊದ ಲನೆಯವರು. ಬ್ಯಾಟರಿ ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದು ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಿದ್ದರು. ರಮ್ಲಾನ್‌ ಅವರು ಮಂಗಳೂರಿ ನಲ್ಲಿ ಗಾರೆ ಕೆಲಸದ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಹೆತ್ತವರ ಏಳು ಮಕ್ಕಳಲ್ಲಿ ನಾಲ್ಕನೆಯವರು. ಇಬ್ಬರದೂ ಸ್ಥಿತಿವಂತ ಕುಟುಂಬವಲ್ಲ. ಹೆತ್ತವರಿಗೆ ನೆರವಾಗಲು ಕೆಲಸಕ್ಕೆ ತೊಡಗಿದ್ದು ಕುಟುಂಬವನ್ನು ಸಲಹುವ ಜತೆಗೆ ನೆರೆಹೊರೆಯಲ್ಲೂ ಸಹಾಯ ಸಹಕಾರ ನೀಡುತ್ತಿದ್ದವರು.

Advertisement

Udayavani is now on Telegram. Click here to join our channel and stay updated with the latest news.

Next