Advertisement
ಮೀರಾ-ಡಹಾಣೂ ಬಂಟ್ಸ್‌ನ ಬೊಯಿಸರ್- ಪಾಲ್ಘರ್ ವಿಭಾಗದ ವತಿಯಿಂದ ಆಯೋಜಿ ಸಲಾಗಿದ್ದ ಅರಸಿನ ಕುಂಕುಮ ಮತ್ತು ಸ್ನೇಹ ಸಮ್ಮಿಲನದ ಸಮಾರಂಭದಲ್ಲಿ ವಿಶೇಷ ಅತಿಥಿ ಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ಇನ್ನಷ್ಟು ಸಮಾಜಪರ ಕಾರ್ಯಕ್ರಮಗಳು ನಡೆಯುತ್ತಿರಲಿ ಎಂದು ಹಾರೈಸಿದರು.
Related Articles
Advertisement
ಮೀರಾ-ಡಹಾಣೂ ಬಂಟ್ಸ್‌ನ ಮಾಜಿ ಅಧ್ಯಕ್ಷ ಕೆ. ಭುಜಂಗ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ ಮಾತ ನಾಡಿ, ಯಾವ ಒಂದು ಸಂಸ್ಥೆಯ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಬೆಳೆಯುವಲ್ಲಿ ಕಾರ್ಯಕರ್ತರ ಮನಃಪೂರ್ವಕ ಭಾಗವಹಿಸುವಿಕೆ ಅತ್ಯಗತ್ಯ. ಸದಸ್ಯರ ಸ್ಪಂದನೆ ಇದ್ದಲ್ಲಿ ಸಂಸ್ಥೆ ತಾನಾಗಿ ಬೆಳೆಯುತ್ತದೆ. ಪಾಲ್ಘರ್ ಜಿಲ್ಲೆ ಹಿಂದುಳಿದ ವರ್ಗಗಳ ಕ್ಷೇತ್ರವೆನಿಸಿದರೂ ಇದು ಬೆಳವಣಿಗೆ ಹೊಂದಿ ಮಹಾರಾಷ್ಟ್ರದಲ್ಲೇ ನಂಬರ್‌ವನ್ ಸ್ಥಾನ ಪಡೆಯಲಿದೆ.
ಮೀರಾ-ಡಹಾಣೂ ಬಂಟ್ಸ್‌ನ ಪ್ರತೀ ವಿಭಾಗದಲ್ಲಿನ ಊರುಗಳಲ್ಲಿ ಈ ರೀತಿಯ ವಿಶಿಷ್ಟವಾದ ತುಳುಭಾಷಾ ಕಾರ್ಯಕ್ರಮಗಳು ಆಗುತ್ತಿರಬೇಕು. ಇದರಿಂದ ಸದಸ್ಯರ ಉತ್ಸಾಹಕ್ಕೆ ಪುನಶ್ಚೇತನ ನೀಡಿದಂತಾಗುತ್ತದೆ. ತನ್ನ ಚಟುವಟಿಕೆಗಳಿಂದ ಸಂಸ್ಥೆಯು ಬಹುಕಾಲ ಮುಂದುವರಿಯಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ಕಾರಣಾಂತರಗಳಿಂದ ಅನುಪ ಸ್ಥಿತರಾಗಿದ್ದ ಸಂಸ್ಥೆಯ ಗೌರವಾಧ್ಯಕ್ಷ ಡಾ| ವಿರಾರ್ ಶಂಕರ್ ಬಿ. ಶೆಟ್ಟಿ, ಸಂಸ್ಥೆಯ ಅಧ್ಯಕ್ಷ, ಮೀರಾ- ಭಾಯಂದರ್ ಮಹಾನಗರ ಪಾಲಿಕೆಯ ನಗರ ಸೇವಕ ಅರವಿಂದ ಶೆಟ್ಟಿ ಅವರ ಶುಭ ಸಂದೇಶ ಗಳನ್ನು ಸಭೆಯಲ್ಲಿ ಓದಲಾಯಿತು.
ವೇದಿಕೆ ಯಲ್ಲಿ ಅತಿಥಿಗಳಾಗಿ ಉದ್ಯಮಿ ಭಾಸ್ಕರ್ ಕೆ. ಶೆಟ್ಟಿ ಬೊಯಿಸರ್, ಪಾಲ್ಘರ್ ಉದ್ಯಮಿಗಳಾದ ಮಹಾಬಲ ಬಿ. ಶೆಟ್ಟಿ, ನಾರಾಯಣ ಬಿ. ಶೆಟ್ಟಿ, ರವೀಂದ್ರ ವಿ. ಶೆಟ್ಟಿ, ನಿರ್ವಾಣ ಬಿಲ್ಡರ್ನ ಮುಕೇಶ್ ಶೆಟ್ಟಿ, ಸಂಸ್ಥೆಯ ಮಹಿಳಾ ವಿಭಾಗಾಧ್ಯಕ್ಷೆ ಶುಭಾ ಸತೀಶ್ ಶೆಟ್ಟಿ, ರತಿ ಶಂಕರ್ ಬಿ. ಶೆಟ್ಟಿ ವಿರಾರ್, ಬೊಯಿಸರ್-ಪಾಲ್ಘರ್ ಮಹಿಳಾ ವಿಭಾಗದ ಅಧ್ಯಕ್ಷೆ ಪ್ರೇಮಾ ಭುಜಂಗ ಶೆಟ್ಟಿ, ಮಾಜಿ ಅಧ್ಯಕ್ಷೆ ವಿಶಾಲಾ ಆರ್. ಶೆಟ್ಟಿ, ಬೊಯಿಸರ್-ಪಾಲ್ಘರ್ ವಿಭಾಗದ ಅಧ್ಯಕ್ಷ ವಿಜಯ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಪ್ರವೀಣ್ ಶೆಟ್ಟಿ ದಂಪತಿಯನ್ನು ಸಂಸ್ಥೆಯ ಬೊಯಿಸರ್-ಪಾಲ್ಘರ್ ವಿಭಾಗದ ಅಧ್ಯಕ್ಷ ವಿಜಯ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು, ಗಣ್ಯರ ಉಪಸ್ಥಿತಿಯಲ್ಲಿ ಸಮ್ಮಾನಿಸಲಾಯಿತು.
ಅತಿಥಿ-ಗಣ್ಯರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಮಕ್ಕಳನ್ನು ಗೌರವಿಸಲಾಯಿತು. ವಿಶೇಷ ಆಕರ್ಷಣೆಯಾಗಿ ವಸಾಯಿ ಪಶ್ಚಿಮದ ಕೌಶಿಕಿ ಸಿಲ್ಕ್ ವತಿಯಿಂದ ಬಹುಮಾನ ರೂಪದಲ್ಲಿ ಸೀರೆಗಳ ಲಕ್ಕಿ ಕೂಪನ್ ಆಯೋಜಿ ಸಲಾಗಿತ್ತು. ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.
ಮೀರಾ-ಡಹಾಣೂ ಬಂಟ್ಸ್ ಬೊಯಿ ಸರ್-ಪಾಲ್ಘರ್ ವಿಭಾಗದ ಕಾರ್ಯಾಧ್ಯಕ್ಷ ವಿಜಯ್ ಶೆಟ್ಟಿ ಮಾತನಾಡಿ ಸ್ಮರಣೀಯ ಅನುಭವಗಳನ್ನು ನೆನಪಿನಲ್ಲಿಡುವಂತೆ ಮಾಡಿದ ಇಂದಿನ ಕಾರ್ಯ ಕ್ರಮದ ಯಶಸ್ಸಿಗಾಗಿ ಸಹಕರಿಸಿದ ಕಾರ್ಯಕಾರಿ ಮಂಡಳಿ, ಮಹಿಳಾ ವಿಭಾಗದ ಸದಸ್ಯರನ್ನು ಸಂಸ್ಥೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭ ಚಾಪರ್ಕ ಕಲಾವಿದರಿಂದ ದೇವದಾಸ್ ಕಾಪಿಕಾಡ್ ರಚಿಸಿ, ನಿರ್ದೇಶಿಸಿದ ಪುಷ್ಪಕ್ಕನ ವಿಮಾನ ತುಳು ನಾಟಕ ಪ್ರದರ್ಶನಗೊಂಡಿತು. ದೇವದಾಸ್ ಕಾಪಿಕಾಡ್ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.
ಚಿತ್ರ-ವರದಿ: ಪಿ. ಆರ್. ರವಿಶಂಕರ್