Advertisement

“ತುಳುನಾಡಿನ ಸಮೃದ್ಧಿಗೆ ಯುವಕರ ಶ್ರಮ ಅಗತ್ಯ’

10:50 PM Apr 16, 2019 | sudhir |

ಕಾಪು: ತುಳುನಾಡಿನಲ್ಲಿ ಆಚರಣೆಯಲ್ಲಿರುವ ತುಳುವರ ಹಲವು ಆಚರಣೆಗಳು ವಿನಾಶದತ್ತ ಮುಖ ಮಾಡಿದ್ದು, ಇವುಗಳನ್ನು ಮತ್ತೆ ಸಮೃದ್ಧಿಯತ್ತ ತರುವಲ್ಲಿ ಯುವಕರು ಮುಂದೆ ಬರಬೇಕಿದೆ. ಕರಾವಳಿಯ ಸಂಪ್ರದಾಯ ಮತ್ತು ಸಂಸ್ಕಾರಗಳಿಗೆ ವಿರುದ್ಧವಾಗಿ ಕಾಣಸಿಗುವ ಹಲವು ಆಚರಣೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಸಂಸ್ಕೃತಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಜನರನ್ನು ಪ್ರೇರೇಪಿಸುವ ಪ್ರಯತ್ನ ಯುವಕರಿಂದ ನಡೆಯುವಂತಾಗಬೇಕು ಎಂದು ಜನಪದ ಸಂಶೋಧಕ ಕೆ.ಎಲ್‌. ಕುಂಡತಾಯ ಹೇಳಿದರು.

Advertisement

ಕುಂಜೂರು ಬೈಲ್‌ ಫ್ರೆಂಡ್ಸ್‌ ವತಿಯಿಂದ ಸೋಮವಾರ ಜರಗಿದ ಯುಗಾದಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯುಗಾದಿ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡುವ ಹಬ್ಬವಾಗಿದೆ. ಆಯಾ ವರ್ಷದಲ್ಲಿ ಕಂಡುಬರಬಹುದಾದ ಶುಭ ಫಲಗಳನ್ನು ದೇವಸ್ಥಾನ, ಗುತ್ತಿನ ಮನೆಗಳಲ್ಲಿ ಓದುವ ಮೂಲಕ ಕೃಷಿಕನಿಗೆ ಕೃಷಿ ಸಮೃದ್ಧತೆಗೆ ಪೂರಕವಾಗಿ ಉತ್ತಮ ಸಂದೇಶ‌ ನೀಡುವ ಸಂಪ್ರದಾಯ ಯುಗಾದಿಯಂದು ನಡೆಯುತ್ತದೆ. ಇಂತಹ ಆಚರಣೆ ಮುಂದುವರಿಸಿಕೊಂಡು ಬರುವ ಪ್ರಯತ್ನ ತುಳುನಾಡಿನ ಜನರಿಂದ ನಡೆಯಬೇಕಿದೆ ಎಂದರು.

ಸಮಾಜ ಸೇವಕ ಸುರೇಶ್‌ ಪಿ. ಶೆಟ್ಟಿ ಗುರ್ಮೆ ಮಾತನಾಡಿ, ಯುವಕರು ಸಂಘಟಿತರಾದಾಗ ಗ್ರಾಮದಲ್ಲಿ ವಿಕಸನ ಕಾಣಲು ಸಾಧ್ಯ. ಗ್ರಾಮದ ವಿಕಾಸವೇ ಸಮಾಜದ ವಿಕಾಸವಾಗಿದ್ದು, ಪ್ರತಿಯೊಂದು ಆಚಾರ ವಿಚಾರಗಳಲ್ಲೂ ಅದರದ್ದೇ ಆದ ಕ್ರಮಗಳ ಅನುಕರಣಿಕೆಯ ಅಗತ್ಯತೆಯಿದೆ. ಈ ಕುರಿತಾಗಿ ನಮ್ಮಲ್ಲಿರುವ ಸಂದೇಹಗಳಿಗೆ ಹಿರಿಯರ ಮೂಲಕ ಉತ್ತರ ಪಡೆದುಕೊಂಡು ಮುನ್ನಡೆಯುವುದು ಅತ್ಯಗತ್ಯ ಎಂದರು.

ಎಲ್ಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ ವೈ. ಯಶವಂತ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿ ಸಿ.ಎ. ಬ್ಯಾಂಕ್‌ ಅಧ್ಯಕ್ಷ ವೈ. ಸುಧೀರ್‌ ಕುಮಾರ್‌, ಕುಂಜೂರು ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ನಡಿಮನೆ ದೇವರಾಜ ರಾವ್‌, ಎಲ್ಲೂರು ಗ್ರಾ.ಪಂ. ಅಧ್ಯಕ್ಷೆ ವಸಂತಿ ಮಧ್ವರಾಜ್‌, ನ್ಯಾಯವಾದಿ ಸರ್ವಜ್ಞ ತಂತ್ರಿ, ಶ್ರೀವತ್ಸ ರಾವ್‌ ಕುಂಜೂರು, ಸದಾನಂದ ಶೆಟ್ಟಿ ತೆಂಕರಲಾಕ್ಯಾರು, ಸುಂದರ ಶೆಟ್ಟಿ, ಖಾನ ಶೈನಿಂಗ್‌ ಸ್ಟಾರ್ ಅಧ್ಯಕ್ಷ ಕೀರ್ತನ್‌ ದೇವಾಡಿಗ, ಬೈಲು ಫ್ರೆಂಡ್‌ನ‌ ಅಧ್ಯಕ್ಷ ಸುಕಾಂತ್‌ ದೇವಾಡಿಗ ಉಪಸ್ಥಿತರಿದ್ದರು.
ಬೈಲು ಫ್ರೆಂಡ್ಸ್‌ನ ಮಾಜಿ ಅಧ್ಯಕ್ಷ ರಾಕೇಶ್‌ ಶೆಟ್ಟಿ ಕುಂಜೂರು ಸ್ವಾಗತಿಸಿದರು. ಸಂಘಟಕ ಆನಂದ ಕುಂದರ್‌ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಸಾಹಿತಿ ಗಣೇಶ್‌ ಸಾಲಿಯಾನ್‌ ಅದಮಾರು ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next