Advertisement

ತುಳು ಸತ್ಸಂಗಕ್ಕೆ  ಸುಬ್ರಹ್ಮಣ್ಯ ಶ್ರೀಗಳಿಂದ ಚಾಲನೆ

05:20 PM Dec 25, 2018 | Team Udayavani |

ಮುಂಬಯಿ: ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಭಕ್ತಾದಿಗಳು ಮತ್ತು ದೈವಜ್ಞ ವಿದ್ವಾನ್‌ ಹೆರ್ಗ ರವೀಂದ್ರ ಭಟ್‌ ಇವರ ಸಂಯೋಜನೆ ಮತ್ತು ಪರಿಕಲ್ಪನೆಯಲ್ಲಿ ರವಿವಾರ ಸಂಜೆ ಮಾಟುಂಗಾದಲ್ಲಿನ ಮೈಸೂರು ಅಸೋಸಿಯೇಶನ್‌  ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ತುಳು ಸತ್ಸಂಗ ಕಾರ್ಯಕ್ರಮಕ್ಕೆ ಜಗದ್ಗುರು ಶ್ರೀ ಮಧ್ವಾÌಚಾರ್ಯ ಮಹಾಸಂಸ್ಥಾನಂ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಸುಬ್ರಹ್ಮಣ್ಯ ಇದರ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ ಚಾಲನೆಯನ್ನಿತ್ತ‌ರು.

Advertisement

ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿ ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ್‌ ಯು. ದೇವಾಡಿಗ, ಲೋಣಾವಲ ನಗರ ಪರಿಷತ್‌ನ ಉಪಾಧ್ಯಕ್ಷ ನಿಟ್ಟೆ ನಡಿಮನೆ ಶ್ರೀಧರ್‌ ಎಸ್‌. ಪೂಜಾರಿ,  ಬಂಟ್ಸ್‌ ಸಂಘ ಮುಂಬಯಿ ಸಂಚಾಲಕತ್ವದ ಎಸ್‌.ಎಂ. ಶೆಟ್ಟಿ ಕಾಲೇಜ್‌ ಪೊವಾಯಿ ಇದರ ಪ್ರಾಂಶುಪಾಲ ಶ್ರೀಧರ್‌ ಎಸ್‌.ಶೆಟ್ಟಿ, ಶ್ರೀ ಅಂಬಿಕಾ ದೇವಸ್ಥಾನ ವಿದ್ಯಾವಿಹಾರ್‌ನ ಪ್ರಧಾನ ಅರ್ಚಕ ವೇ| ಮೂ| ಪೆರ್ಣಂಕಿಲ ಹರಿದಾಸ ಭಟ್‌, ರಾಷ್ಟ್ರಪತಿ ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ, ಸಾಹಿತ್ಯ ಬಳಗ ಮುಂಬಯಿ ಇದರ ಅಧ್ಯಕ್ಷ ಎಚ್‌.ಬಿ.ಎಲ್‌. ರಾವ್‌ ಮತ್ತು ಹಿರಿಯ ಹೊಟೇಲು ಉದ್ಯಮಿ ಶಿವರಾಮ ಜಿ. ಶೆಟ್ಟಿ ಅಜೆಕಾರು, ಹೆರ್ಗ ರವೀಂದ್ರ ಭಟ್‌, ವಾಸುದೇವ ಭಟ್‌ ಪೆರಂಪಳ್ಳಿ, ಶ್ರೀ ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆ (ಚೆಂಬೂರು) ವ್ಯವಸ್ಥಾಪಕ ವಿಷ್ಣು ಕಾರಂತ್‌  ಉಪಸ್ಥಿತರಿದ್ದರು. 

ಚಿತ್ರ-ವರದಿ:ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next