Advertisement
ಬೊರಿವಲಿ ಪರಿಸರದಲ್ಲಿ ತುಳು ಭಾಷೆ ಸಂಸ್ಕೃತಿಯನ್ನು ಹೊರನಾಡಿನಲ್ಲಿ ವಿಜೃಂಭಿಸುವ ಜಾತ್ಯತೀತ ಸಂಸ್ಥೆಯಾಗಿ ಸ್ಥಾಪನೆಗೊಂಡ ಬೊರಿವಲಿ ತುಳು ಸಂಘ ತುಳುವರ ಯೋಗ್ಯತೆಯ ಪ್ರತೀಕವಾಗಿದೆ. ಈ ಸಂಸ್ಥೆಯಲ್ಲಿ ಪ್ರಾರಂಭದ ದಿನದಿಂದಲೂ ಗೌರವ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದರ ಜತೆಗೆ ಪರಿಸರದ ತುಳು ಕನ್ನಡಿಗರ ಅವಿನಾಭಾವ ಸಂಬಂಧ ಈ ಸಂಸ್ಥೆಯಿಂದ ಬೆಳೆದಿದೆ ಎಂದು ಡಾ| ವಿರಾರ್ ಶಂಕರ್ ಶೆಟ್ಟಿ ಅಭಿಪ್ರಾಯಿಸಿದರು.
Related Articles
Advertisement
-ಕೃಷ್ಣಾನಂದ ಶೆಟ್ಟಿಗಾರ್, ಉದ್ಯಮಿ, ಸಮಾಜ ಸೇವಕ ಆಂಗ್ಲ ಭಾಷೆ ಮಾಧ್ಯಮವು ತುಳು ಭಾಷೆಯನ್ನು ಹತ್ತಿಕ್ಕುತ್ತ ಸಾಗುತ್ತಿದ್ದರೂ ತುಳುವರಾದ ನಾವು ಒಗ್ಗಟ್ಟು ಸಾಧಿಸುವ ಮೂಲಕ ಇಂತಹ ವೈವಿಧ್ಯಪೂರ್ಣ ಕಾರ್ಯಕ್ರಮ ಹಾಗು ಸ್ನೇಹ ಸಮ್ಮಿಲನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಬೊರಿವಲಿ ಪರಿಸರದಲ್ಲಿ ತುಳು ಭಾಷೆ ಸಂಸ್ಕೃತಿಯನ್ನು ಗಟ್ಟಿಗೊಳಿಸುವ ಸುದೀರ್ಘ ಕೆಲಸ ಈ ಸಂಸ್ಥೆಯಿಂದ ಜರಗಲಿ. ಹಳೆ ತಲೆಮಾರುಗಳಿಂದ ತುಳು ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ. ತುಳು ಭಾಷೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕಾದರೆ ಯುವ ಜನಾಂಗ ಮುಂದೆ ಬರಬೇಕು. -ಕಾರ್ನಾಡ್ ನಾರಾಯಣ ಸುವರ್ಣ, ಅಧ್ಯಕ್ಷರು, ಬ್ರಿಕ್ವರ್ಕ್ ರೇಟಿಂಗ್ ಪ್ರೈವೇಟ್ ಲಿಮಿಟೆಡ್ ಪ್ರಜ್ವಲಿಸಿ ದಶಮಾನೋತ್ಸವಕ್ಕೆ ಚಾಲನೆ ನೀಡಿದರು.
ಅತಿಥಿ ಗಣ್ಯರನ್ನು ಸಂಘದ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ನೆನಪಿನ ಕಾಣಿಕೆಯನ್ನಿತ್ತು ಸಮ್ಮಾನಿಸಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ವಾಸು ಕೆ ಪುತ್ರನ್, ಉಪಾಧ್ಯಕ್ಷರಾದ ಕರುಣಾಕರ ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ ಕರ್ಕೇರ, ಜತೆ ಕೋಶಾಧಿಕಾರಿ ಟಿವಿ ಪೂಜಾರಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಎ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಿ. ಶೆಟ್ಟಿ, ಕಾರ್ಯದರ್ಶಿ ತಿಲೋತ್ತಮಾ ವೈದ್ಯ ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರ ಫೌಂಡೇಷನ್ ಇವರಿಂದ ವೈವಿಧ್ಯಪೂರ್ಣ ತುಳು-ಕನ್ನಡ ಮತ್ತು ಹಿಂದಿ ಗೋಲ್ಡನ್ ಮೆಮೋರಿಸ್ ಸಂಗೀತ ರಸಮಂಜರಿ ಹಾಗೂ ಇನ್ನಿತರ ವಿವಿಧ ವಿನೋದಾವಳಿಗಳು ನಡೆಯಿತು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸದ ಗೋಪಾಲ್ ಸಿ, ಶೆಟ್ಟಿ ಅವರ ಧರ್ಮ ಪತ್ನಿ ಉಷಾ ಗೋಪಾಲ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿ ಇದರ ನೂತನ ಶಿಕ್ಷಣ ಯೋಜನೆಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್. ಪಯ್ಯಡೆ, ವಿಜಯ ಭಂಡಾರಿ, ದಹಿಸರ್ ಕರ್ನಾಟಕ ಸಂಘದ ಅಧ್ಯಕ್ಷ ಎಂ. ಜಿ. ಶೆಟ್ಟಿ, ಮಹಾರಾಷ್ಟ್ರ ಮಾನವ ಸೇವಾ ಸಂಘದ ಅಧ್ಯಕ್ಷ ಡಾ| ಹರೀಶ್ ಶೆಟ್ಟಿ, ಡಾ| ಸತೀಶ್ ಶೆಟ್ಟಿ, ಹಿರಿಯ ಲೇಖಕ ಬಾಬು ಶಿವ ಪೂಜಾರಿ, ಸುಧಾಕರ ಪೂಜಾರಿ, ವಿವಿಧ ಕ್ಷೇತ್ರಗಳ ಗಣ್ಯರು, ಹಿರಿಯ ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.
ದಶಮಾನೋತ್ಸವ ಕಾರ್ಯ ಕ್ರಮದಲ್ಲಿ ಅಸಂಖ್ಯಾತ ತುಳು- ಕನ್ನಡಿಗರು ಉಪಸ್ಥಿತರಿದ್ದು ಮನೋ ರಂಜನ ಕಾರ್ಯಕ್ರಮದ ವಿಶೇಷ ಗಾನಲಹರಿ ಸವಿಯನ್ನು ಆನಂದಿ ಸಿದರು. ವಿವಿಧ ತುಳು-ಕನ್ನಡ-ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಕಲಾಭಿ ಮಾನಿಗಳು, ರಂಗನಟರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು. ಗೌರವ ಕೋಶಾಧಿಕಾರಿ ಹರೀಶ್ ಮೈಂದನ್ ವಂದಿಸಿದರು. ಗೌರವ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ-ವರದಿ: ರಮೇಶ್ ಉದ್ಯಾವರ