Advertisement

ತುಳುನಾಡ ಪೊರ್ಲು ಸೇವಾ ಟ್ರಸ್ಟ್‌: ಅಶ‌ಕ್ತರಿಗೆ ಆರ್ಥಿಕ ನೆರವು

08:38 PM Apr 29, 2019 | Sriram |

ಮೂಡುಬಿದಿರೆ: ತುಳುನಾಡ ಪೊರ್ಲು ಸೇವಾ ಟ್ರಸ್ಟ್‌ ವತಿಯಿಂದ ಅಶಕ್ತರಾಗಿರುವ ನಾಲ್ಕು ಕುಟುಂಬಗಳಿಗೆ ಒಟ್ಟು 80,000 ರೂ. ಆರ್ಥಿಕ ನೆರವನ್ನು ರವಿವಾರ ಪ್ರಸ್‌ಕ್ಲಬ್‌ನಲ್ಲಿ ನೀಡಲಾಯಿತು.

Advertisement

ಮೆದುಳು ಮತ್ತು ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ತಂಗಡಿ ಕಕ್ಕಿಂಜೆ ದೊರ್ತಾಡಿಕೊಪ್ಪ, ತೋಟತ್ತಾಡಿ ಹರೀಶ್‌ ಕುಲಾಲ್‌ ಭವಾನಿ ದಂಪತಿಯ ಮಕ್ಕಳಾದ ಲಾವಣ್ಯಾ ಮತ್ತು ತನ್ವಿತ್‌ ಅವರ ಚಿಕಿತ್ಸೆಗೆ, ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಗಂಜಿಮಠ ಬಡಗುಳಿಪಾಡಿ ಗಾಂಧಿನಗರ ಸಂಜೀವ ಪೂಜಾರಿ ಶೋಭಾ ದಂಪತಿಯ ಪುತ್ರ ಜಯರಾಮ್‌ ಮತ್ತು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬೆಳ್ತಂಗಡಿ ಗುಂಡೂರಿ ಪೆರ್ಲಾಪು ದಿ| ರಾಜು ದೇವಾಡಿಗರ ಪುತ್ರ ಪದ್ಮಪ್ರಸಾದ್‌ ಇವರಿಗೆ ಹಾಗೂ ಕ್ಯಾನ್ಸರ್‌ನಿಂದ ಮೃತಪಟ್ಟ ಕಾರ್ಕಳ ತಾ| ವಂಜಾರಕಟ್ಟೆ ದಾಸಂದಕಲ್ಲು ಗಗನ್‌ ಇವರ ಹೆತ್ತವರಿಗೆ ತಲಾ 20, 000 ರೂ. ನೆರವಿನ ಚೆಕ್‌ಗಳನ್ನು ಮೂಡುಬಿದಿರೆ ಪ್ರಸ್‌ಕ್ಲಬ್‌ನ ಅಧ್ಯಕ್ಷ ವೇಣುಗೋಪಾಲ್‌, ಸದಸ್ಯರಾದ ಅಶ್ರಫ್‌ ವಾಲ್ಪಾಡಿ, ಪ್ರೇಮಶ್ರೀ ಕಲ್ಲಬೆಟ್ಟು ಮತ್ತು ಬೆಳುವಾಯಿ ಸೀತಾರಾಮ ಆಚಾರ್ಯ ವಿತರಿಸಿದರು. ಟ್ರಸ್ಟ್‌ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next