Advertisement

Tulu Official Language: ರಾಜ್ಯದ ಅಧಿಕೃತ ಭಾಷೆಯಾಗಿ ತುಳು, ಕೊಡವ, ಲಂಬಾಣಿ

10:05 PM Jul 23, 2024 | Team Udayavani |

ಬೆಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮಾಡುವ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದ್ದು, ಇಲಾಖೆಯಿಂದ ವರದಿ ಪಡೆದ ಬಳಿಕ ಮುಂದಿನ ಕ್ರಮ ಜರುಗಿಸುವುದಾಗಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

Advertisement

ಕೊಡವ ಮತ್ತು ಲಂಬಾಣಿ ಭಾಷೆಗೂ ಇದೇ ರೀತಿಯ ಕ್ರಮ ಮಾನ್ಯತೆ ಒದಗಿಸಲು ಆಗ್ರಹವಿದ್ದು, ತುಳು, ಕೊಡವ ಹಾಗೂ ಲಂಬಾಣಿ ಮೂರೂ ಭಾಷೆಗಳ ಬಗ್ಗೆ ಕಾನೂನು ಇಲಾಖೆಯ ಅಭಿಪ್ರಾಯ ಬಂದ ಅನಂತರ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಮಂಗಳವಾರ ವಿಧಾನಸಭೆಯಲ್ಲಿ ಈ ಕುರಿತು ಗಮನ ಸೆಳೆದ ಕಾಂಗ್ರೆಸ್‌ನ ಅಶೋಕ್‌ ರೈ, ತುಳು ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, 1994ರಲ್ಲಿ ಕರ್ನಾಟಕದಲ್ಲಿ ತುಳು ಅಕಾಡೆಮಿ ಸ್ಥಾಪನೆಯಾಗಿದ್ದು, ಕಿನಂತರದ ವರ್ಷಗಳಲ್ಲಿ ಕೇರಳ ಸರಕಾರ ಕೂಡ ತುಳು ಅಕಾಡೆಮಿ ಸ್ಥಾಪಿಸಿದೆ. ಗೂಗಲ್‌ 110 ಭಾಷೆಗಳ ಭಾಷಾಂತರಕ್ಕೆ ಅವಕಾಶ ಕೊಟ್ಟಿದ್ದು, ಈ ಪೈಕಿ ತುಳು ಭಾಷೆ ಕೂಡ ಒಂದಾಗಿದೆ.

ಆಂಧ್ರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಲದಲ್ಲಿ ಎರಡು-ಮೂರು ಭಾಷೆಗಳನ್ನು ಆ ರಾಜ್ಯಗಳ ಅಧಿಕೃತ ಭಾಷೆಗಳನ್ನಾಗಿ ಮಾಡಿದೆ. ಶಾಸಕರ ತಂಡ ಸ್ವಂತ ಖರ್ಚಿನಲ್ಲಿ ಬಿಹಾರ ಹಾಗೂ ಪಶ್ಚಿಮ ಬಂಗಾಲಕ್ಕೆ ತೆರಳಿ ಅಧ್ಯಯನ ನಡೆಸಿ, ವರದಿ ಕೊಟ್ಟಿದ್ದೇವೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ತುಳು ಭಾಷೆಗೆ ಮಾನ್ಯತೆ ನೀಡಬೇಕು ಎಂದರು.

“ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆ ಮಾಡುವ ಬಗ್ಗೆ ಹಲವು ಬಾರಿ ಪ್ರಶ್ನೆ ಹಾಕಿದ್ದೇವೆ. ಈ ಹಿಂದೆ ಡಾ. ಮೋಹನ ಆಳ್ವಾ ನೇತೃತ್ವದ ಸಮಿತಿ ಕೂಡ ವರದಿ ಕೊಟ್ಟಿದ್ದು, ಅದನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. ಯು.ಟಿ. ಖಾದರ್‌ ಸ್ಪೀಕರ್‌ ಆಗಿರುವಾಗಲಾದರೂ ಇದು ಅನುಷ್ಠಾನಕ್ಕೆ ಬರಬೇಕು.” – ಡಿ. ವೇದವ್ಯಾಸ ಕಾಮತ್‌, ಮಂಗಳೂರು ನಗರ ಶಾಸಕ

Advertisement

“ತುಳು ಭಾಷೆಯ ಬಗ್ಗೆ ಎಲ್ಲರೂ ಪ್ರೀತಿ ವ್ಯಕ್ತಪಡಿಸುತ್ತಾರೆ. ಆದರೆ ಅದನ್ನು ರಾಜ್ಯ ಭಾಷೆಯನ್ನಾಗಿ ಮಾಡಲು ಬೇಕಿರುವುದು ಇಚ್ಛಾಶಕ್ತಿ. ಅದನ್ನು ಈ ಸರಕಾರವಾದರೂ ಪ್ರದರ್ಶಿಸಬೇಕು.” – ಗುರುರಾಜ್‌ ಗಂಟಿಹೊಳೆ, ಬೈಂದೂರು ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next