Advertisement

ತುಳುನಾಡ ಸಂಸ್ಕೃತಿ ವೈಭವ ಮೆರೆದ ಸ್ಪರ್ಧೆ

12:30 AM Feb 22, 2019 | |

ನದಿ ತಿರುವಿನಂತಹ ಸಮಕಾಲೀನ ವಿಷಯಗಳನ್ನೂ ನೀನಾಸಂ ಶೈಲಿಯಲ್ಲಿ ಬಿತ್ತರಿಸಿದ ರೀತಿಯೂ ಮನೋಜ್ಞವಾಗಿತ್ತು. ವಿಶೇಷ ವಿಷಯವಾಗಿ ನಾಗನಿಗೆ ಹಾಲೆರೆಯುವುದು, ಬೀಸುಗಲ್ಲಿನಲ್ಲಿ ಹಿಟ್ಟು ತಯಾರಿಸುವುದು ಮುಂತಾದ ಜನಪದೀಯ ಬದುಕಿನ ಬಗೆಗಳು ಸಾಕಾರವಾದವು. ದೈವದ ಮಾತು ಬಂದಾಗ ಸಾಂಕೇತಿಕವಾಗಿ ಕಂಚಿನ ಮೊಗ ತೋರಿಸುವ ಪ್ರಯತ್ನ ಸೃಜನಶೀಲ ಮನಃಸ್ಥಿತಿಯನ್ನು ಉತ್ತಮವಾಗಿ ಪ್ರತಿಬಿಂಬಿಸಿತು.

Advertisement

ಒಂದೆಡೆ ತಾಸೆಯ ಟಕ್ಕರ್ ಟಕ್ಕರ ಧ್ವನಿಗೆ ಗತ್ತಿನ ಹೆಜ್ಜೆ ಹಾಕಿ ರಂಗದಲ್ಲಿ ಧೂಳೆಬ್ಬಿಸುವ ಹುಲಿ ವೇಷಗಳು, ಮೈತುಂಬ ತೆಂಗಿನ ಎಳೆಯ ಗರಿಗಳನ್ನು ಕಟ್ಟಿಕೊಂಡ ಜನಪದ ಕಂಗೀಲು ಕುಣಿತ, ಮನೆಯೆದುರು ಬಂದು ಕುಣಿದು ಮೊರ ತುಂಬ ಅಕ್ಕಿಯನ್ನು ಜೋಳಿಗೆಗೆ ತುಂಬಿಕೊಳ್ಳುವ ಆಟಿ ಕಳಂಜ, ಲೇಲೇ ಪಾಡ್ದನ…ಇದರೊಂದಿಗೆ ಯಕ್ಷಗಾನದ ವೇಷಗಳು, ಬಪ್ಪ ಬ್ಯಾರಿಗೆ ಒಲಿಯುವ ದೇವಿ, ದೇವುಪೂಂಜ ಪ್ರತಾಪದ ತುಣುಕುಗಳು, ಕೋಟಿ ಚೆನ್ನಯರು, ಇದೆಲ್ಲದರ ನಡುವೆ ನೇತ್ರಾವತಿ ನದಿ ತಿರುವಿನಿಂದಾಗುವ ಘೋರ ಪರಿಣಾಮಗಳನ್ನು ಕಣ್ಮುಂದೆ ತಂದಿಡುವ ನಾಟಕ. ಇವೆಲ್ಲವೂ ಸುಂದರ ಮನಮೋಹಕ ದೃಶ್ಯವಾಗಿ ಅನಾವರಣಗೊಂಡದ್ದು ಮೂಡುಬಿದಿರೆ ಮಹಾವೀರ ಕಾಲೇಜಿನ ಸಭಾಂಗಣದಲ್ಲಿ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಹಾವೀರ ಕಾಲೇಜು, ಹಳೆ ವಿದ್ಯಾರ್ಥಿ ಸಂಘ ಮತ್ತು ಮೂಡಬಿದರೆಯ ತುಳುಕೂಟಗಳ ಸಂಯುಕ್ತ ಆಶ್ರಯದಲ್ಲಿ ಸಂಪನ್ನಗೊಂಡಿತು. ಮಂಗಳೂರು ವಿವಿ ಮಟ್ಟದ ಅಂತರ್‌ ಕಾಲೇಜು ತುಳು ಸಾಂಸ್ಕೃತಿಕ ಕಾರ್ಯಕ್ರಮಗಳ ಈ ಸ್ಪರ್ಧೆಯಲ್ಲಿ ವರ್ಣಚಿತ್ರ ರಚನೆ, ಲಿಖಿತ ರಸಪ್ರಶ್ನೆ, ತುಳು ಚಲನಚಿತ್ರ ಗಾಯನ, ರಂಗೋಲಿ, ತುಳು ಆಶು ಭಾಷಣಗಳ ಪ್ರತ್ಯೇಕ ಸ್ಪರ್ಧೆಗಳ ಜೊತೆಗೆ ಇಪ್ಪತೈದು ನಿಮಿಷಗಳ ಅವಧಿಯಲ್ಲಿ ಸಾಮೂಹಿಕ ಸ್ಪರ್ಧೆಯೂ ಅನಾವರಣಗೊಂಡಿತು.

ಸಾಮೂಹಿಕ ಸ್ಪರ್ಧೆಯಲ್ಲಿ ಹತ್ತು ಕಾಲೇಜುಗಳ ತಂಡಗಳು ಪಾಲ್ಗೊಂಡಿದ್ದವು. ಇಪ್ಪತೈದು ನಿಮಿಷಗಳ ಅವಧಿಯಲ್ಲಿ ಪ್ರತೀ ತಂಡವೂ ಪಾಡ್ದನ, ತುಳು ಜನಪದ ನೃತ್ಯ, ಒಂದು ಪ್ರಹಸನ ಮತ್ತು ಸ್ತಬ್ಧ ಚಿತ್ರವನ್ನು ಪ್ರದರ್ಶಿಸುವುದು ಕಡ್ಡಾಯವಾಗಿತ್ತು. ಇದರೊಂದಿಗೆ ತುಳು ಸಂಸ್ಕೃತಿಗೆ ಸಂಬಂಧಿಸಿದ ಇನ್ನಷ್ಟು ದೃಶ್ಯಗಳನ್ನು ಪ್ರದರ್ಶಿಸಲು ಅವಕಾಶವಿತ್ತು. ತುಳು ಸಂಸ್ಕೃತಿಯ ವೈಶಿಷ್ಟ್ಯವನ್ನು ಗಮನದಲ್ಲಿರಿಸಿಕೊಂಡು ನಿರೂಪಣೆ ಮಾಡುವವರಿಗೆಂದು ಒಂದು ಬಹುಮಾನವನ್ನು ಕಾದಿರಿಸಲಾಗಿತ್ತು. ಪ್ರದರ್ಶನದಲ್ಲಿ ಜನಪದ ಗೀತೆ ಹೊರತು ಇತರ ಚಲನಚಿತ್ರ ಗೀತೆಗಳ ಧ್ವನಿ ಸುರುಳಿ ಬಳಸಬಾರದು, ಭೂತದ ಕೋಲದಂತಿರುವ ಆಕ್ಷೇಪಾರ್ಹ ವಿಷಯಗಳನ್ನು ಪ್ರದರ್ಶಿಸಬಾರದು ಎಂಬ ನಿಬಂಧನೆಯನ್ನೂ ಸೂಚಿಸಲಾಗಿತ್ತು.ಪ್ರತಿಯೊಂದು ಕಾಲೇಜಿನ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಸಾಂಸ್ಕೃತಿಕ ವೈಭವವನ್ನು ಸಂಪನ್ನಗೊಳಿಸಿದರು. ತುಳು ಪಾಡªನ ಹೇಳುವ ಮಹಿಳೆ ತೆಂಬರೆ ಬಡಿಯುತ್ತ ಜನಪದದ ರಾಗದಲ್ಲೇ ಹಾಡಿ ತೆರೆಯ ಮರೆಗೆ ಸರಿಯುತ್ತಿರುವ ದೃಶ್ಯ ಪಾಡªನವನ್ನು ಯುವ ಜನಾಂಗ ಮನ ಮಾಡಿದರೆ ಉಳಿಸಕೊಳ್ಳಬಹುದೆಂಬ ಭರವಸೆ ಮೂಡಿಸಿತು. ಆದರೆ ಜನಪದ ನೃತ್ಯದ ಮಾತು ಬಂದಾಗ ಕಂಗೀಲು, ಕನ್ಯಾಪುವಿನಂತಹ ನೈಜ ವಿಧಾನಗಳನ್ನು ಕಣ್ಮುಂದೆ ತಂದ ತಂಡಗಳು ಕೆಲವು ಮಾತ್ರ. 

ಚೆನ್ನೆಮಣೆಯಾಟದಲ್ಲಿ ಜೀವ ಕಳೆದುಕೊಳ್ಳುವ ತುಳು ಜನಪದ ಕತೆಯ ಅಬ್ಬಗ – ದಾರಗ ಎಂಬ ಸಹೋದರಿಯರ ಪ್ರಸಂಗ ಕೆಲವರಿಗೆ ನಾಟಕಕ್ಕೆ ಉತ್ತಮ ವಸ್ತುವಾಗಿತ್ತು. ಹಾಗೆಯೇ ದೇವುಪೂಂಜ, ಕೋಟಿ ಚೆನ್ನಯರ ಕತೆಗಳಿಂದ ಭಿನ್ನವಾಗಿ ಆಧುನಿಕ ಬದುಕಿನ ನದಿ ತಿರುವಿನಂತಹ ಸಮಕಾಲೀನ ವಿಷಯಗಳನ್ನೂ ನೀನಾಸಂ ಶೈಲಿಯಲ್ಲಿ ಬಿತ್ತರಿಸಿದ ರೀತಿಯೂ ಮನೋಜ್ಞವಾಗಿತ್ತು. ವಿಶೇಷ ವಿಷಯವಾಗಿ ನಾಗನಿಗೆ ಹಾಲೆರೆಯುವುದು, ಬೀಸುಗಲ್ಲಿನಲ್ಲಿ ಹಿಟ್ಟು ತಯಾರಿಸುವುದು ಮುಂತಾದ ಜನಪದೀಯ ಬದುಕಿನ ಬಗೆಗಳು ಸಾಕಾರವಾದವು. ದೈವದ ಮಾತು ಬಂದಾಗ ಸಾಂಕೇತಿಕವಾಗಿ ಕಂಚಿನ ಮೊಗ ತೋರಿಸುವ ಪ್ರಯತ್ನ ಸೃಜನಶೀಲ ಮನಃಸ್ಥಿತಿಯನ್ನು ಉತ್ತಮವಾಗಿ ಪ್ರತಿಬಿಂಬಿಸಿತು.ಸ್ತಬ್ಧ ಚಿತ್ರ ವಿಭಾಗದಲ್ಲಿ ಹೆಚ್ಚಿನವರು ಉಳುವ ಕೋಣಗಳು, ನೊಗ, ನೇಗಿಲುಗಳು, ಭತ್ತದ ವ್ಯಸಾಯದಂತಹ ದೃಶ್ಯಗಳನ್ನು ತೋರಿಸಿ ತುಳು ಸಂಸ್ಕೃತಿಗೆ ಕನ್ನಡಿ ಹಿಡಿದರು. ಆದರೆ ಯಕ್ಷಗಾನ ವೇಷಗಳ ಕುಣಿತಕ್ಕೂ ಹಿನ್ನೆಲೆ ಹಾಡಿಗೂ ಸಂಬಂಧವಿಲ್ಲದೆ ಹೋದುದು, ಸ್ತಬ್ಧ ಚಿತ್ರಗಳಲ್ಲಿದ್ದ ವ್ಯಕ್ತಿಗಳು ಚಲನೆಯನ್ನು ತೋರುತ್ತಿದ್ದುದು ಮುಂತಾದ ನ್ಯೂನತೆಗಳು ಕಂಡುಬಂದವು. ಬಪ್ಪ ಬ್ಯಾರಿಯ ಟೋಪಿ ಬಿದ್ದು ಹೋದುದು, ಹುಲಿ ವೇಷದವರ ಮುಖವಾಡ ಪಾತ್ರಧಾರಿಯ ತಲೆಗಿಂತ ದೊಡ್ಡದಾಗಿ ಆಗಾಗ ಕಳಚುತ್ತಿದ್ದುದು ಕೂಡ ಒಂದಿಷ್ಟು ಆಭಾಸಕ್ಕೂ ಕಾರಣವಾಯಿತು. 

Advertisement

 ವಾಮದಪದವು ಸರಕಾರಿ ಕಾಲೇಜಿನ ತಂಡ ಮೊದಲ ಬಹುಮಾನ ಗಳಿಸಿತು. ಆಳ್ವಾಸ್‌ ಕಾಲೇಜಿನ ತಂಡ ದ್ವಿತೀಯ, ಸುಂಕದಕಟ್ಟೆ ಕಾಲೇಜು ತೃತೀಯ ಬಹುಮಾನ ಗಳಿಸಿದವು. ಪೊಂಪೈ ಕಾಲೇಜು ಸಮಾಧಾನಕರ ಪಾರಿತೋಷಕ ಪಡೆಯಿತು. 

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next