Advertisement
ಶನಿವಾರ ನಗರದ ತುಳು ಭವನ ದಲ್ಲಿ ಅಕಾಡೆಮಿಯ ವತಿಯಿಂದ ಆಯೋಜಿಸಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತೃತೀಯ ಭಾಷೆಯಾಗಿ ತುಳು ಪಠ್ಯ ಅನುಷ್ಠಾನ ಕುರಿತು ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಂವಾದ ಕಾರ್ಯ ಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ತುಳು ಭಾಷೆಯ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ 8 ಉಪ ಸಮಿತಿಗಳನ್ನು ರಚಿಸಲಾಗಿದೆ. ಶಾಲೆ ಗಳಲ್ಲಿ ತುಳು ಪಠ್ಯದ ಆರಂಭಕ್ಕೆ ಮುಖ್ಯ ಶಿಕ್ಷಕರ ಮನವೊಲಿಸುವ ಕಾರ್ಯದಲ್ಲಿ ತುಳುಪರ ಸಂಘಟನೆ ಗಳು ಸಹಕಾರ ನೀಡಬೇಕಿದೆ ಎಂದರು.
ತುಳುಕೂಟದ ಅಧ್ಯಕ್ಷ ದಾಮೋದರ ನಿಸರ್ಗ ಅವರು, ಶಾಲೆಗಳಲ್ಲಿ ವಿದ್ಯಾರ್ಥಿ ಗಳಿಗೆ ತುಳು ಕಲಿಯಲು ಆಸಕ್ತಿ ಇದ್ದರೂ, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ನಿರ್ಲಕ್ಷé ವಹಿಸುತ್ತಿದೆ. ಹೀಗಾಗಿ ತುಳು ಸಂಘಟನೆಗಳ ಸಹಕಾರದಿಂದ ಅಕಾ ಡೆಮಿಯು ಶಾಲೆಗಳನ್ನು ಸಂಪರ್ಕಿಸಿ ಮನವೊಲಿಸುವ ಅಭಿಯಾನ ನಡೆಸಬೇಕಿದೆ ಎಂದು ಸಲಹೆ ನೀಡಿದರು. ಹೀಗೆ ವಿವಿಧ ಸಂಘಟನೆಗಳ ಪ್ರಮುಖರು ಅಭಿ ಪ್ರಾಯ ವ್ಯಕ್ತಪಡಿಸಿದರು. ಪ್ರಸ್ತಾವನೆಗೈದ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ಸರಕಾರವು 2010ರಲ್ಲಿ ತುಳು ಪಠ್ಯಕ್ಕೆ ಅವಕಾಶ ನೀಡಿದ್ದು, ಪ್ರಸ್ತುತ ಉಭಯ ಜಿಲ್ಲೆಗಳ 35 ಶಾಲೆಗಳಲ್ಲಿ ತುಳು ಕಲಿಸಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕೇವಲ 2 ಶಾಲೆಗಳಲ್ಲಿ ಮಾತ್ರ ತುಳು ಪಠ್ಯವಿದೆ. ಒಟ್ಟು 3 ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ತುಳು ಕಲಿಸಲಾಗುತ್ತಿದೆ. ಕಳೆದ ಸಾಲಿನ ಎಸೆಸೆಲ್ಸಿ ತುಳು ವಿಷಯದಲ್ಲಿ ಪರೀಕ್ಷೆ ಬರೆದ 283ರಲ್ಲಿ 42 ಮಂದಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಹೀಗಾಗಿ ಹೆಚ್ಚು ಅಂಕ ಗಳಿಕೆಗೆ ಇಲ್ಲಿ ಅವಕಾಶವಿದೆ ಎಂದರು.
Related Articles
Advertisement
ಮನವೊಲಿಸುವ ನಿರ್ಣಯ ತುಳು ಪಠ್ಯವನ್ನು ಹೆಚ್ಚು ಶಾಲೆಗಳಲ್ಲಿ ಅಳವಡಿಸುವ ನಿಟ್ಟಿನಲ್ಲಿ ತುಳು ಅಕಾಡೆಮಿ, ಉಪ ಸಮಿತಿ ಹಾಗೂ ತುಳುಪರ ಸಂಘಟನೆಗಳ ಪ್ರಮುಖರ ನಿಯೋಗ ಶಿಕ್ಷಣ ಇಲಾಖೆಯ ಡಿಡಿಪಿಐ ಅವರ ಸಹಕಾರದೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕೆಲ ವೊಂದು ಶಾಲೆಗಳಿಗೆ ಭೇಟಿ ನೀಡಿ ಮುಖ್ಯ ಶಿಕ್ಷಕರು ಹಾಗೂ ಆಡಳಿತ ಸಮಿತಿಯ ಮನವೊಲಿಸುವ ಕಾರ್ಯ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.