ಚಿಕೂನ್ ಗುನ್ಯಾ, ಕರಳು ಬೇನೆಯಂತಹ ಸಾಂಕ್ರಾಮಿಕ ರೋಗಗಳನ್ನು ಹಿಂದಿಕ್ಕಿ ಕೋವಿಡ್ ವೈರಸ್ ಅಟ್ಟಹಾಸ ಮೆರೆಯುತ್ತಿದೆ.
ಜಿಲ್ಲೆಯಲ್ಲಿ ಕೋವಿಡ್ ಮಹಾಮಾರಿ ದಿನೇ ದಿನೆ ವೇಗವನ್ನು ಹೆಚ್ಚಳ ಮಾಡಿಕೊಳ್ಳುತ್ತಲಿದೆ. ಸೋಂಕಿನಿಂದ ಮೃತಪಡುವವರ
ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ಈವರೆಗೆ ಸೋಂಕಿಗೆ ಜಿಲ್ಲೆಯಲ್ಲಿ 169 ಮಂದಿ ಮೃತಪಟ್ಟಿದ್ದಾರೆ.
Advertisement
ಹತ್ತು ಸಾವಿರಕ್ಕೇರಿಕೆ: ದಿನೇ ದಿನೆ ಬರುತ್ತಿರುವ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಒಂದು ದಿನಕ್ಕೆ ಕನಿಷ್ಠ 150 ರಿಂದ 200ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಸೆ.1ರ ವರೆಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರು 6148 ಇದ್ದು, ಇದೇ ರೀತಿ
ಜಿಲ್ಲೆಯಲ್ಲಿ ಕೋವಿಡ್ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಾ ಹೋದರೆ ಅಕ್ಟೋಬರ್ ವೇಳೆಗೆ ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು
ಸೋಂಕಿತರಾಗುವ ಸಾಧ್ಯತೆ ನಿಶ್ಚಳವಾಗಿದೆ.
ಸೋಂಕು ವ್ಯಾಪಿಸಿದ್ದು ಅಲ್ಲಿಯೇ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಒಂದು ಗ್ರಾಮದಲ್ಲಿ ಒಬ್ಬರಿಗೆ ಬಂದರೆ ಸುತ್ತಮುತ್ತ ವ್ಯಾಪಿಸುತ್ತಿದೆ, ನಗರವೂ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಸರ್ಕಾರಿ ಇಲಾಖೆಗಳ ನೌಕರರಿಗೆ ಕೋವಿಡ್ ದೃಢವಾಗುತ್ತಲೇ ಇದೆ. 4375 ಮಂದಿ ಗುಣಮುಖ: ತುಮಕೂರು ಕೋವಿಡ್-19 ಆಸ್ಪತ್ರೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸುವಲ್ಲಿ ಜಿಲ್ಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಈವರೆಗೆ ಒಟ್ಟು 6148 ಮಂದಿ ಆಸ್ಪತ್ರೆಗೆ ಸೇರಿರುವ ಸೋಂಕಿತರಲ್ಲಿ 4375 ಮಂದಿ ಗುಣಮುಖರಾಗಿ ತಮ್ಮ ಮನೆಗೆ ತೆರಳಿದ್ದಾರೆ ಎನ್ನುವುದು ಸಮಾಧಾನದ ವಿಷಯವಾಗಿದೆ.
Related Articles
Advertisement