ತುಮಕೂರು: ಜಿಲ್ಲೆಯ ಪ್ರಸಿದ್ಧ ಪ್ರಾಕೃತಿಕ ತಾಣ ದೇವರಾಯನ ದುರ್ಗದ ಜಾತ್ರೆಗೆ ತೆರಳುತ್ತಿದ್ದ ವೇಳೆ ಬೆಂಕಿ ತಗುಲಿ ಬಾಲಕಿ ಮೃತಪಟ್ಟಿದ್ದು ಜೊತೆಯಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿರುವ ಘಟನೆ ದೇವರಾಯನ ದುರ್ಗದಲ್ಲಿ ಮಂಗಳವಾರ ನಡೆದಿದೆ.
ದೇವರಾಯನ ದುರ್ಗದಲ್ಲಿ ದೇವರ ಜಾತ್ರೆ ನಡೆಯುತ್ತಿದ್ದು ಜಾತ್ರೆಗೆಂದು ತೆರಳುತ್ತಿದ್ದ ಬಾಲಕಿಯೊಬ್ಬಳು ಬೆಟ್ಟಕ್ಕೆ ಹತ್ತಿಕೊಂಡಿದ್ದ ಬೆಂಕಿಗೆ ಸಿಲುಕಿ ದುರಂತ ಸಾವು ಕಂಡಿದ್ದಾಳೆ.
ಮಂಗಳವಾರ ದೇವರಾಯನ ದುರ್ಗದ ರಥೋತ್ಸವ ನಡೆಯುತ್ತಿದ್ದು ರಥೋತ್ಸವದಲ್ಲಿ ಭಾಗಿಯಾಗಲು ಕೊರಟಗೆರೆ ತಾಲೂಕಿನ ಇರಕಸಂದ್ರ ಕಾಲೋನಿಯ ಮಾನಸ ಹಾಗೂ ಆಕೆಯ ಸ್ನೇಹಿತರು , ಜಾತ್ರೆಗೆ ಕಾಲುದಾರಿಯ ಮೂಲಕ ತೆರಳುತ್ತಿದ್ದ ವೇಳೆ ಬೆಟ್ಟದಲ್ಲಿ ಹೊತ್ತಿಕೊಂಡಿದ್ದ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಒಂಬತ್ತನೇ ತರಗತಿಯ ಬಾಲಕಿ ಮಾನಸ ,(13) ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನು ಬೆಂಕಿ ಹೆಚ್ಚಾಗುತ್ತಿದ್ದಂತೆ ಬಾಲಕಿಯ ಜೊತೆಯಲ್ಲಿದ್ದ ವೃದ್ದೆಯೊಬ್ಬರು ಬಾಲಕಿಯನ್ನು ರಕ್ಷಿಸಲು ಹೋಗಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ವೃದ್ದೆ ಪಾರಾಗಿದ್ದಾರೆ ಬೆಂಕಿಯ ಕೆನ್ನಾಲಗಿಗೆ ಸಿಲುಕಿದ್ದ ಮಾನಸ ಶೇ 90ರಷ್ಟು ಸುಟ್ಟ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟಿದ್ದು ಜೊತೆಯಲ್ಲಿದ್ದ ಮತ್ತೆ ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಮೃತಪಟ್ಟ ಬಾಲಕಿಯ ಶವವನ್ನು ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಅರಣ್ಯ ಅಧಿಕಾರಿಗಳು ಕಳೆದ ರಾತ್ರಿಯೂ ಸಹ ಬೆಟ್ಟದ ತಪ್ಪಲಿನ ಕೆಲವು ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಕಳೆದ ರಾತ್ರಿಯೂ ಸಹ ಅರಣ್ಯ ಇಲಾಖೆಯ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಮುಂದಾಗಿದ್ದರು ಆದರೆ ಅದನ್ನ ಅರಿಯದೆ ಮಾನಸ ಹಾಗೂ ಕೆಲವರು ಕಾಲುದಾರಿಯನ್ನ ಬಳಸಿ ಜಾತ್ರೆಗೆ ಎಂದು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿಯ ಕೆನ್ನಾಲಿಗೆ ಸಿಲುಕಿ ಮೃತಪಟ್ಟಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಬಾಲಕಿ ಮೃತಪಟ್ಟಿರುವ ಜಾಗದಲ್ಲಿ ಕಾಲು ದಾರಿಯು ಸಂಪೂರ್ಣ ಕಿರಿದಾಗಿದ್ದು ಬಹುತೇಕ ಹುಲ್ಲುಗಾವಲಿನಿಂದ ಆವೃತವಾಗಿತ್ತು ಎನ್ನಲಾಗಿದೆ. ಅದೇನೇ ಇರಲಿ ಜಾತ್ರೆಗೆಂದು ತೆರಳುತ್ತಿದ್ದ ಬಾಲಕಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮೃತಪಟ್ಟಿರುವುದು ದುರದೃಷ್ಟವೇ ಸರಿ.
ಸ್ಥಳಕ್ಕೆ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಸೇರಿದ್ದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: 3 ದಿನದಿಂದ ಹೊತ್ತಿ ಉರಿಯುತ್ತಿರುವ ಚಾರ್ಮಾಡಿ ಅರಣ್ಯ: ಬದುಕುಳಿಯಲು ಮನೆ ಬಳಿ ಬಂದ ಕಾಳಿಂಗ