Advertisement

ತುಳುನಾಡ ಹಬ್ಬ

10:44 AM Sep 08, 2018 | |

ತುಳುವರ ಚಾವಡಿ ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ, “ತುಳುವೆರೆ ಪರ್ಬ’ ನಡೆಯುತ್ತಿದೆ. ತುಳುಭಾಷಾ ಗೋಷ್ಠಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಉದ್ಘಾಟಿಸಲಿದ್ದಾರೆ. ಸಂಗೀತ ನಿರ್ದೇಶಕ ವಿ. ಮನೋಹರ್‌, ಜನಪದ ವಿದ್ವಾಂಸ ಡಾ.ಗಣನಾಥ ಎಕ್ಕಾರ್‌, ಡಾ.ಗಣೇಶ್‌ ಅಮೀನ್‌ ಸಂಕಮಾರ್‌, ಮುಕ್ತ ಟಿವಿ ಸಂಪಾದಕ ಶ್ರೀಕಾಂತ್‌ ಶೆಟ್ಟಿ ವಿಚಾರ ಮಂಡಿಸಲಿದ್ದಾರೆ. ಸಂಜೆ 4 ಗಂಟೆಗೆ, “ತುಳುನಾಡ್ದ್‌ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಸದ ಡಾ.ಎಂ.ವೀರಪ್ಪ ಮೊಯ್ಲಿ ಉದ್ಘಾಟಿಸಲಿದ್ದು, ಸಚಿವರಾದ ಡಾ.ಜಯಮಾಲ ಹಾಗೂ ಯು.ಟಿ. ಖಾದರ್‌, ಸಂಸದ ನಳಿನ್‌ ಕುಮಾರ್‌ ಕಟೀಲು, ಸಾಹಿತಿ ಡಾ.ಡಿ.ಕೆ.ಚೌಟ ಮುಂತಾದವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Advertisement

ತುಳು ಸಾಹಿತಿ ಸೀತಾರಾಮ ಕುಲಾಲ್‌, ಪತ್ರಕರ್ತೆ ವಿಜಯಲಕ್ಷ್ಮೀ ಶಿಬರೂರು, ಸಮಾಜಸೇವಕ ಹರೇಕಳ ಹಾಜಬ್ಬ “ತುಳುನಾಡ್‌ ಸಿರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಶೇಷ ಚೇತನ ವಿದ್ಯಾರ್ಥಿನಿ ಭಾಗ್ಯಶ್ರೀ, ವಿಶೇಷ ಚೇತನ ಚೆಸ್‌ ಆಟಗಾರ್ತಿ ಯಶಸ್ವಿ, ಡ್ಯಾನ್ಸ್‌ ಜೂನಿಯರ್‌ ಖ್ಯಾತಿಯ ದೀಕ್ಷಾ ರೈಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ 8.30ರವರೆಗೆ ತುಳುನಾಡಿನ ವಿವಿಧ ಸಾಂಸ್ಕೃತಿಕ
ಕಾರ್ಯಕ್ರಮಗಳು ಜರುಗಲಿವೆ. 

 ಎಲ್ಲಿ?:ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ
 ಯಾವಾಗ?: ಸೆ. 9, ಭಾನುವಾರ ಬೆ.10

Advertisement

Udayavani is now on Telegram. Click here to join our channel and stay updated with the latest news.

Next