Advertisement

ಸಿಟಿ ಬಸ್‌ನಲ್ಲಿ ತುಳು ಲಿಪಿ !

08:41 PM Jan 08, 2020 | mahesh |

ಮಹಾನಗರ: ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂದು ತುಳುನಾಡಿಗರದ್ದು, ಹಲವು ವರ್ಷಗಳ ಬೇಡಿಕೆ. ಈ ನಿಟ್ಟಿನಲ್ಲಿ ಇದೀಗ ನಗರದಲ್ಲಿ ಓಡುವ ಸಿಟಿ ಬಸ್ಸೊಂದರಲ್ಲಿಯೂ ಬೆಂಬಲ ವ್ಯಕ್ತವಾಗಿದ್ದು, ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿಬರುತ್ತಿದೆ. ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರ ಮಾಲಕತ್ವದ ಗಣೇಶ್‌ ಪ್ರಸಾದ್‌ (ರೂಟ್‌ ನಂ: 27 ) ಎಂಬ ಬಸ್‌ ಇದೀಗ ಫೇಮಸ್‌ ಆಗಿದೆ.

Advertisement

ತುಳು ಲಿಪಿ
ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಿಂದ ಅತ್ತಾವರ ಮುಖೇನ ಮಂಗಳಾದೇವಿಗೆ ತೆರಳುವ ಈ ಬಸ್‌ಗೆ ಪೈಂಟಿಂಗ್‌ ಮಾಡುವ ಸಮಯದಲ್ಲಿ ಬಸ್‌ನ ಎರಡೂ ಬದಿಗಳಲ್ಲಿ ಬಸ್‌ನ ಹೆಸರು ಅಥವಾ ರೂಟ್‌ ಬರೆಯುವ ಬದಲಿಗೆ ಅ ದಿಂದ ಅಃ ವರೆಗಿನ ತುಳು ಲಿಪಿ ಬರೆದು, ಪಕ್ಕದಲ್ಲಿಯೇ ಹ್ಯಾಶ್‌ ಟ್ಯಾಗ್‌ ಮುಖೇನ #TuluTo8thSchedule #TuluofficiallnKA_KL ಎಂದು ಬರೆಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಕೆಲವು ದಿನಗಳಿಂದ ಈ ಪೈಂಟಿಂಗ್‌ ಮಾಡಲಾಗಿದ್ದು, ಸದ್ಯ ಪೂರ್ಣಗೊಂಡಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಬಸ್‌ ಖ್ಯಾತಿ ಪಡೆಯುತ್ತಿದೆ. ಮಂಗಳೂರಿನ ಈ ಬಸ್‌ನ ಬಗ್ಗೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ದಿಲ್‌ರಾಜ್‌ ಆಳ್ವ ಅವರ ಬಳಿ ಸದ್ಯ ಐದು ಸಿಟಿ ಬಸ್‌ ಇದ್ದು, ತಮ್ಮ ಮಾಲಕತ್ವದ ಬಸ್‌ಗಳಿಗೆ ಈ ಹಿಂದೆಯೂ ವಿಶೇಷ ಪರಿಕಲ್ಪನೆಯಲ್ಲಿ ಪೈಂಟಿಂಗ್‌ ಮಾಡಿದ್ದರು.

“ಸ್ವಚ್ಛ ಭಾರತ’, “ಸೇವ್‌ ವಾಟರ್‌’ ಸಹಿತ ವಿವಿಧ ಪರಿಕಲ್ಪನೆಯಡಿಯಲ್ಲಿ ಈ ಹಿಂದೆಯೂ ಬಸ್‌ಗಳಲ್ಲಿ ಪೈಂಟಿಂಗ್‌ ಮೂಡಿ ಬಂದಿತ್ತು. ಇದೀಗ ತುಳು ಭಾಷೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ರೀತಿ ಬರೆಸಲಾಗಿದೆ. ಇದರೊಂದಿಗೆ ತುಳು ಭಾಷೆಗೆ ಅಧಿಕೃತ ಸ್ಥಾನಮಾನಕ್ಕೆ ಬೆಂಬಲ ನೀಡಿದಂತಾಗಿದೆ.

ತುಳು ಭಾಷೆಗೆ ಬೆಂಬಲ
ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು. ಜತೆಗೆ ಜನತೆಗೆ ತುಳು ಲಿಪಿಯ ಪರಿಚಯವಾಗಬೇಕು. ಅದೇ ಕಾರಣಕ್ಕೆ ಬಸ್‌ನಲ್ಲಿ ಈ ರೀತಿ ಬರೆಸಲಾಗಿದೆ. ಈ ಹಿಂದೆ ನೀರಿನ ಮಹತ್ವ ಸಾರುವ ಬರಹ, ಸ್ವಚ್ಛ ಭಾರತ ಬರಹಗಳನ್ನು ಬರೆಸಲಾಗಿತ್ತು. ಬುಧವಾರದಿಂದ ಈ ಬಸ್‌ ಸ್ಟೇಟ್‌ಬ್ಯಾಂಕ್‌ನಿಂದ ಮಂಗಳಾದೇವಿ ಮಾರ್ಗದಲ್ಲಿ ಸಂಚಾರ ಆರಂಭಿಸಿದೆ.
 - ದಿಲ್‌ರಾಜ್‌ ಆಳ್ವ, ಬಸ್‌ ಮಾಲಕರು

Advertisement

Udayavani is now on Telegram. Click here to join our channel and stay updated with the latest news.

Next