Advertisement

ತುಳು ಸಂಘ ಬರೋಡಾ ವತಿಯಿಂದ 31ನೇ ವಾರ್ಷಿಕ ಬಿಸುಪರ್ಬ

03:45 PM Apr 18, 2018 | |

ಬರೋಡಾ: ತುಳು ಸಂಘ ಬರೋಡಾದ ಮಹಿಳಾ ವಿಭಾಗವು ಇಂದು ಆಯೋಜಿಸಿರುವ ವೈಶಿಷ್ಟéಪೂರ್ಣ ಬಿಸು ಕಣಿ ದರ್ಶನ ಕಾರ್ಯಕ್ರಮ ಕಂಡು ಮನಸ್ಸಿಗೆ ಬಹಳ ಸಂತೋಷವಾಯಿತು. ನಾಡಿನ ಸಂಸ್ಕೃತಿ- ಸಂಸ್ಕಾರಗಳು ಇಂದು ಮರೆಯಾಗುತ್ತಿರುವ ಸಂದರ್ಭದಲ್ಲಿ ಇಲ್ಲಿನ ತುಳು-ಕನ್ನಡಿಗ ಮಹಿಳೆ ಯರು ಸಂಘಟಿತರಾಗಿ ಬಿಸುಹಬ್ಬವನ್ನು ಹಿಂದಿನ ಪರಂಪರೆಯಂತೆ ಆಚರಿಸಿ ಯುವ ಪೀಳಿಗೆಗೆ ಇದರ ಬಗ್ಗೆ ಅರಿವು ಮೂಡಿಸಿರುವುದು ಅಭಿನಂದನೀಯ. ದೂರದ ಗುಜರಾತಿನಲ್ಲಿ ನೆಲೆನಿಂತ ತುಳು-ಕನ್ನಡಿಗರು ಕಳೆದ ಮೂವತ್ತು ವರ್ಷಗಳಿಂದ ತಪಸ್ಸಿನಂತೆ ಬಹಳ ಸಡಗರದಿಂದ ಸಂಭ್ರಮವನ್ನು ಆಚರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ. ಸಂಸ್ಕೃತಿ, ಪರಂಪರೆಯನ್ನು ಉಳಿಸಿ-ಬೆಳೆಸುವ ಒಂದು ದೊಡ್ಡ ರಚನಾತ್ಮಕ ಯಜ್ಞ ಇದಾಗಿದೆ ಎಂದು ಮುಂಬಯಿ ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಇವರು ಅಭಿಪ್ರಾಯಿಸಿದರು.

Advertisement

ಎ. 14ರಂದು ತುಳು ಸಂಘ ಬರೋಡಾ ಇದರ ಮಹಿಳಾ ವಿಭಾಗದ ವತಿಯಿಂದ ಸಂಘ ತುಳು ಚಾವಡಿ ಸಭಾಗೃಹದಲ್ಲಿ ನಡೆದ 31ನೇ ವಾರ್ಷಿಕ ಬಿಸುಪರ್ಬ ಸಂಭ್ರಮವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಇವರು, ಹೆಣ್ಮಕ್ಕಳಿಗೆ ತವರು ಮನೆಯ ಯಾವ ಸುಖ, ಭೋಗಗಳು ಬೇಡ ಎಂದು ಅವರು ತಿಳಿಸಿದರು.

ಆದ್ದರಿಂದ ಪೋಷಕರು ಎಂತಹ ಕಷ್ಟದಲ್ಲಿದ್ದರೂ ಕೂಡಾ ತಮ್ಮ ಹೆಣ್ಮಕ್ಕಳಿಗೆ ಗುಣಮಟ್ಟದ ಉನ್ನತ ಶಿಕ್ಷಣವನ್ನು ನೀಡುವ ಪಣ ತೊಡಬೇಕು. ಪಾಲಕರು ತಮ್ಮ ಈ ಹೊಣೆಗಾರಿಕೆಯಿಂದ ಯಾವ ಕಾರಣದಿಂದಲೂ ತಪ್ಪಿಸಿಕೊಳ್ಳಬಾರದು ಎಂದು ನಾನು ಕಳಕಳಿಯಿಂದ ಸೆರಗೊಡ್ಡಿ ಬೇಡಿ ಕೊಳ್ಳುತ್ತೇನೆ ಎಂದು ನುಡಿದು ಎಲ್ಲರಿಗೂ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘ ಮಹಿಳಾ ವಿಭಾಗದ ಹಿರಿಯರಾದ ವಿನೋದಾ ಸುಧಾಕರ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಜಯಶ್ರೀ ಜಿನ ರಾಜ್‌ ಪೂಜಾರಿ, ತುಳು ಸಂಘ ಬರೋಡಾ ಮಹಿಳಾ ವಿಭಾಗದ ಅಧ್ಯಕ್ಷೆ ಶರ್ಮಿಳಾ ಮಹಾ ವೀರ್‌ ಜೈನ್‌ ಮತ್ತು ಕಾರ್ಯದರ್ಶಿ ಮಂಜುಳಾ ಗೌಡ ಇವರು ಉಪಸ್ಥಿತರಿದ್ದರು.

ಆರಂಭದಲ್ಲಿ ಅತಿಥಿ-ಗಣ್ಯರನ್ನು ಚೆಂಡೆ- ಮದ್ದಳೆ, ಕೊಂಬು-ವಾದ್ಯಗಳೊಂದಿಗೆ ಸಾಂಪ್ರದಾಯಿಕರಾಗಿ ಸ್ವಾಗತಿಸಿ ವೇದಿಕೆಗೆ ಆಹ್ವಾನಿಸಲಾಯಿತು. ಇದೇ ಸಂದರ್ಭದಲ್ಲಿ ಡಾ| ಪೂರ್ಣಿಮಾ ಎಸ್‌. ಶೆಟ್ಟಿ ಇವರ ಮಹಾಪ್ರಬಂಧ ಮುಂಬಯಿ ಕನ್ನಡಿಗರ ಸಿದ್ಧಿ-ಸಾಧನೆಗಳು ಕೃತಿಯನ್ನು ತುಳು ಸಂಘದ ಮಾಜಿ ಅಧ್ಯಕ್ಷೆ ಕುಸುಮಾ ಜಯರಾಮ ಶೆಟ್ಟಿ ಇವರು ಬಿಡು ಗಡೆಗೊಳಿಸಿ ಶುಭಹಾರೈಸಿದರು.

Advertisement

ಹಿರಿಯ ಲೇಖಕರಾದ ಎಸ್ಕೆ ಹಳೆಯಂಗಡಿ ಇವರು ಕೃತಿಯನ್ನು ಪರಿಚಯಿಸಿ ಮಾತನಾಡಿ, ಇದೊಂದು ಮುಂಬಯಿ ಕನ್ನಡಿಗರ ಎನ್‌ಸೈಕ್ಲೋ ಪಿಡಿಯಾ ಇದ್ದಂತೆ. ಇದನ್ನು ಅವಸರದಿಂದ ವಿಶ್ಲೇಷಿಸುವುದು ಲೇಖಕರಿಗೆ ದ್ರೋಹ ಬಗೆದಂತೆ. ನಮ್ಮ ಪೂರ್ವಜರು ಹೆಣ್ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡದೆ ದೊಡ್ಡ ಅನ್ಯಾಯವೆಸಗಿದ್ದಾರೆ. ಅಂದಿನಿಂದಲೇ ಅವರಿಗೆ ಸೂಕ್ತ ಶಿಕ್ಷಣ ನೀಡು ತ್ತಿದ್ದರೆ, ನಮ್ಮ ದೇಶದ ಭವಿಷ್ಯವೇ ಬದಲಾಗುತ್ತಿತ್ತು ಎಂದರು.

ಹಿರಿಯರಾದ ಎಸ್‌. ಜಯರಾಮ ಶೆಟ್ಟಿ, ಕಸ್ತೂರಿ ಶೆಟ್ಟಿ ಮೊದಲಾದವರು ಸಂದಭೋìಚಿತವಾಗಿ ಮಾತನಾಡಿ ಶುಭಹಾರೈಸಿದರು. ಶರ್ಮಿಳಾ ಜೈನ್‌ ಸ್ವಾಗತಿಸಿದರು. ಶಕುಂತಳಾ ಶೆಟ್ಟಿ ಇವರು ಅತಿಥಿಗಳನ್ನು ಪರಿಚಯಿಸಿದರು. 

ಮಂಜುಳಾ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಸವಿತಾ ಸೋಮನಾಥ್‌ ಪೂಜಾರಿ ವಂದಿಸಿದರು. ಕೊನೆಯಲ್ಲಿ ಮಹಾಪ್ರಸಾದ ವಿತರಣೆ ನಡೆಯಿತು. ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು-ಸದಸ್ಯೆಯರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next