ಮುಂಬಯಿ: ತುಳುನಾಡ ಸೇವಾ ಸಮಾಜ ಮೀರಾ- ಭಾಯಂದರ್ ಇದರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಸಮ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜು. 22 ರಂದು ಅಪರಾಹ್ನ ಮೀರಾರೋಡ್ ಶೀತಲ್ ನಗರದ ಮಹಾರಾಜ ಬ್ಯಾಂಕ್ವೆಟ್ ಸಭಾಗೃಹದಲ್ಲಿ ಜರಗಿತು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಯುನೈಟೆಡ್ ರಬ್ಬರ್ ಇಂಡಸ್ಟಿÅàಸ್ ಇದರ ಮಾಲಕ ಅಜಿತ್ ರೈ ಅವರು ಮಾತನಾಡಿ, ಮುಗª ಮಕ್ಕಳ ಮೇಲೆ ಸ್ಪರ್ಧೆ ಎಂಬ ದಾಳಿ ಬೇಡ. ಇದರಿಂದ ಕೀಳರಿಮೆ ಉಂಟಾಗಿ ಮಾನಸಿಕ ಸ್ಥೈರ್ಯ ಕುಂದುತ್ತದೆ. ಗೊಂದಲದ ಗೂಡಾಗಿರುವ ಪುಟಾಣಿಗಳನ್ನು ಪ್ರೀತಿ, ವಾತ್ಸಲ್ಯದ ಹಾರೈಕೆಯೊಂದಿಗೆ ಬೆಳೆಸಬೇಕು. ಅಂಕಗಳು ಬದುಕಿನ ಮಾನದಂಡವಾಗಬಾರದು. ವಿದ್ಯಾರ್ಥಿಗಳ ಅಭಿರುಚಿಗೆ ತಕ್ಕಂತೆ ಪೂರಕ ವಾತಾವರಣವನ್ನು ಪಾಲಕರು ನಿರ್ಮಿಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಭಾಯಂದರ್ ಸಾಯಿ ಬಾಬಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಎನ್. ಎ. ಹೆಗ್ಡೆ ಇವರು ಮಾತನಾಡಿ, ಮಕ್ಕಳ ಕಲಾ ಸಂಸ್ಕೃತಿಗೆ ಮೆರುಗು ನೀಡುತ್ತಿರುವ ತುಳುನಾಡ ಸೇವಾ ಸಮಾಜದ ಶ್ರಮ ಅಭಿನಂದನೀಯ. ಡಾಕ್ಟರ್, ಎಂಜಿನೀಯರ್ ಎಂಬ ಒತ್ತಡವನ್ನು ಹೇರದೆ ಮಕ್ಕಳ ಮಾನಸಿಕ ನೆಮ್ಮದಿ ಮತ್ತು ಮನೋಸ್ಥೈರ್ಯವನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಚಲನಚಿತ್ರ ಮತ್ತು ರಂಗಭೂಮಿ ಕಲಾವಿದ ಜಿ. ಕೆ. ಕೆಂಚನಕೆರೆ, ಕರಾಟೆಪಟು ರಿಯಾ ಆರ್. ಶೆಟ್ಟಿ, ಸಂಘಟಕ ನವೀನ್ ಪೂಜಾರಿ ಅವರನ್ನು ವೇದಿಕೆಯ ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಮೀರಾ-ಭಾಯಂದರ್ ನಗರ ಪಾಲಿಕೆಯ ಸಭಾಪತಿ ಅರವಿಂದ ಶೆಟ್ಟಿ, ಉದ್ಯಮಿ ಭಾರತಿ ಮೋಹನ್ ಅಮೀನ್ ಮಾತನಾಡಿ ಶುಭಹಾರೈಸಿದರು. ತುಳುನಾಡ ಸೇವಾ ಸಂಘದ ಅಧ್ಯಕ್ಷ ಡಾ| ರವಿರಾಜ ಸುವರ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಧ್ಯೇಯೋದ್ಧೇಶಗಳನ್ನು ವಿವರಿಸಿದರು.
ಸಂಸ್ಥೆಯ ಗೌರವಾಧ್ಯಕ್ಷ ಶಂಭು ಕೆ. ಶೆಟ್ಟಿ, ಉಪಾಧ್ಯಕ್ಷರುಗಳಾದ ಧನಂಜಯ ಅಮೀನ್ ಹಾಗೂ ವಸಂತ ಶೆಟ್ಟಿ, ಧರ್ಮದರ್ಶಿ ಶೋಭಾ ಉಡುಪ, ಕೋಶಾಧಿಕಾರಿ ರವೀಂದ್ರ ಶೆಟ್ಟಿ ಸೂಡಾ, ರಾಜೇಶ್ ಶೆಟ್ಟಿ ಕಾಪು, ಮಂಜಯ್ಯ ಶೆಟ್ಟಿ, ನಾರಾಯಣ ಮೂಡಬಿದ್ರೆ, ಚಂದ್ರಹಾಸ ಶೆಟ್ಟಿ, ರವಿ ಶೆಟ್ಟಿ ಶೃಂಗೇರಿ, ಜಯಪ್ರಕಾಶ್ ಪೂಜಾರಿ, ಮಂಜುನಾಥ ಬಿ. ಕೆ., ಶೈಲೇಶ್ ಉದ್ಯಾವರ, ರಾಮಚಂದ್ರ ಉಚ್ಚಿಲ್, ಮಹಿಳಾ ವಿಭಾಗದ ಅಮಿತಾ ಶೆಟ್ಟಿ, ಕುಶಲಾ ಶೆಟ್ಟಿ, ರೋಹಿಣಿ ರೈ, ಪ್ರತೀಮಾ ಬಂಗೇರ, ಜಯಲಕ್ಷಿ¾à ಸುವರ್ಣ, ಸುಜಾತಾ ಕೋಟ್ಯಾನ್, ಸುನೀತಾ ಸುವರ್ಣ, ವಸಂತಿ ಶೆಟ್ಟಿ, ಶಾಲಿನಿ ಶೆಟ್ಟಿ, ರೇಖಾ ಪೂಜಾರಿ ಇವರು ಗೌರವಿಸಿದರು.
2017-2018 ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಸಿ ಮತ್ತು ಎಚ್‌ಎಸ್‌ಸಿ ಪರೀಕ್ಷೆಯಲ್ಲಿ ಶೇ. 85 ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಗೌರವಿಸಲಾಯಿತು. ಕಾರ್ಯಕ್ರಮವನ್ನು ನಟ ಜಿ. ಕೆ. ಕೆಂಚನಕೆರೆ ಮತ್ತು ವಾಣಿ ಶೆಟ್ಟಿ ಇವರು ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಹಿಳಾ ಸದಸ್ಯೆಯರಿಂದ ಅರ್ತಿದ ಪೂ ತುಳುನಾಟಕ, ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ ಹಾಗೂ ಗಣೇಶ್ ಎರ್ಮಾಳ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಚಿತ್ರ-ವರದಿ : ರಮೇಶ್ ಅಮೀನ್